ಮದ್ವೆ ಡೇಟ್ ಫಿಕ್ಸ್ ಮಾಡಿಕೊಡಿ ಎಂದ ಯುವರಾಜ್
ಬೆಂಗಳೂರು, ನ.05: ಬಾಲಿವುಡ್ ನಟಿ ಹಜೆಲ್ ಕೀಚ್ ಜೊತೆ ಕ್ರಿಕೆಟರ್ ಯುವರಾಜ್ ಸಿಂಗ್ ಮದ್ವೆಯಂತೆ! ಎಂಬ ಸುದ್ದಿಗೆ ಯುವರಾಜ್ ಸಿಂಗ್ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ದಯವಿಟ್ಟು ನನ್ನ ಮದುವೆ ಡೇಟ್ ಫಿಕ್ಸ್ ಮಾಡಿಕೊಂಡಿ ಎಂದು ಕೇಳಿದ್ದಾರೆ.
ಕ್ರಿಕೆಟರ್ಸ್ ಗಳ ಮದುವೆ ಹಬ್ಬ ಮುಂದುವರೆಯುವ ಲಕ್ಷಣಗಳು ಕಂಡು ಬಂದಿದ್ದು, ಹರ್ಭಜನ್ ಸಿಂಗ್ ನಂತರ ಯುವರಾಜ್ ಸಿಂಗ್ ಮದುವೆ ಬಗ್ಗೆ ಮಾತುಕತೆ ಜೋರಾಗಿ ಕೇಳಿ ಬಂದಿತ್ತು. ಸಲ್ಮಾನ್ ಖಾನ್ ಅಭಿನಯದ ಬಾಡಿಗಾರ್ಡ್ ಸಿನಿಮಾದಲ್ಲಿ ನಟಿಸಿದ್ದ ಹಜೆಲ್ ಕೀಚ್ರನ್ನು ಯುವರಾಜ್ ಸಿಂಗ್ ಅವರು 2016ರ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿದ ಆಲ್ ರೌಂಡರ್ ಯುವರಾಜ್ ಸಿಂಗ್, ಸದ್ಯಕ್ಕಂತೂ ಮದುವೆ ಬಗ್ಗೆ ಯೋಚನೆ ಇಲ್ಲ ಎಂದಿದ್ದಾರೆ. ನನ್ನ ಪ್ರೀತಿಯ ಮಾಧ್ಯಮ ಮಿತ್ರರೇ ನೀವೆ ಮದುವೆ ಯಾವಾಗ ಎಂಬುದನ್ನು ನಿರ್ಧರಿಸಿದ್ದೀರಿ, ಡೇಟ್ ಒಂದು ಮಿಸ್ ಆಗಿದೆ. ಯಾವಾಗ ಎಂದು ಹೇಳಿಬಿಡಿ, ನನಗೂ ತಯಾರಾಗಲು ಸಮಯ ಬೇಕಾಗುತ್ತದೆ ಎಂದಿದ್ದಾರೆ.

ಹರ್ಭಜನ್ ಸಿಂಗ್ ನಂತರ ನನ್ನ ಮದ್ವೆ
ಆತ್ಮೀಯ ಗೆಳೆಯ ಹರ್ಭಜನ್ ಸಿಂಗ್ ವಿವಾಹವಾದ ಬಳಿಕ ನಾನು ಮದುವೆಯಾಗುತ್ತೇನೆ ಎಂದು ಯುವರಾಜ್ ಸಿಂಗ್ ಈ ಹಿಂದೆ ಹೇಳಿದ್ದರು. ಡಿಸೆಂಬರ್ 12 ರಂದು 34ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಲಿರುವ ಯವರಾಜ್ ಅವರು, ಡಿಸೆಂಬರ್ 13ರಂದು ಮದುವೆಯಾಗುತ್ತಾರೆ ಎಂಬ ಸುದ್ದಿ ಬಂದಿತ್ತು.

ಮದುವೆ ಡೇಟ್ ಫಿಕ್ಸ್ ಆಗಿಲ್ಲ
ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಡಿಸೆಂಬರ್ ನಲ್ಲಿ ಮದುವೆ ಎಂಬುದು ಸದ್ಯದ ಸುದ್ದಿ. ಯುವರಾಜ್ ಸಿಂಗ್ ಕುಟುಂಬದ ಸದಸ್ಯರೊಬ್ಬರು ತೀರಿಕೊಂಡಿದ್ದರಿಂದ ಮದುವೆಯನ್ನು ಯುವಿ ಫೆಬ್ರವರಿಗೆ ಮುಂದೂಡಿದ್ದಾರೆ ಎನ್ನಲಾಗಿತ್ತು.

ನಾಗಸನ್ನಿಧಿಯಲ್ಲಿ ಕ್ರಿಕೆಟರ್ ಯುವರಾಜ್
ಇತ್ತೀಚೆಗೆ ಸರ್ಪದೋಷ ನಿವಾರಣೆಗಾಗಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ದೇಗುಲಗಳಿಗೆ ಯುವರಾಜ್ ಸಿಂಗ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಜೊತೆ ಗೆಳತಿ ಹಜೆಲ್ ಕೀತ್ ಕೂಡಾ ಇದ್ದರು.
ಮಾಧ್ಯಮಗಳಿಗೆ ಯುವರಾಜ್ ಸಿಂಗ್ ಪ್ರಶ್ನೆ
ಮದುವೆ ಬಗ್ಗೆ ಸುದ್ದಿಯನ್ನು ತಳ್ಳಿಹಾಕಿ, ಮಾಧ್ಯಮಗಳಿಗೆ ಯುವರಾಜ್ ಸಿಂಗ್ ಪ್ರಶ್ನೆ ಹಾಕಿದ್ದು ಹೀಗೆ...
ಯುಸಿ ಬ್ರೌಸರ್ ಪರ ಯುವಿ ಬ್ಯಾಟಿಂಗ್
ಯುಸಿ ಬ್ರೌಸರ್ ಪರ ಯುವಿ ಬ್ಯಾಟಿಂಗ್ ಮಾಡುತ್ತಿದ್ದು, ಅಭಿಮಾನಿಗಳ ಜೊತೆ ಆಪ್ತ ಚಾಟಿಂಗ್ ನಡೆಸಿದ್ದಾರೆ.
ಜಹೀರ್ ಖಾನ್ ಸಲಹೆ
ಯುವರಾಜ್ ಸಿಂಗ್ ಮದುವೆಯಾಗು ಎಂದು ಹರ್ಭಜನ್ ಸಿಂಗ್ ಹಾಗೂ ಜಹೀರ್ ಖಾನ್ ಕೂಡಾ ಇತ್ತೀಚೆಗೆ ಕೇಳಿಕೊಂಡಿದ್ದರು. ರೋಹಿತ್ ಶರ್ಮ ಅವರು ಈಗಾಗಲೇ ಮದುವೆ ಸುದ್ದಿಯನ್ನು ಘೋಷಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications