Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅತಿಹೆಚ್ಚು ಗೂಗಲ್ ಸರ್ಚ್ ಮಾಡಿದ ಆಟಗಾರ ಯಾರು ಗೊತ್ತಾ?

Yuvraj Singh most searched Indian sportsperson in 2019 in the country

2019 ಅಂತ್ಯವಾಗುತ್ತಾ ಬಂದಿದ್ದು ಹೊಸ ವರ್ಷವನ್ನು ಬರಮಾಡಿಕೊಳ್ಳು ಸಿದ್ಧತೆಗಳು ಆರಂಭವಾಗಿದೆ. ಈ ವರ್ಷದಲ್ಲಿ ಭಾರತದಲ್ಲಿ ಗೂಗಲ್‌ನಲ್ಲಿ ಯಾರು ಹೆಚ್ಚಾಗಿ ಹುಡುಕಾಟಕ್ಕೆ ಒಳಗಾಗಿದ್ದಾರೆ ಎಂಬ ವರದಿಯನ್ನು ಸ ಗೂಗಲ್ ಬಿಡುಗಡೆಗೊಳಿಸಿದೆ. ಕ್ರೀಡಾಪಟುಗಳಲ್ಲಿ ಯಾರು ಹೆಚ್ಚಾಗಿ ಸರ್ಚ್‌ಗೆ ಒಳಗಾಗಿದ್ದಾರೆ ಎಂಬ ಮಾಹಿತಿಕೂಡ ಹೊರ ಬಿದ್ದಿದೆ.

ಆದರೆ ಈ ಪಟ್ಟಿಯಲ್ಲಿ ಹಾಲಿ ಟೀಮ್ ಇಂಡಿಯಾದ ಆಟಗಾರರು ಮೊದಲ ಸ್ಥಾನವನ್ನು ಪಡೆಯದೆ, ಮಾಜಿನ ಆಟಗಾರ ಪಡೆದಿರೋದು ಕುತೂಹಲಕಾರಿ ಅಂಶ. ಈ ಆಟಗಾರ ಬೇರೆ ಯಾರೂ ಅಲ್ಲ. ವಿಶ್ವಕಪ್ ಹೀರೋ, ಸಿಕ್ಸರ್ ಕಿಂಗ್, ಯುವರಾಜ್ ಸಿಂಗ್.

ಈ ವರ್ಷ ಅಂತರಾಷ್ಟ್ರೀಯ ಪಂದ್ಯಗಳಿಂದ ಯುವರಾಜ್ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ ಯುವಿ ಬಗ್ಗೆ ಅಭಿಮಾನಿಗಳ ಪ್ರೀತಿ ಕಡಿಮೆಯಾಗಿಲ್ಲ ಅನ್ನೋದು ಈ ಮೂಲಕ ಬಹಿರಂಗವಾಗಿದೆ. ಗೂಗಲ್ ನಲ್ಲಿ ಈ ವರ್ಷ ಕೊಹ್ಲಿ, ರೋಹಿತ್ ಶರ್ಮಾ ಧೋನಿ ಅವರನ್ನು ಹಿಂದಿಕ್ಕಿ ಯುವಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಬರ್ಡೇ ಗಿಫ್ಟ್ ನೀಡಿದ ಗೂಗಲ್

ಬರ್ಡೇ ಗಿಫ್ಟ್ ನೀಡಿದ ಗೂಗಲ್

ಸಿಕ್ಸರ್ ಕಿಂಗ್ ಯುವರಾಜ್ ಇವತ್ತು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಗೂಗಲ್ ಈ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದ್ದು ಅಭಿಮಾನಿಗಳಿಗೆ ಮತ್ತಷ್ಟು ಸಂಭ್ರಮವನ್ನು ಹೆಚ್ಚಿಸಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಯುವಿ

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಯುವಿ

ಯುವರಾಜ್ ಸಿಂಗ್ ಇದೇ ವರ್ಷ ತಮ್ಮ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿಯನ್ನು ಹೇಳಿದ್ದಾರೆ. ಮಾತ್ರವಲ್ಲದೆ ಐಪಿಎಲ್‌ನಿಂದಲೂ ನಿವೃತ್ತಿಯನ್ನು ಪಡೆದುಕೊಂಡರು. ಬಳಿಕ ಯುವರಾಜ್ ಕೆನಡಾ ಟಿ20 ಲೀಗ್‌ನಲ್ಲಿ ಭಾಗಿಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಯುವರಾಜ್ ಜೊತೆ ಪಂಜಾಬಿ ಮಾತನಾಡಿದ ವಾಲ್ಟನ್: ತಮಾಷೆಯ ವಿಡಿಯೋ

ಒಟ್ಟಾರೆ ಹುಡುಕಾಟದಲ್ಲೂ ಯುವಿಗೆ ಸ್ಥಾನ

ಒಟ್ಟಾರೆ ಹುಡುಕಾಟದಲ್ಲೂ ಯುವಿಗೆ ಸ್ಥಾನ

ಯುವರಾಜ್ ಸಿಂಗ್ ಕೇವಲ ಕ್ರೀಡಾಪಟುಗಳ ವಿಭಾಗದಲ್ಲಿ ಮಾತ್ರವೇ ಟಾಪ್ ಅನಿಸಿಕೊಂಡಿಲ್ಲ. ಒಟ್ಟಾರೆ ಹುಡುಕಾಟದಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೊದಲ ಸ್ಥಾನವನ್ನು ಭಾರತೀಯ ವಾಯುಸೇನೆಯ ಫೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಡೆದರೆ ಎರಡನೇ ಸ್ಥಾನದಲ್ಲಿ ಹಿರಿಯ ಗಾಯಕಿ ಲತಾ ಮಂಗೇಷ್ಕರ್ ಇದ್ದಾರೆ.

ಅತಿಹೆಚ್ಚು ಸರ್ಚ್‌ಗೆ ಒಳಗಾಗದ ಕ್ರೀಡಾಕೂಟ

ಅತಿಹೆಚ್ಚು ಸರ್ಚ್‌ಗೆ ಒಳಗಾಗದ ಕ್ರೀಡಾಕೂಟ

ವಿಶ್ವಕಪ್ ಟೂರ್ನಿ ಅತಿಹೆಚ್ಚು ಹುಡುಕಾಡಿದ ಕ್ರೀಡಾಕೂಟದಲ್ಲಿ ಮೊದಲ ಸ್ಥಾನದಲ್ಲಿದೆ. ಅದಾದ ಬಳಿಕ ಪ್ರೋಕಬ್ಬಡ್ಡಿ ಟೂರ್ನಿ ಹೆಚ್ಚು ಹುಡುಕಾಟವಾಗಿದೆ. ಆಶ್ವರ್ಯ ಏನೆಂದರೆ ಗೂಗಲ್ ಇಂಡಿಯಾ ನೀಡಿರುವ ಈ ವರದಿಯ ಪ್ರಕಾರ ಐಪಿಎಲ್ ಮೊದಲ ಹತ್ತರಲ್ಲಿ ಸ್ಥಾನವನ್ನೇ ಪಡೆದಿಲ್ಲ.

Story first published: Thursday, December 12, 2019, 15:52 [IST]
Other articles published on Dec 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+