Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಷೇಕ್ ಶರ್ಮಾ ದಾಖಲೆ ಅಳಿಸಿ ಹಾಕಿದ ವೈಭವ್ ಸೂರ್ಯವಂಶಿ

ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಆವೃತ್ತಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ತಮ್ಮ ಸ್ಥಿರ ಬ್ಯಾಟಿಂಗ್ ಮುಂದುವರೆಸಿದ ವೈಭವ್ ಅಬ್ಬರಿಸಿದರು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ವೈಭವ್‌ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಇವರು ಐಪಿಎಲ್‌ನಲ್ಲಿ ದೊಡ್ಡ ದಾಖಲೆ ಬರೆದರು.

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 48 ರನ್‌ ಸಿಡಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್‌ 219 ಆಗಿತ್ತು. ಈ ಇನಿಂಗ್ಸ್‌ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್‌ ಇತಿಹಾಸದಲ್ಲಿ ದೊಡ್ಡ ದಾಖಲೆ ಬರೆದರು.

Vaibhav Sooryavanshi

15 ವರ್ಷದ ವೈಭವ್ ಸೂರ್ಯವಂಶಿ, ವಿಶ್ವದ ಸ್ಟಾರ್ ಬೌಲರ್‌ಗಳ ವಿರುದ್ಧ ಧೈರ್ಯದಿಂದ ಬ್ಯಾಟಿಂಗ್ ನಡೆಸಿದರು. ಈ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದ ವೈಭವ್ ದೊಡ್ಡ ದಾಖಲೆಯನ್ನು ಬರೆದರು. ಐಪಿಎಲ್‌ನಲ್ಲಿ ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಆಟಗಾರರಾದರು. ಇದಕ್ಕೂ ಮೊದಲು ಈ ದಾಖಲೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ 2024ರ ಐಪಿಎಲ್‌ ಆವೃತ್ತಿಯಲ್ಲಿ 42 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈಗ ಈ ದಾಖಲೆಗೆ ವೈಭವ್ ಸೂರ್ಯವಂಶಿ ತಮ್ಮ ಹೆಸರನ್ನು ನಮೂದಿಸಿದ್ದಾರೆ.

ಒಂದೇ ಆವೃತ್ತಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್

ವೈಭವ್ ಸೂರ್ಯವಂಶಿ, 43* ಸಿಕ್ಸರ್‌ (2026)
ಅಭಿಷೇಕ್ ಶರ್ಮಾ, 42 ಸಿಕ್ಸರ್‌ (2024)
ಶ್ರೇಯಸ್ ಅಯ್ಯರ್, 39 ಸಿಕ್ಸರ್‌ (2025)
ವಿರಾಟ್ ಕೊಹ್ಲಿ, 38 ಸಿಕ್ಸರ್‌ (2016)
ವಿರಾಟ್ ಕೊಹ್ಲಿ, 38 ಸಿಕ್ಸರ್‌ (2024)
ಸೂರ್ಯಕುಮಾರ್ ಯಾದವ್, 38 ಸಿಕ್ಸರ್‌ (2025)

ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಹೆಗ್ಗಳಿಕೆ ವೆಸ್ಟ್‌ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್‌ ಗೇಲ್ ಅವರಿಗೆ ಸಲ್ಲುತ್ತದೆ. ಇವರು 2012ರ ಆವೃತ್ತಿಯಲ್ಲಿ ಒಟ್ಟು 59 ಸಿಕ್ಸರ್‌ಗಳನ್ನು ಬಾರಿಸಿದ್ದರು. ಒಟ್ಟಾರೆ ಆಟಗಾರರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಈಗ ಆರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ವಿಂಡೀಸ್ ತಂಡದವರೇ ಆದ ಆಂಡ್ರೆ ರಸೆಲ್ ಇದ್ದು, ಇವರು 2019ರ ಆವೃತ್ತಿಯ ಐಪಿಎಲ್‌ನಲ್ಲಿ 52 ಸಿಕ್ಸರ್ ಬಾರಿಸಿದ್ದಾರೆ.

ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರು

ಕ್ರಿಸ್ ಗೇಲ್, 59 ಸಿಕ್ಸರ್‌ (2012)
ಆಂಡ್ರೆ ರಸೆಲ್, 52 ಸಿಕ್ಸರ್‌ (2019)
ಕ್ರಿಸ್ ಗೇಲ್, 51 ಸಿಕ್ಸರ್‌ (2013)
ಜೋಸ್ ಬಟ್ಲರ್, 45 ಸಿಕ್ಸರ್‌ (2022)
ಕ್ರಿಸ್ ಗೇಲ್, 44 ಸಿಕ್ಸರ್‌ (2011)
ವೈಭವ್ ಸೂರ್ಯವಂಶಿ, 43* ಸಿಕ್ಸರ್‌ (2026)

Story first published: Sunday, May 17, 2026, 22:14 [IST]
Other articles published on May 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+