Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ-ಬಾಂಗ್ಲಾದೇಶ ಏಕದಿನ ಕ್ರಿಕೆಟ್ ಸರಣಿಗೆ ಗೈಡ್

ಢಾಕಾ, ಜೂ.17: ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ನೀರಸ ಡ್ರಾ ನಲ್ಲಿ ಅಂತ್ಯಗೊಂಡ ಬಳಿಕೆ ಏಕದಿನ ಸರಣಿ ರೋಚಕವಾಗಿರುವ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ. ಅದರೆ, ಏಕದಿನ ಸರಣಿಗೂ ಮಳೆ ಕಾಟ ಎದುರಾಗಲಿದೆ. ಜೂ.18ರಿಂದ ಮೂರು ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ. ಸರಣಿಗೆ ಮಾರ್ಗದರ್ಶಿ ಇಲ್ಲಿದೆ.

ವಿಶ್ವಕಪ್ ಕ್ವಾರ್ಟರ್​ಫೈನಲ್ ಕಿರಿಕ್ ಬಳಿಕ ನಡೆಯುತ್ತಿರುವ ಏಕದಿನ ಪಂದ್ಯ ಇದಾಗಿದೆ. ಮೂರು ಏಕದಿನ ಪಂದ್ಯಗಳು ಹಗಲು-ರಾತ್ರಿ ಪಂದ್ಯಗಳಾಗಿವೆ. ಭಾರತ ಹಾಗೂ ಬಾಂಗ್ಲಾದೇಶ ಸರಣಿ ಯಶಸ್ವಿಯಾಗಬೇಕಾದರೆ ಮಳೆರಾಯನ ಕೃಪೆ ಬೇಕಾಗಿದ್ದು ಅವಶ್ಯವಾಗಿದೆ. [ಭಾರತ-ಬಾಂಗ್ಲಾ ಟೆಸ್ಟ್ ಡ್ರಾ, ಪಂದ್ಯ ಗೆದ್ದ ಮಳೆರಾಯ]

MS Dhoni

ಯಾವಾಗ ಪಂದ್ಯಗಳು:
* ಜೂ. 18, 21, 24.
ಎಲ್ಲಿ ನಡೆಯಲಿದೆ?
* ಮೂರು ಪಂದ್ಯಗಳು ಷೇರ್ ಇ ಬಾಂಗ್ಲಾ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ, ಮೀರ್ ಪುರ್ (ಢಾಕಾ)

ಬಲಾಬಲ
ಭಾರತ -25
ಬಾಂಗ್ಲಾದೇಶ-3
ಒಟ್ಟಾರೆ 29 ಪಂದ್ಯಗಳು, 1 ಫಲಿತಾಂಶ ಬಂದಿಲ್ಲ.

ಪಂದ್ಯ ಆರಂಭದ ಸಮಯ
2.30 PM IST

ಎಲ್ಲಿ ಪ್ರಸಾರ ವಾಗುತ್ತದೆ?
ಸ್ಟಾರ್ ಸ್ಫೋರ್ಟ್ಸ್ ನಲ್ಲಿ ಲೈವ್ ವೀಕ್ಷಿಸಬಹುದು

ಐಸಿಸಿ ಶ್ರೇಯಾಂಕ
ಭಾರತ -2
ಬಾಂಗ್ಲಾದೇಶ -8

Shakib

ಪ್ರಮುಖ ಆಟಗಾರರು
ಭಾರತ: ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್
ಬಾಂಗ್ಲಾದೇಶ: ಮೋರ್ತಜಾ, ತಮೀಮ್ ಇಕ್ಬಾಲ್, ಶಕೀಬ್ ಅಲ್ ಹಸನ್, ಮುಷ್ಫಿಕರ್ ರಹೀಂ, ತಸ್ಕಿನ್ ಅಹ್ಮದ್

ಹವಾಮಾನ ವರದಿ
ಏಕದಿನ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಮಳೆ ನಿರೀಕ್ಷಿಸಬಹುದು ಎಂದು ಮುನ್ಸೂಚನೆ ಸಿಕ್ಕಿದೆ.[ಏಕೈಕ ಟೆಸ್ಟ್ ಪಂದ್ಯದ ಚಿತ್ರಗಳು]

ರಿಸರ್ವ್ ಡೇ
ಎಲ್ಲಾ ಪಂದ್ಯಗಳು ನಡೆಯುವ ದಿನಕ್ಕೆ ರಿಸರ್ವ್ ಡೇ ನೀಡಲಾಗಿದೆ. 20 ಓವರ್ಸ್ ಬ್ಯಾಟಿಂಗ್ ಸಾಧ್ಯವಾದರೆ ಡಕ್ವರ್ಥ್ ಲೂಯಿಸ್ ನಿಯಮದಂತೆ ಪಂದ್ಯದ ಫಲಿತಾಂಶದ ನಿರ್ಧರಿಸಲಾಗುತ್ತದೆ.

ಅಂಪೈರ್: ರಾಡ್ ಟಕರ್ (ಆಸ್ಟ್ರೇಲಿಯಾ) ಹಾಗೂ ಸ್ಥಳೀಯ ಅಂಪೈರ್ ಒಬ್ಬರು
* ಮ್ಯಾಚ್ ರೆಫ್ರಿ: ಆಂಡಿ ಪೈಕ್ರಾಫ್ಟ್ (ಜಿಂಬಾಬ್ವೆ)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+