ವಿದೇಶಿ ಟಿ20 ಲೀಗ್‌ಗಳಲ್ಲಿ ಬ್ಯಾಟ್ ಬೀಸಲು 'ಸಿಕ್ಸರ್ ಕಿಂಗ್' ಯುವಿ ಸಜ್ಜು

ನವದೆಹಲಿ, ಜೂನ್ 19: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಭಾರತದ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರು ವಿದೇಶಗಳಲ್ಲಿ ನಡೆಯುವ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ(ಬಿಸಿಸಿಐ)ಗೆ ಪತ್ರ ಬರೆದಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದಾಗಲೇ ಸಿಕ್ಸರ್ ಕಿಂಗ್ ಯುವಿ ತನಗೆ ವಿದೇಶಿ ಟಿ20 ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಆಸಕ್ತಿಯಿದೆ. ಕ್ರಿಕೆಟ್ ಬದುಕಿನ ಖುಷಿಗಾಗಿ ಮತ್ತೆ ಇನ್ನಿಂಗ್ಸ್ ಶುರು ಮಾಡಬೇಕು ಎಂದಿದ್ದರು. ಅದರಂತೆ ಔಪಚಾರಿಕವಾಗಿ ಯುವಿ ಕ್ರಿಕೆಟ್ ಬೋರ್ಡ್‌ಗೆ ಪತ್ರ ರವಾನಿಸಿದ್ದಾರೆ.
'ಬೋರ್ಡ್‌ಗೆ ಯುವರಾಜ್ ನೆನ್ನೆ ಪತ್ರ ಬರೆದಿದ್ದಾರೆ. ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ವಿದೇಶಿ ಟಿ20 ಟೂರ್ನಿಗಳಲ್ಲಿ ಅವರು ಪಾಲ್ಗೊಂಡರೆ ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ' ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ಮಂಗಳವಾರ (ಜೂನ್ 18) ತಿಳಿಸಿದೆ.
ಬಿಸಿಸಿಐ ನಿಯಮಾವಳಿಗಳ ಪ್ರಕಾರ ಸಕ್ರಿಯ ಆಟಗಾರರು ವಿದೇಶಿ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಹೀಗಾಗಿ ವಿಶ್ವದಾದ್ಯಂತ ಲೀಗ್‌ಗಳಲ್ಲಿ ಭಾಗವಹಿಸಲು ಯೋಚಿಸಿರುವ ಯುವರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿದ್ದರು. ಅಂತೂ ಯುವಿಯ ಬ್ಯಾಟಿಂಗ್ ವೀಕ್ಷಿಸುವ ಅವಕಾಶ ಈಗಲೂ ನಮ್ಮ ಮುಂದಿದೆ.
ಈಗಾಗಲೇ ನಿವೃತ್ತಿ ನೀಡಿರುವ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಮತ್ತು ವೇಗಿ ಝಹೀರ್ ಖಾನ್‌ಗೆ ಯುಎಇಯಲ್ಲಿ ನಡೆಯಲಿರುವ ಟಿ10 ಲೀಗ್‌ನಲ್ಲಿ ಪಾಲ್ಗೊಳ್ಳಲು ಬಿಸಿಸಿಐನಿಂದ ಅನುಮತಿ ದೊರೆತಿದೆ. ಯುವರಾಜ್ ಕೂಡ ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈ ಟೂರ್ನಿ ಅಕ್ಟೋಬರ್ 23ರಿಂದ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications