ದಾಖಲೆ ಸಮಕ್ಕೆ ನಿಂತ ಗೇಲ್ ಬಗ್ಗೆ ಯುವಿಗೆ ಬೇಸರವೇಕೆ?
ಬೆಂಗಳೂರು, ಜ. 19: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಹೊಸ ಟ್ವೆಂಟಿ 20 ವಿಶ್ವದಾಖಲೆ ಬರೆದಿದ್ದರ ಬಗ್ಗೆ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಟಿ20 ದಾಖಲೆ ಸಮಗಟ್ಟಿದ್ದಕ್ಕೆ ಬಗ್ಗೆ ಬೇಜಾರಾಗಿಲ್ಲ, ದಾಖಲೆಯನ್ನು ಮುರಿಯಲಿಲ್ಲವೇಕೆ ಎಂಬುದು ಯುವಿ ಕೊರಗಾಗಿದೆಯಂತೆ.
ಸೋಮವಾರ(ಜನವರಿ 18) ನಡೆದ ಬಿಗ್ ಬಾಷ್ ಲೀಗ್ (ಬಿಬಿಎಲ್) ಪಂದ್ಯದಲ್ಲಿ ಕ್ರಿಸ್ ಗೇಲ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. 36 ವರ್ಷ ವಯಸ್ಸಿನ ಗೇಲ್ ಅವರು ಟೀಂ ಇಂಡಿಯಾ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಟಿ20 ವಿಶ್ವ ದಾಖಲೆಯನ್ನು ಸಮಗಟ್ಟಿದ್ದರು. [ಯುವರಾಜ್ ಸಿಂಗ್ ಟಿ20 ವಿಶ್ವದಾಖಲೆ ಸಮಕ್ಕೆ ನಿಂತ ಗೇಲ್]

ಈ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್, ನನ್ನ ದಾಖಲೆ ಮುರಿಯಬೇಕಿತ್ತು. ಪರ್ವಾಗಿಲ್ಲ ಮುಂದಿನ ಬಾರಿ ನೋಡೋಣ ಅಥವಾ ಎಬಿ ಡಿವಿಲಿಯರ್ಸ್ ರಿಂದ ಇದೇ ರೀತಿ ದಾಖಲೆ ನಿರೀಕ್ಷಿಸೋಣ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿವಿಲಿಯರ್ಸ್ ಅವರು ಏಕದಿನ ಕ್ರಿಕೆಟ್ ನಲ್ಲಿ 31 ಎಸೆತಗಳಲ್ಲಿ ಶತಕ ದಾಖಲಿಸಿದ್ದರು, ಜನವರಿ 18, 2015ರಂದು ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಕಂದು ಬಂದಿತ್ತು. ಈಗ 10 ಎಸೆತಗಳಲ್ಲಿ ಯಾರಾದರೂ ಅರ್ಧಶತಕ ಸಿಡಿಸಲಿ ಎಂಬುದು ಯುವರಾಜ್ ಬಯಕೆಯಾಗಿದೆ.
12 ಎಸೆತಗಳಲ್ಲಿ 50 ರನ್ ಇಬ್ಬರ ಆಟದ ಹೋಲಿಕೆ
ಕ್ರಿಸ್ ಗೇಲ್-2 0 6 6 6 6 2 6 6 4 1 6 (17 ಎಸೆತಗಳಲ್ಲಿ 56 ರನ್)
ಯುವರಾಜ್ ಸಿಂಗ್ -0 4 1 4 4 1 6 6 6 6 6 6 (16 ಎಸೆತಗಳಲ್ಲಿ 58 ರನ್)
ಗೇಲ್ ಅವರ ಆರ್ಭಟದ ನಡುವೆಯೂ ಅವರ ತಂಡ ಮೆಲ್ಬೊರ್ನ್ ರೀನೆಗೇಡ್ಸ್ 27ರನ್ ಗಳಿಂದ ಪಂದ್ಯ ಸೋತು ಬಿಗ್ ಬಾಷ್ ಲೀಗ್ ನ ಸೆಮಿಫೈನಲ್ ತಲುಪುವಲ್ಲಿ ವಿಫಲವಾಗಿದೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications