ಹಜೆಲ್ ಕೀಚ್ ಜೊತೆ ಯುವರಾಜ್ ಸಿಂಗ್ ಮದ್ವೆಯಂತೆ!
ಬೆಂಗಳೂರು, ನ.04: ಕ್ರಿಕೆಟರ್ಸ್ ಗಳ ಮದುವೆ ಹಬ್ಬ ಮುಂದುವರೆಯುವ ಲಕ್ಷಣಗಳು ಕಂಡು ಬಂದಿದೆ. ಹರ್ಭಜನ್ ಸಿಂಗ್ ನಂತರ ಯುವರಾಜ್ ಸಿಂಗ್ ಮದುವೆ ಬಗ್ಗೆ ಮಾತುಕತೆ ಜೋರಾಗಿ ಕೇಳಿ ಬಂದಿದೆ.
ಸಲ್ಮಾನ್ ಖಾನ್ ಅಭಿನಯದ ಬಾಡಿಗಾರ್ಡ್ ಸಿನಿಮಾದಲ್ಲಿ ನಟಿಸಿದ್ದ ಹಜೆಲ್ ಕೀಚ್ರನ್ನು ಯುವರಾಜ್ ಸಿಂಗ್ ಅವರು 2016ರ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. [ನಾಗಸನ್ನಿಧಿಯಲ್ಲಿ ಕ್ರಿಕೆಟರ್ ಯುವರಾಜ್ ಸಿಂಗ್]
ಆತ್ಮೀಯ ಗೆಳೆಯ ಹರ್ಭಜನ್ ಸಿಂಗ್ ವಿವಾಹವಾದ ಬಳಿಕ ನಾನು ಮದುವೆಯಾಗುತ್ತೇನೆ ಎಂದು ಯುವರಾಜ್ ಸಿಂಗ್ ಈ ಹಿಂದೆ ಹೇಳಿದ್ದಾರೆ. ಡಿಸೆಂಬರ್ 12 ರಂದು 34ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಲಿರುವ ಯವರಾಜ್ ಅವರು, ಡಿಸೆಂಬರ್ 13ರಂದು ಮದುವೆಯಾಗುತ್ತಾರೆ ಎಂಬ ಸುದ್ದಿಯೂ ಇದೆ.

ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಡಿಸೆಂಬರ್ ನಲ್ಲಿ ಮದುವೆ ಎಂಬುದು ಸದ್ಯದ ಸುದ್ದಿ. ಯುವರಾಜ್ ಸಿಂಗ್ ಕುಟುಂಬದ ಸದಸ್ಯರೊಬ್ಬರು ತೀರಿಕೊಂಡಿದ್ದರಿಂದ ಮದುವೆಯನ್ನು ಯುವಿ ಫೆಬ್ರವರಿಗೆ ಮುಂದೂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇತ್ತೀಚೆಗೆ ಸರ್ಪದೋಷ ನಿವಾರಣೆಗಾಗಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ದೇಗುಲಗಳಿಗೆ ಯುವರಾಜ್ ಸಿಂಗ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಜೊತೆ ಗೆಳತಿ ಹಜೆಲ್ ಕೀತ್ ಕೂಡಾ ಇದ್ದರು. ಯುವರಾಜ್ ಸಿಂಗ್ ಮದುವೆಯಾಗು ಎಂದು ಹರ್ಭಜನ್ ಸಿಂಗ್ ಹಾಗೂ ಜಹೀರ್ ಖಾನ್ ಕೂಡಾ ಇತ್ತೀಚೆಗೆ ಕೇಳಿಕೊಂಡಿದ್ದರು. ರೋಹಿತ್ ಶರ್ಮ ಅವರು ಈಗಾಗಲೇ ಮದುವೆ ಸುದ್ದಿಯನ್ನು ಘೋಷಿಸಿದ್ದಾರೆ.
ಇತ್ತೀಚೆಗೆ ಸರ್ಪದೋಷ ನಿವಾರಣೆಗಾಗಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ದೇಗುಲಗಳಿಗೆ ಯುವರಾಜ್ ಸಿಂಗ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಜೊತೆ ಗೆಳತಿ ಹಜೆಲ್ ಕೀತ್ ಕೂಡಾ ಇದ್ದರು.
Story first published: Wednesday, January 3, 2018, 10:03 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications