'ಯುವ ಆಟಗಾರರು ಅವರ ಐಪಿಎಲ್ ಆತ್ಮವಿಶ್ವಾಸವನ್ನು ಶ್ರೀಲಂಕಾ ಸರಣಿಗೆ ತಂದುಕೊಳ್ತಾರೆ'

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ತಂಡದಲ್ಲಿ ಆರು ಮಂದಿ ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಲಂಕಾ ಪ್ರವಾಸದಲ್ಲಿರುವ ಈ ತಂಡ ಅನಾನುಭವಿಗಳ ತಂಡವೋ ಅಂತ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಲಂಕಾ ಪ್ರವಾಸದಲ್ಲಿರುವ ತಂಡದ ಉಪನಾಯಕ ಭುವನೇಶ್ವರ್ ಕುಮಾರ್, ಟೀಮ್ ಇಂಡಿಯಾದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದಲ್ಲಿ ಭಾರತದ ಎಂದಿನ ನಾಯಕ ವಿರಾಟ್ ಕೊಹ್ಲಿಯಿಲ್ಲ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ. ರವೀಂದ್ರ ಜಡೇಜಾ, ರಿಷಭ್ ಪಂತ್, ಯಾರೂ ಇಲ್ಲ. ಇದೇ ಕಾರಣಕ್ಕೆ ತಂಡದ ನಾಯಕತ್ವ ಶಿಖರ್ ಧವನ್ ಹೆಗಲ ಮೇಲಿದೆ. ಉಪನಾಯಕರಾಗಿ ವೇಗಿ ಭುನನೇಶ್ವರ್ ಕುಮಾರ್ ಹೆಸರಿಸಲ್ಪಟ್ಟಿದ್ದಾರೆ.
ಭಾರತ ತಂಡದಲ್ಲಿ 6 ಮಂದಿ ಅನ್‌ಕ್ಯಾಪ್ಡ್ ಆಟಗಾರರು ಇದ್ದಾರಾದರೂ ಅವರಲ್ಲಿ ಹೆಚ್ಚಿನವರು ಅಮಾನತಾಗಿರುವ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದವರೇ. ಹೀಗಾಗಿ ಐಪಿಎಲ್ ವೇಳೆಯ ಆತ್ಮವಿಶ್ವಾಸವನ್ನು ಯುವ ಆಟಗಾರರು ಶ್ರೀಲಂಕಾ ಪ್ರವಾಸದ ವೇಳೆಯೂ ತಂದುಕೊಂಡು ಆಡಲಿದ್ದಾರೆ ಎಂದು ಭುವಿ ಭರವಸೆ ವ್ಯಕ್ತಪಡಿಸಿದ್ದಾರೆ.
"ನಮ್ಮಲ್ಲಿ ಒಳ್ಳೆಯ ಆಟಗಾರರಿದ್ದಾರೆ. ಅವರಿಗೆ ಐಪಿಎಲ್‌ನಲ್ಲಿ ಆಡಿದ ಅನುಭವಿವಿದೆ. ಅವರೆಲ್ಲೂ ಯುವಕರು. ಆದರೆ ಎಲ್ಲರಿಗೂ ಐಪಿಎಲ್‌ನಲ್ಲಿ ಅಥವಾ ಟಿ20 ಕ್ರಿಕೆಟ್‌ನಲ್ಲಿ ಒಂದಷ್ಟು ವರ್ಷಗಳಿಂದ ಆಡಿದ ಅನುಭವವಿದೆ. ಐಪಿಎಲ್‌ನಲ್ಲಿ ಅವರವರ ತಂಡದ ಪರ ಆತ್ಮವಿಶ್ವಾದಿಂದ ಆಡಿದಂತೆ ಇಲ್ಲೂ ಅವರು ಆಡ್ತಾರೆ," ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಭುವನೇಶ್ವರ್ ಹೇಳಿದ್ದಾರೆ. ಜುಲೈ 18ರಿಂದ ಭಾರತ-ಶ್ರೀಲಂಕಾ ಸರಣಿ ಏಕದಿನ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications