Yuvraj Singh: ಬೆಳ್ಳೆ ತೆರೆಯ ಮೇಲೆ ಬರಲಿದೆ ಸಿಕ್ಸರ್ ಕಿಂಗ್ ಬಯೋಪಿಕ್..
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಪಟ್ಟಿಯನ್ನು ಒಮ್ಮೆ ನೋಡಿದರೆ, ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಯುವರಾಜ್ ಸಿಂಗ್.. ಇವರ ಆಟದ ಧಾಟಿಯೇ ಅಂತಹದ್ದು. ಒಮ್ಮೆ ನೋಡಿದರೆ ಪದೆ ಪದೇ ನೋಡಬೇಕೆಂದು ಮಾಡುತ್ತದೆ. ಭಾರತ 2007ರಲ್ಲಿ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್‌ನಲ್ಲಿ ಯುವರಾಜ್ ಸಾಧನೆ ಅಮೋಘ..
ಯಾವುದೇ ಚಿತ್ರದ ಹೀರೋಗೂ ಕಮ್ಮಿ ಏನು ಇರಲಿ ಯುವರಾಜ್ ಸಿಂಗ್ ಖ್ಯಾತಿ. ಇವರ ಆಟಕ್ಕೆ ಮನಸೋತೆ ಅಭಿಮಾನಿಗಳು ಇವರಿಗೆ ಸಿಕ್ಸರ್ ಸಿಂಗ್ ಎಂದೇ ಕರೆಯುತ್ತಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಿದ್ದ ಯುವಿ, ವಿಶ್ವದ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರು. ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ ಜೀವನ ಗಾತೆ ತೆರೆಯ ಮೇಲೆ ಬರಲಿದೆ.

ತೆರೆಯ ಮೇಲೆ ಬರಲಿದೆ ಯುವಿ ಬಯೋಪಿಕ್
ಯುವರಾಜ್ ಸಿಂಗ್ ಜೀವನಾಧಾರಿತ ಸಿನಿಮಾವೊಂದು ನಿರ್ಮಾಣವಾಗಲಿದೆ. ಭೂಷಣ್ ಕುಮಾರ್ ಮತ್ತು ರವಿ ಭಾಗಚಂದಾಕ್ ಯುವಿಯ ಜೀವನಾಧಾರಿತ ಚಿತ್ರವನ್ನು ನಿರ್ಮಿಸಲಿದ್ದಾರೆ. ಈ ಬಗ್ಗೆ ಚಿತ್ರ ವಿಮರ್ಷಕ ತರಣ್ ಆದರ್ಶ್ ಪೋಸ್ಟ್ ಸಹ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಯುವರಾಜ್ ಸಿಂಗ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಜೀವನ ಚರಿತ್ರೆ ನಿರ್ಮಿಸುವುದರಿಂದ ಲಕ್ಷಾಂತರ ಜನರಿಗೆ ಸ್ಪೂರ್ತಿ ಸಿಗಲಿದೆ ಎಂದಿದ್ದಾರೆ.
ಯುವರಾಜ್ ಹೇಳಿದ್ದೇನು?
ಭೂಷಣ್ ಕುಮಾರ್ ಮತ್ತು ರವಿ ಭಾಗಚಂದಕಾ ಸಿಕ್ಸರ್ ಕಿಂಗ್ ಖ್ಯಾತಿಯ ಯುವಿ ಜೀವನಾಧಾರಿತ ಚಿತ್ರವನ್ನು ನಿರ್ಮಿಸಲು ಕೈ ಹಾಕಿದ್ದಾರೆ. ಆದರೆ ಈ ಚಿತ್ರಕ್ಕೆ ಇನ್ನು ಹೆಸರು ಅಂತಿಮವಾಗಿಲ್ಲ. ಈ ಚಿತ್ರದಲ್ಲಿ ಸಂಪೂರ್ಣ ಕ್ರಿಕೆಟ್ ಆಧಾರಿತ ಜೀವನವನ್ನು ತೋರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ನನ್ನ ಬಯೋಪಿಕ್ ಬೆಳ್ಳಿ ತೆರೆಯ ಮೇಲೆ ಬರುತ್ತದೆ ಎಂದರೆ ಅದು ನನಗೆ ಗೌರವದ ಸಂಗತಿ ಎಂದಿದ್ದಾರೆ.

ಕ್ರಿಕೆಟ್ ನನ್ನ ಮೊದಲ ಪ್ರೀತಿ. ಇದೇ ಅಂಗಳದಲ್ಲಿ ನಾನು ಸಾಧಿಸಿದ ಏರಿಳಿತಗಳನ್ನು ತೆರೆಯ ಮೇಲೆ ನೋಡಲು ಕಾತುರನಾಗಿದ್ದೇನೆ. ಈ ಚಿತ್ರವು ಹಲವು ಜನರಿಗೆ ಸವಾಲುಗಳನ್ನು ಮೆಟ್ಟಿನಿಲ್ಲಲು ಸಹಾಯಕವಾಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಈಗಾಗಲೇ ಬೆಳ್ಳಿ ತೆರೆಯ ಮೇಲೆ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಚಿತ್ರಗಳು ತೆರೆಯ ಮೇಲೆ ಬಂದಿವೆ. ಈಗ ಈ ಸಾಲಿಗೆ ಯುವಿ ಚಿತ್ರವೂ ಸೇರಿಕೊಳ್ಳಲಿದೆ.
ಯುವರಾಜ್ ಸಾಧನೆ
ಯುವರಾಜ್ ಸಿಂಗ್ 17 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಾಳಿಗಳನ್ನು ಕಾಡಿದ್ದಾರೆ. ಇವರು 40 ಟೆಸ್ಟ್ ಪಂದ್ಯಗಳಲ್ಲಿ 1900 ರನ್, 304 ಏಕದಿನ ಪಂದ್ಯಗಳಲ್ಲಿ 8701 ರನ್‌ಮ 58 ಟಿ20 ಪಂದ್ಯಗಳಲ್ಲಿ 1177 ರನ್ ಸಿಡಿಸಿದ್ದಾರೆ. 2007 ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಅವರಿಗೆ ಒಂದೇ ಒವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದ ಯುವಿ, 2011ರ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications