Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಬುಧಾಬಿ ಟಿ10ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಯುವರಾಜ್, ಅಂಬಾಟಿ ರಾಯುಡು?!

Yuvraj Singh, Ambati Rayudu to play T10 cricket in Abu Dhabi?

ನವದೆಹಲಿ, ಆಗಸ್ಟ್ 8: ಸದ್ಯ ಗ್ಲೋಬಲ್ ಟಿ20 ಕೆನಡಾದಲ್ಲಿ ಟೊರೊಂಟೋ ನ್ಯಾಷನಲ್ಸ್ ಪರ ಆಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದ ಅಂಬಾಟಿ ರಾಯುಡು ಮುಂಬರಲಿರುವ ಅಬುಧಾಬಿ ಟಿ10 ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಅರಬ್ ಯುನೈಟೆಡ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿ ನವೆಂಬರ್‌ನಲ್ಲಿ ಟಿ10 ಲೀಗ್ ಟೂರ್ನಿ ಆರಂಭಗೊಳ್ಳಲಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಟೂರ್ನಿಯ ಆಯೋಜಕರು, ತಾವು ಯುವರಾಜ್, ಅಂಬಾಟಿ ರಾಯುಡು ಮತ್ತು ಇರ್ಫಾನ್ ಪಠಾಣ್ ಜೊತೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.

'ದ ನ್ಯಾಷನಲ್' ಜೊತೆ ಮಾತನಾಡಿದ ಟಿ10 ಲೀಗ್‌ ಸ್ಥಾಪಕಾಧ್ಯಕ್ಷ ಶಾಜಿ ಉಲ್‌ ಮುಲ್ಕ್, 'ಯುವರಾಜ್ ಆಡುವ ನಿರೀಕ್ಷೆ ಹೆಚ್ಚಿದೆ. ಅವರಿಗೆ ಹೆಚ್ಚಿನ ಒತ್ತುನೀಡಿ ಆಫರ್ ಮಾಡಿದ್ದೇವೆ. ಯುವಿ ಮತ್ತು ಟೂರ್ನಿ ನಡುವಿನ ಅಂತರದ ಮಧ್ಯೆ ಸೇತುವೆಯಾಗುವ ನೆಲೆಯಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮ ಉದ್ದೇಶವಿಷ್ಟೇ, ಅವರು ಖಂಡಿತಾ ಆಡಬೇಕು,' ಎಂದರು.

ಮಾತು ಮುಂದುವರೆಸಿದ ಶಾಜಿ, 'ಪ್ರಮುಖ ಆಟಗಾರರ ಸಂಖ್ಯೆಯನ್ನು ನಿರ್ಧರಿಸಬೇಕಾಗಿದೆ, ಅದರ ನಂತರ ಕ್ಲಬ್‌ಗಳು ಅವರನ್ನು ಖರೀದಿಸಲು ಬಯಸುತ್ತಾರೆಯೇ ಎಂದು ನಿರ್ಧರಿಸುವ ಜವಾಬ್ದಾರಿ ಇರುತ್ತದೆ,' ಎಂದು ತಿಳಿಸಿದರು. ಈ ವರ್ಷದ ಟಿ10 ಲೀಗ್ ನವೆಂಬರ್‌ 15ರಿಂದ ನವೆಂಬರ್ 24ರ ವರೆಗೆ ನಡೆಯಲಿದೆ.

Story first published: Thursday, August 8, 2019, 18:14 [IST]
Other articles published on Aug 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+