ಕ್ವಾರಂಟೈನ್ ದಿನಗಳ ಕಳೆಯಲು ಉಪಾಯ ಮಾಡಿದ ಪಂತ್: ವಿಡಿಯೋ

ನವದೆಹಲಿ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದೂಡಲ್ಪಟ್ಟಿದೆ. ಕೋವಿಡ್-19 ಪಿಡುಗಿನ ಕಾರಣ ಉದ್ದೇಶಿತ ದೊಡ್ಡ ಲೀಗ್ ಅಮಾನತುಗೊಂಡಿತು. ಹೀಗಾಗಿ ಭಾರತೀಯ ತಂಡದ ಆಟಗಾರರೆಲ್ಲ ಅಂತಾರಾಷ್ಟ್ರೀಯ ಸರಣಿಗಾಗಿ ಸಿದ್ಧರಾಗುತ್ತಿದ್ದಾರೆ. ಸದ್ಯ ಅವರೆಲ್ಲ ಕ್ವಾರಂಟೈನ್ ಪಾಲಿಸುತ್ತಿದ್ದಾರೆ.
ಐಪಿಎಲ್ ಅರ್ಧಕ್ಕೆ ನಿಲುಗಡೆಯಾಗಿರುವುದರಿಂದ ಮುಂದೆ ಭಾರತೀಯ ಆಟಗಾರರಿಗೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವಿದೆ. ಜೊತೆಗೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಕೂಡ ಇದೆ. ಇದೇ ಕಾರಣಕ್ಕೆ ಭಾರತೀಯ ಆಟಗಾರರು ಕ್ವಾರಂಟೈನ್‌ನಲ್ಲಿದ್ದಾರೆ.
ಕ್ವಾರಂಟೈನ್ ಹೊತ್ತಿನಲ್ಲಿ ಹೆಚ್ಚಿನ ಕ್ರೀಡಾಪಟುಗಳು ನಿದ್ದೆ, ಗೇಮ್, ಮನರಂಜನೆ, ಸಿನಿಮಾ ವೀಕ್ಷಿಸುತ್ತ, ಸ್ನೇಹಿತರೊಂದಿಗೆ ದೂರವಾಣಿಯಲ್ಲಿ ಹರಟುತ್ತ ಕಳೆಯೋದಿದೆ. ಆದರೆ ಭಿನ್ನ ಸ್ವಭಾವದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಕ್ವಾರಂಟೈನ್ ವೇಳೆ ಬೇರೇನೋ ಮಾಡಿ ಗಮನ ಸೆಳೆದಿದ್ದಾರೆ.
ಟ್ವೀಟ್ ಮಾಡಿರುವ ಪಂತ್, ಎ ದಿಲ್ ಮಾಂಗೆ ಮೋವರ್. ಕಡ್ಡಾಯ ಕ್ವಾರಂಟೈನ್ ಬ್ರೇಕ್‌ನಲ್ಲಿದ್ದೇನೆ. ಆದರೂ ಇಂಡೋರ್‌ನಲ್ಲಿ ಏನೋ ಕೆಲಸದಲ್ಲಿ ಸಕ್ರಿಯನಾಗಿ ಖುಷಿಯಾಗಿದ್ದೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ' ಎಂದು ಬರೆದುಕೊಂಡು ತಾನು ಹುಲ್ಲು ಮತ್ತು ಕಳೆ ಕತ್ತರಿಸುವ ಯಂತ್ರ ಚಲಾಯಿಸುತ್ತಿರುವ ವಿಡಿಯೋ ಹಾಕಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications