Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yuvraj Singh: "ಜನರು ಹಿಂದಿನದನ್ನು ನೆನಪು ಹಾರುತ್ತಾರೆ" ಯುವರಾಜ್ ಸಿಂಗ್ ಹೀಗೆ ಹೇಳಿದ್ದೇಕೆ?

ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿ ಸೋಲು ಕಂಡಿದೆ. ಈ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಹ್ಯಾಟ್ರಿಕ್‌ ಟ್ರೋಫಿ ಗೆಲ್ಲುವ ಕನಸನ್ನು ಕೈ ಚೆಲ್ಲಿದೆ. ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಟೀಕೆಗೆ ಆಹಾರವಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಬ್ಯಾಟ್‌ನೊಂದಿಗೆ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಸರಣಿಯಲ್ಲಿ ರೋಹಿತ್ ಶರ್ಮಾ ಆಡಿದ ಮೂರು ಪಂದ್ಯಗಳಲ್ಲಿ 31 ರನ್‌ಗಳಿಸಿದ್ದು ಟೀಕೆಗೆ ಗುರಿಯಾಗಿದ್ದಾರೆ. ಇನ್ನು ವಿರಾಟ್‌ ಸಹ 5 ಪಂದ್ಯಗಳಲ್ಲಿ 190 ರನ್‌ ಸಿಡಿಸಿ ನಿರಾಸೆ ಅನುಭವಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಸ್ಟಾರ್ ಆಟಗಾರರ ಬ್ಯಾಟಿಂಗ್ ವೈಫಲ್ಯ ಟೀಕೆಗೆ ಗುರಿಯಾಗಿತ್ತು. ಈ ಇಬ್ಬರೂ ಆಟಗಾರರಿಗೆ ಈಗ ಮಾಜಿ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಬೆಂಬಲ ಸೂಚಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಈ ಹಿಂದೆ ಅಮೋಘ ಪ್ರದರ್ಶನ ನೀಡಿತ್ತು. ಆದರೆ ಈ ಬಾರಿ ಆ ಪ್ರದರ್ಶನ ಪುನಾರ್ವತಿಸಲು ಆಗಲಿಲ್ಲ ಎಂಬ ಬೇಸರ ಇದೆ. ಆದರೆ ಅದಕ್ಕೆ ಆಟಗಾರರನ್ನು ದೂಷಿಸುವುದು ಸರಿಯಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

Yuvraj Singh Backs Rohit Sharma and Virat Kohli Amid Border-Gavaskar Series Defeat

ಬೇಸರದ ಸಂಗತಿ

ನನಗೆ ಭಾರತ, ಆಸ್ಟ್ರೇಲಿಯಾದಲ್ಲಿ ಸರಣಿ ಸೋತಿರುವುದು ಬೇಸರ ತರಿಸಿಲ್ಲ. ಇದೇಲ್ಲಾ ಆಟದ ಒಂದು ಭಾಗವಾಗಿದೆ. ಆದರೆ ಭಾರತ, ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತಿದ್ಧ ನಿಜಕ್ಕೂ ಬೇಸರದ ಸಂಗತಿ. ತವರಿನಲ್ಲಿ 3-0 ಸೋಲು ನಿಜಕ್ಕೂ ದುಃಖಕರ ಎಂದು ಯುವಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪರ ಸಾಕಷ್ಟು ಪಂದ್ಯಗಳನ್ನು ಆಡಿ ಗೆಲ್ಲಿಸಿದ ಹಿರಿಮೆ ಹೊಂದಿದ್ದಾರೆ. ಅವರಿಬ್ಬರೂ ಲೆಜೆಂಡರಿ ಆಟಗಾರರು. ನಾವು ಆಸೀಸ್‌ ವಿರುದ್ಧ ಸರಣಿ ಸೋಲಿನ ಬಳಿಕ ನಮ್ಮ ತಂಡದ ಸ್ಟಾರ್ ಆಟಗಾರರ ಬಗ್ಗೆ ಬೇಕಾ ಬಿಟ್ಟಿ ಮಾತನಾಡುತ್ತಿದ್ದೇವೆ. ಜನರು ಹಿಂದೆ ಸಾಧಿಸಿದನ್ನು ಮರೆತು ಬಿಡುತ್ತಾರೆ. ರೋಹಿತ್ ಹಾಗೂ ವಿರಾಟ್ ಈ ಕಾಲದ ಶ್ರೇಷ್ಠ ಆಟಗಾರರು ಎಂದು ಯುವಿ ಬಣ್ಣಿಸಿದ್ದಾರೆ.

Yuvraj Singh Backs Rohit Sharma and Virat Kohli Amid Border-Gavaskar Series Defeat

ಗೌತಮ್‌ ಗಂಭೀರ್, ಅಜಿತ್ ಅಗರ್ಕರ್‌, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ ನನಗಿಂತ ಹೆಚ್ಚು ಕ್ರಿಕೆಟ್‌ ಆಡಿದ್ದಾರೆ. ಪ್ರಸ್ತುತ ಅವರು ಭಾರತದ ಅತ್ಯುತ್ತಮ ಆಟಗಾರರು. ಭವಿಷ್ಯದಲ್ಲಿ ಭಾರತ ಕ್ರಿಕೆಟ್ ನಡೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ಇವರು ನಿರ್ಧರಿಸಲಿದ್ದಾರೆ ಎಂದು ಯುವರಾಜ್ ಹೇಳಿದ್ದಾರೆ.

ಸಿಡ್ನಿ ಟೆಸ್ಟ್‌ನಲ್ಲಿ ಫಾರ್ಮ್ ಇಲ್ಲದೇ ಇರುವುದರಿಂದ ತಂಡದಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ನಡೆಯ ಬಗ್ಗೆ ಮಾತನಾಡಿರುವ ಯುವರಾಜ್‌, ಅವರ ನಡೆ ಮೆಚ್ಚುಗೆ ಪಾತ್ರವಾಗಿದೆ. ಇವರು ಮೊದಲು ತಂಡದ ಹಿತವನ್ನು ನೋಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಫಾರ್ಮ್‌ ಇಲ್ಲದೇ ಇರುವುದರಿಂದ ನಯಕನೇ ಹಿಂದೆ ಸರಿದಿರುವ ಉದಾಹರಣೆಗಳು ತೀರಾ ಕಡಿಮೆ. ನಿಜಕ್ಕೂ ರೋಹಿತ್ ಅವರ ನಡೆ ಪ್ರಶಂಸೆಗೆ ಅರ್ಹವಾದದ್ದು ಎಂದು ತಿಳಿಸಿದ್ದಾರೆ.

Story first published: Tuesday, January 7, 2025, 15:57 [IST]
Other articles published on Jan 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+