Yuvaraj singh: ಪುರಷರ ಟಿ20 ವಿಶ್ವಕಪ್‌ಗೆ ಯುವರಾಜ್ ಸಿಂಗ್ ಬ್ರಾಂಡ್ ಅಂಬಾಸಿಡರ್
ವೆಸ್ಟ್ ಇಂಡೀಸ್ ಮತ್ತು ಅಮೇರಿಕಾ ಅತಿಥ್ಯ ವಹಿಸಿರುವ 2024ರ ಟಿ20 ಪರುಷರ ವಿಶ್ವಕಪ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೀಮ್ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ದಂತಕಥೆ ಯುವರಾಜ್ ಸಿಂಗ್ ಅವರನ್ನು ಘೋಷಣೆ ಮಾಡಿದೆ.
2007 ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ನಲ್ಲಿ ಭಾರತ ಚಾಂಪಿಯನ್ ಆಗಿತ್ತು. ಈ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರಿಗೆ ಒಂದೇ ಓವರ್‌ನಲ್ಲಿ ಯುವರಾಜ್ ಸಿಂಗ್ ಆರು ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಜೊತೆಗೆ ಟಿ20 ಮಾದರಿ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಅತಿ ವೇಗದ ಅರ್ಧಶತಕ ದಾಖಲಿಸಿ ಯುವಿ ಮಿಂಚಿದ್ದರು. ಕೇವಲ ಬ್ಯಾಟಿಂಗ್ ಅಲ್ಲದೆ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶ ನೀಡಿರುವ ಯುವಿ ಘಟಾನುಘಟಿ ಬ್ಯಾಟರ್‌ಗಳ ವಿಕೆಟ್ ಪಡೆದಿದ್ದಾರೆ. ಹಾಗೆಯೇ ಮೈದಾನದಲ್ಲಿ ಉತ್ತಮ ಕ್ಷೇತ್ರ ರಕ್ಷಣೆ ಮಾಡುವುದರಲ್ಲೂ ಯುವರಾಜ್ ನಂಬರ್ ಒನ್.

ಹೀಗೆ ಚುಟುಕು ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಯುವಿ ಹಲವು ಮೈಲಿಗಲ್ಲುಗಳನ್ನು ತಲುಪಿದ್ದಾರೆ. ಇಂತಹ ಅಪರೂಪದ ಆಟಗಾರ ಯುವರಾಜ್ ಸಿಂಗ್ ಅವರಿಗೆ ಐಸಿಸಿ ಹೊಸ ಜಬಾವ್ದಾರಿ ನೀಡಿರುವುದು ಭಾರತೀಯರಿಗೆ ಇನ್ನಷ್ಟು ಸಂತಸ ತಂದಿದೆ.
ಈ ಬಗ್ಗೆ ಯುವರಾಜ್ ಕೂಡ ಖುಷಿ ಹಂಚಿಕೊಂಡಿದ್ದು, ಒಂದು ಓವರ್‌ನಲ್ಲಿ ಆರು ಸಿಕ್ಸರ್ ಹೊಡೆದಿರುವುದು ಸೇರಿದಂತೆ ಟಿ20 ವಿಶ್ವಕಪ್‌ನಲ್ಲಿ ನನ್ನ ಕೆಲವು ಅಚ್ಚು ಮೆಚ್ಚಿನ ಕ್ರಿಕೆಟ್ ನೆನಪುಗಳಿವೆ. ಆದ್ದರಿಂದ 2O24ರ ಟಿ20 ವಿಶ್ವಕಪ್ ಭಾಗವಾಗಲು ಬಹಳ ಸಂತಸವಾಗುತ್ತಿದೆ. ವೆಸ್ಟ್ ಇಂಡೀಸ್‌ನಲ್ಲಿ ಕ್ರಿಕೆಟ್ ಆಡಲು ಉತ್ತಮ ಸ್ಥಳ. ಆದರೆ ಯುಎಸ್‌ಎ ಕಡೆ ಕ್ರಿಕೆಟ್ ವಿಸ್ತರಿಸಿದ್ದು, ಈ ಬೆಳವಣಿಗೆಯ ಭಾಗವಾಗಲು ಕೂಡ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications