For Quick Alerts
ALLOW NOTIFICATIONS  
For Daily Alerts
 

ವೈಭವ್ ಸೂರ್ಯವಂಶಿ ಬಾರಿಸಿದ ಸಿಕ್ಸರ್‌ನಿಂದ ರಾಜಸ್ಥಾನಕ್ಕೆ ನಷ್ಟ

ವೈಭವ್ ಸೂರ್ಯವಂಶಿ.. ಸದ್ಯ ಕ್ರಿಕೆಟ್‌ ರಂಗದಲ್ಲಿ ಅತಿ ಪ್ರಚಲಿತ ಇರುವ ಹೆಸರುಗಳಲ್ಲಿ ಒಂದು. ತಮ್ಮ 14ನೇ ವಯಸ್ಸಿನಲ್ಲಿ ಬಿಹಾರದ ಪೋರ ಆಡುವ ಬ್ಯಾಟಿಂಗ್‌ಗೆ ದೇಶವೇ ಫಿದಾ ಆಗಿದೆ. ವಿಶ್ವದ ಸ್ಟಾರ್ ಆಟಗಾರರನ್ನು ಸಹ ಪ್ಲೇಯರ್ ದಂಡಿಸದೇ ಬಿಡುವುದಿಲ್ಲ. ಇತ್ತೀಚಿಗೆ ನಡೆದ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತದ ಪರ ಬ್ಯಾಟ್ ಮಾಡಿ ಇವರು ಸುದ್ದಿಯಲ್ಲಿದ್ದರು. ಅಲ್ಲದೆ ಈ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಸಹ ಪಡೆದಿದ್ದರು.

ಅಂಡರ್ 19 ವಿಶ್ವಕಪ್ ಮುಗಿದ ಬಳಿಕವೂ ವೈಭವ್ ಸೂರ್ಯವಂಶಿ ಸುದ್ದಿಯ ಕೇಂದ್ರ ಬಿಂದು ಆಗಿದ್ದರು. ಇವರು ಈ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಬಗ್ಗೆ ಬಿಸಿಬಿಸಿ ಚರ್ಚೆಗಳು ಅರಂಭವಾದವು. ಈ ಸುದ್ದಿ ಬರುತ್ತಿದ್ದಂತೆ ವೈಭವ್ ಸೂರ್ಯವಂಶಿ ಅವರ ಕುಟುಂಬಸ್ಥರು ಈ ಬಾರಿ ವೈಭವ್ ಸೂರ್ಯವಂಶಿ 10ನೇ ತರಗತಿಯ ಪರೀಕ್ಷೆಗಳನ್ನು ಬರೆಯುವುದಿಲ್ಲ ಎಂದು ಹೇಳಿ ಸುದ್ದಿಯಾಗಿದ್ದರು. ಈಗ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡಿ ಸುದ್ದಿಯಾಗಿದ್ದು, ಐಪಿಎಲ್‌ನಲ್ಲಿ ತಮ್ಮದೇ ಪ್ರಾಂಚೈಸಿ ರಾಜಸ್ಥಾನ ರಾಯಲ್ಸ್‌ ಅವರಿಗೆ ವೈಭವ್ ನಷ್ಟ ಮಾಡಿದ್ದಾರೆ. ರಾಜಸ್ಥಾನಕ್ಕೆ ವೈಭವ್ ನಷ್ಟ ಮಾಡಿದ್ದು ಹೇಗೆ? ಆಗಿದ್ದೇನು? ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

young star Vaibhav Suryavanshi

ಇನ್ನೇನು ಕೆಲವೇ ದಿನಗಳಲ್ಲಿ 19ನೇ ಆವೃತ್ತಿಯ ಐಪಿಎಲ್ ಆರಂಭವಾಗಬೇಕಿದೆ. ಇದಕ್ಕಾಗಿ ಎಲ್ಲ ತಂಡಗಳು ಈಗಾಗಲೇ ಅಭ್ಯಾಸವನ್ನು ನಡೆಸಿವೆ. ರಾಜಸ್ಥಾನ ರಾಯಲ್ಸ್ ಸಹ ಈ ಲೀಗ್‌ಗಾಗಿ ಅಭ್ಯಾಸ ಕ್ಯಾಂಪ್ ಆರಂಭಿಸಿದೆ. ಇದೇ ವೇಳೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ವೈಭವ್ ಸೂರ್ಯವಂಶಿ ತಮ್ಮ ಫ್ರಾಂಚೈಸಿಗೆ ನಷ್ಟ ಮಾಡುವ ಕೆಲಸವನ್ನು ಮಾಡಿದ್ದಾರೆ.

ಆಗಿದ್ದೇನು?

ರಾಜಸ್ಥಾನ ರಾಯಲ್ಸ್ ತಂಡ ಈಗಾಗಲೇ ಮೈದಾನದಲ್ಲಿ ಅಭ್ಯಾಸ ನಡೆಸಿದೆ. ಈ ವೇಳೆ ವೈಭವ್ ಸೂರ್ಯವಂಶಿ ಅವರು ಭರ್ಜರಿ ಹೊಡೆತಗಳನ್ನು ಪ್ರಯೋಗಿಸಿದ್ದಾರೆ. ಇವರು ಬಾರಿಸಿದ ಒಂದು ಹೊಡೆತ ನೇರವಾಗಿ ಮೈದಾನದಲ್ಲಿ ಸಂಪೈ ಮಾಡುವ ನೀರಿನ ಪೈಪ್‌ಗೆ ಬಿದ್ದಿದೆ. ಚೆಂಡಿನ ಫೋರ್ಸ್‌ಗೆ ಪೈಪ್ ಲೈನ್‌ ಒಡೆಯಿತು. ಕ್ಷಣಾರ್ಧದಲ್ಲಿ ನೀರು ಹರಿಯಲು ಆರಂಭವಾಯಿತು. ಈ ಘಟನೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ವೈಭವ್ ಸೂರ್ಯವಂಶಿ ಈಗಾಗಲೇ ಐಪಿಎಲ್ 2026 ಗಾಗಿ ರಾಜಸ್ಥಾನ್ ರಾಯಲ್ಸ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಇವರು ಬಾರಿಸಿದ ಸಿಕ್ಸರ್‌ ಪೈಪ್‌ ಲೈನ್‌ಗೆ ಬಡೆದು ಹಾನಿಯುಂಟು ಮಾಡಿದೆ. ವೈಭವ್ ಸೂರ್ಯವಂಶಿ ಅವರ ಆಟದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಇವರು ಐಪಿಎಲ್‌ 2026ಕ್ಕಾಗಿ ಭರದ ತಯಾರಿ ನಡೆಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯದಲ್ಲಿ ಇವರು ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅಲ್ಲಿಂದ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Story first published: Friday, February 20, 2026, 17:28 [IST]
Other articles published on Feb 20, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+