ಯುವರಾಜ್ ಸಿಂಗ್ ಸಿಕ್ಕಿದ್ದು ನನ್ನ ಪುಣ್ಯ ಎಂದ ಹಜೆಲ್
ಬೆಂಗಳೂರು, ನ.16: ಟೀಮ್ ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಬಾಲಿವುಡ್ ನಟಿ ಹಜೆಲ್ ಕೀಚ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಟ್ವಿಟರ್ನಲ್ಲಿ ಖಚಿತಪಡಿಸಿದ್ದಾರೆ. 'ನನ್ನ ಜೀವದ ಗೆಳತಿ ಸಿಕ್ಕಿರುವ ಕಾರಣ ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ. ಹಜೆಲ್ ಕೂಡಾ ಯುವರಾಜ್ ಸಿಕ್ಕಿರುವುದು ನನ್ನ ಪುಣ್ಯ ಎಂದಿದ್ದಾರೆ. ಇಬ್ಬರಿಗೂ ಶುಭ ಹಾರೈಕೆಗಳ ಮಹಾಪೂರವೇ ಸಿಕ್ಕಿದೆ.
ನನ್ನ ತಾಯಿ ಹೇಳಿದಂತೆ ಹಜೆಲ್, ಗುಣನಡತೆಯಲ್ಲಿ ಆಕೆಯ ಪ್ರತಿರೂಪ' ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ. 'ಹೌದು, ನಾನು ಯುವರಾಜ್ ಸಿಂಗ್ರನ್ನು ಮದುವೆಯಾಗುತ್ತಿದ್ದೇನೆ. ಯುವಿಯಂಥ ವಿಶೇಷ ವ್ಯಕ್ತಿಯನ್ನು ಕಂಡುಕೊಂಡಿದ್ದಕ್ಕೆ ದೇವರಿಗೆ ಥ್ಯಾಂಕ್ಸ್ ಹೇಳುತ್ತೇನೆ' ಎಂದು 28 ವರ್ಷದ ಹಜೆಲ್ ಕೀಚ್ ಕೂಡ ಟ್ವೀಟ್ ಮಾಡಿದ್ದಾರೆ.
'ಮುಬಾರಕಾ ಮೇರೆ ವೀರ್.. ಬ್ಯಾಚುಲರ್ ಪಾರ್ಟಿಗೆ ನಮ್ಮೆಲ್ಲರನ್ನು ಎಲ್ಲಿಗೆ ಕರೆದುಕೊಂಡು ಹೋಗುವೆ ಮಿ. ಸಿಂಗ್' ಎಂದು ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗೆಳೆಯ ಹರ್ಭಜನ್ ಸಿಂಗ್ ಟ್ವೀಟಿಸಿದ್ದಾರೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ತಾರೆಯರಾದ ಅಭಿಷೇಕ್ ಬಚ್ಚನ್, ಸೋನಮ್ ಕಪೂರ್, ರಿತೇಶ್ ದೇಶ್ಮುಖ್ ಮತ್ತಿತರರು ಶುಭ ಹಾರೈಕೆ ಸಲ್ಲಿಸಿದ್ದಾರೆ.

ಹಜೆಲ್ ಟ್ವಿಟರ್ನಲ್ಲಿ ಖಚಿತಪಡಿಸಿದ್ದಾರೆ
ಇಂಡಿಯಾದ ಆಲ್ ರೌಂಡರ್ ಯುವರಾಜ್ ಸಿಂಗ್ ಬಾಲಿವುಡ್ ನಟಿ ಹ್ಯಾಜೆಲ್ ಕೀಚ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಟ್ವಿಟರ್ನಲ್ಲಿ ಖಚಿತಪಡಿಸಿದ್ದಾರೆ. ‘ನನ್ನ ಜೀವದ ಗೆಳತಿ ಸಿಕ್ಕಿರುವ ಕಾರಣ ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ.
ಬಾಡಿಗಾರ್ಡ್ ಚಿತ್ರದ ನಟಿ ಹಜೆಲ್
ಬಾಡಿಗಾರ್ಡ್ ಚಿತ್ರದ ನಟಿ ಹಜೆಲ್ ಟ್ವೀಟ್ ಮಾಡಿ ಯುವರಾಜ್ ಸಿಂಗ್ ಅದ್ಭುತ ವ್ಯಕ್ತಿ ಆತನನ್ನು ವರಿಸುತ್ತಿರುವ ಸುದ್ದಿ ನಿಜ ಎಂದಿದ್ದಾರೆ.
ಪತ್ರಕರ್ತ ರಾಹುಲ್ ಅವರಿಂದ ಶುಭ ಹಾರೈಕೆ
ಹೆಡ್ ಲೈನ್ಸ್ ಟುಡೆ ಸಂಸ್ಥೆ ಪತ್ರಕರ್ತ ರಾಹುಲ್ ಅವರಿಂದ ಯುವಿ ಹಾಗೂ ಹಜೆಲ್ ಗೆ ಶುಭ ಹಾರೈಕೆ.
ಸಾನಿಯಾ ಮಿರ್ಜಾ ರಿಂದ ಪಾರ್ಟಿಗೆ ಆಹ್ವಾನ
ಯುವಿ ಹಾಗೂ ಹಜೆಲ್ ಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ರಿಂದ ಪಾರ್ಟಿಗೆ ಆಹ್ವಾನ.
ನಟಿ ದಿವ್ಯಾದತ್ತರಿಂದ ಶುಭ ಹಾರೈಕೆ
ಯುವರಾಜ್ ಸಿಂಗ್ ಹಾಗೂ ಹಜೆಲ್ ಕೀಚ್ ಅವರಿಗೆ ಕಂಗ್ರಾಟ್ಸ್ ಎಂದ ನಟಿ ದಿವ್ಯಾದತ್ತ.
ನಿಶ್ಚಿತಾರ್ಥದ ಬಗ್ಗೆ ಯುವರಾಜ್ ಸಿಂಗ್ ರಿಂದ ಟ್ವೀಟ್
ನಿಶ್ಚಿತಾರ್ಥದ ಬಗ್ಗೆ ಯುವರಾಜ್ ಸಿಂಗ್ ರಿಂದ ಟ್ವೀಟ್
ಐಪಿಎಲ್ ತಂಡ ಕಿಂಗ್ಸ್ XI ಪಂಜಾಬ್ ನಿಂದ ವಿಶ್
ಐಪಿಎಲ್ ತಂಡ ಕಿಂಗ್ಸ್ XI ಪಂಜಾಬ್ ನಿಂದ ಯುವರಾಜ್ ಸಿಂಗ್ ಗೆ ವಿಶ್.
‘ಮುಬಾರಕಾ ಮೇರೆ ವೀರ್ ಎಂಬ ಭಜ್ಜಿ
‘ಮುಬಾರಕಾ ಮೇರೆ ವೀರ್.. ಬ್ಯಾಚುಲರ್ ಪಾರ್ಟಿಗೆ ನಮ್ಮೆಲ್ಲರನ್ನು ಎಲ್ಲಿಗೆ ಕರೆದುಕೊಂಡು ಹೋಗುವೆ ಮಿ. ಸಿಂಗ್' ಎಂದು ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಗೆಳೆಯ ಹರ್ಭಜನ್ ಸಿಂಗ್ ಟ್ವೀಟಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications