Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದ ಯೂಸುಫ್ ಪಠಾಣ್ ಗೆ 5 ತಿಂಗಳ ನಿಷೇಧ!

Yusuf Pathan Suspended five months by BCCI After Dope Violation

ಬರೋಡ, ಜನವರಿ 9 : ಇತ್ತೀಚೆಗೆ ನಡೆಸಲಾದ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಟೀಂ ಇಂಡಿಯಾದ ಆಲ್ ರೌಂಡರ್ ಯೂಸೂಫ್ ಪಠಾಣ್ ಅವರು ಐದು ತಿಂಗಳು ನಿಷೇಧಕ್ಕೊಳಗಾಗಿದ್ದಾರೆ.

2017-18ನೇ ಸಾಲಿನಲ್ಲಿ ಬರೋಡ ತಂಡವನ್ನು ಪ್ರತಿನಿಧಿಸಿ ಆಂಧ್ರಪ್ರದೇಶ ವಿರುದ್ಧ ಏಕೈಕ ಪಂದ್ಯವನ್ನಾಡಿದ್ದ ಯೂಸೂಫ್, ಉದ್ದೀಪನಾ ಮದ್ದು ಸೇವಿಸಿರುವುದು ಸಾಭೀತಾಗಿದೆ. ಹಿನ್ನಲೆಯಲ್ಲಿ ಬಿಸಿಸಿಐ ಕಳೆದ ಆಗಸ್ಟ್ 15ರಂದು ಯೂಸುಫ್ ಮೇಲೆ ನಿಷೇಧ ಹೇರಿದ್ದು, ಇದೀಗ 5 ತಿಂಗಳ ನಿಷೇಧ ಖಾಯಂ ಮಾಡಿರುವುದರಿಂದ ಇದೇ ಜನವರಿ 14 2018ಕ್ಕೆ ಅವರ ಅಮಾನತು ಶಿಕ್ಷೆ ಪೂರ್ಣವಾಗಲಿದೆ. ಹೀಗಾಗಿ ಯೂಸುಫ್ ಮುಂಬರುವ ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ಕಳೆದ ವರ್ಷವಷ್ಟೇ ಬಿಸಿಸಿಐ ಕ್ರಿಕೆಟಿಗರಿಗೂ ಡೋಪಿಂಗ್ ಟೆಸ್ಟ್ ಕಡ್ಡಾಯಗೊಳಿಸಿತ್ತು. ಅದರಂತೆ ಕಳೆದ ಮಾರ್ಚ್ ತಿಂಗಳಲ್ಲಿ ನವದೆಹಲಿಯಲ್ಲಿ ಕ್ರಿಕೆಟ್ ಆಟಗಾರರಿಗೆ ಡೋಪಿಂಗ್ ಟೆಸ್ಟ್ ನಡೆಸಲಾಗಿತ್ತು.

ಟೆಸ್ಟ್ ಬಳಿಕ ಯೂಸುಫ್ ಪಠಾಣ್ ಅವರ ಮೂತ್ರ ಪರೀಕ್ಷೆ ವೇಳೆ 'ಟೆರ್ಬುಟಲೈನ್' ಎಂಬ ನಿಷೇಧಿತ ರಾಸಾಯನಿಕ ಅಂಶ ಪತ್ತೆಯಾಗಿದೆ ಎಂದು ವಾಡಾ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಭಾರತದ ಎರಡನೇ ಕ್ರಿಕೆಟರ್ ಎನ್ನುವ ಕುಖ್ಯಾತಿಗೆ ಪಠಾಣ್ ಪಾತ್ರರಾಗಿದ್ದಾರೆ.

ಈ ಮೊದಲು ಡೆಲ್ಲಿ ಮೂಲದ ಯುವ ಎಡಗೈ ಬೌಲರ್ ಪ್ರದೀಪ್ ಸಾಂಗ್ವಾನ್ 2013ರಲ್ಲಿ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು 18 ತಿಂಗಳುಗಳ ಕಾಲ ನಿಷೇಧಕ್ಕೆ ಗುರಿಯಾಗಿದ್ದರು.

Story first published: Tuesday, January 9, 2018, 15:28 [IST]
Other articles published on Jan 9, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+