Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೈದಾನದಲ್ಲೇ ಕುಸಿದು ಬಿದ್ದು ಕೋಲ್ಕತ್ತಾ ಯುವ ಕ್ರಿಕೆಟರ್ ಸೋನು ಸಾವು

Young Kolkata club cricketer dies after collapsing on-field

ಕೋಲ್ಕತ್ತಾ, ಮಾರ್ಚ್ 20: ಬುಧವಾರ (ಮಾರ್ಚ್ 20) ನಡೆದ ಸೌಹಾರ್ದ ಪಂದ್ಯದ ವೇಳೆ ಕೋಲ್ಕತ್ತಾದ ಯುವ ಕ್ಲಬ್ ಕ್ರಿಕೆಟರ್ ಮೈದಾನದಲ್ಲೇ ಕುಸಿದುಬಿದ್ದು ಮೃತರಾಗಿದ್ದಾರೆ. ಬ್ಯಾಲಿಗಂಜ್ ಸ್ಪೋರ್ಟಿಂಗ್ ಕ್ಲಬ್‌ನ 22ರ ಹರೆಯದ ಸೋನು ಯಾದವ್ ಮೃತ ಆಟಗಾರ.

ಕೋಲ್ಕತ್ತಾದ ಬಾಟಾ ಕ್ಲಬ್ ಗ್ರೌಂಡ್‌ನಲ್ಲಿ ನಡೆದ ಬೆಂಗಾಲ್ ಕ್ರಿಕೆಟ್ ಅಸೋಸಿಯೇಶನ್‌ನ ಸೆಕೆಂಡ್ ಡಿವಿಷನ್ ಲೀಗ್ ಸೌಹಾರ್ದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಮೈದಾನದಲ್ಲಿದ್ದವರ ಪ್ರಕಾರ, ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್‌ ಆಗಿದ್ದ ಸೋನು ಬ್ಯಾಟಿಂಗ್‌ ಮುಗಿಸಿ ಟೆಂಟ್‌ಗೆ ತೆರಳುತ್ತಿದ್ದವರು ಇದ್ದಕ್ಕಿದ್ಹಾಗೆ ಕುಸಿದುಬಿದ್ದರು.

ಮೈದಾನಕ್ಕುರುಳಿದ ಸೋನು ಯಾದವ್ ಅವರನ್ನು ತಕ್ಷಣ ಸ್ಥಳೀಯ ಎಸ್ಎಸ್‌ಕೆಎಂ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಆಟಗಾರ ಮೃತನಾಗಿರುವುದಾಗಿ ತಿಳಿಸಿದರು ಎಂದು ತಿಳಿದುಬಂದಿದೆ. ಕೆಲ ವರ್ಷಗಳ ಹಿಂದೆ ಮತ್ತೊಬ್ಬ ಕಿರಿಯ ಬೆಂಗಾಲ್ ಕ್ರಿಕೆಟಿಗ ಅಂಕಿತ್ ಶರ್ಮಾ ಕೂಡ ಪೈಕ್ಪರಾ ಮೈದಾನದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದರು.

Story first published: Wednesday, March 20, 2019, 18:28 [IST]
Other articles published on Mar 20, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+