For Quick Alerts
ALLOW NOTIFICATIONS  
For Daily Alerts
 

ಅಬುಧಾಬಿ ಟಿ10ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಸಿಕ್ಸರ್ ಕಿಂಗ್ ಯುವರಾಜ್‌ ಸಿಂಗ್

Yuvraj Singh named icon player in Abu Dhabi T10 tournament

ಅಬುಧಾಬಿ, ಅಕ್ಟೋಬರ್ 24: ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿರುವ ಅಬುಧಾಬಿ ಟಿ10ನಲ್ಲಿ ಬ್ಯಾಟ್‌ ಬೀಸಲಿದ್ದಾರೆ. ನವೆಂಬರ್ 15-24ರ ವರೆಗೆ ಈ ಟೂರ್ನಿ ನಡೆಯಲಿದೆ. ಯುವಿ ಟೂರ್ನಿಯ ಐಕಾನ್ ಪ್ಲೇಯರ್ ಆಗಿ ಹೆಸರಿಸಲ್ಪಟ್ಟಿದ್ದಾರೆ.

ಯುವರಾಜ್ ಸಿಂಗ್ ಮರಾಠಾ ಅರೇಬಿಯನ್ಸ್ ಪರ ಆಡಲಿದ್ದಾರೆ. ಈ ತಂಡಕ್ಕೆ ಜಿಂಬಾಂಬ್ವೆ ಮಾಜಿ ನಾಯಕ ಮತ್ತು ಇಂಗ್ಲೆಂಡ್‌ನ ಮಾಜಿ ಮುಖ್ಯ ಕೋಚ್‌, ಆ್ಯಂಡಿ ಫ್ಲವರ್ ಮುಖ್ಯ ಕೋಚ್‌ ಆಗಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದ ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ವೇನ್ ಬ್ರಾವೋ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಮರಾಠಾ ಅರೇಬಿಯನ್ಸ್ ತಂಡದಲ್ಲಿ ಶ್ರೀಲಂಕಾ ಟಿ20 ತಂಡದ ನಾಯಕ ಲಸಿತ್ ಮಾಲಿಂಗ, ಅಫ್ಘಾನಿಸ್ತಾನದ ಜೋಡಿ ಹಝರತುಲ್ಲ ಝಝಾಯ್ ಮತ್ತು ನಜೀಬುಲ್ಲ ಝದ್ರನ್, ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಲಿನ್‌ ಇದ್ದಾರೆ. ಲಿನ್ ಕೂಡ ತಂಡದ ಐಕಾನ್ ಪ್ಲೇಯರ್ ಆಗಿ ಹೆಸರಿಸಲ್ಪಟ್ಟಿದ್ದಾರೆ.

ಮರಾಠಾ ಅರೇಬಿಯನ್ಸ್ ತಂಡ ಸೇರಿಕೊಂಡಿರುವ ಬಗ್ಗೆ ಮಾತನಾಡಿರುವ ಸಿಂಗ್, 'ಹೊಸ ಮಾದರಿಯ ಕ್ರಿಕೆಟ್‌ ಟೂರ್ನಿಯ ಭಾಗವಾಗಿರುವುದಕ್ಕೆ ಬಹಳ ಖುಷಿಯಾಗಿದೆ. ಮರಾಠಾ ಅರೇಬಿಯನ್ಸ್‌ ಪರ ನಾನು ವಿಶ್ವ ಶ್ರೇಷ್ಠ ಕ್ರಿಕೆಟರ್‌ ತಂಡ ಸೇರಿಕೊಳ್ಳುತ್ತಿದ್ದೇನೆ,' ಎಂದಿದ್ದಾರೆ.

Story first published: Thursday, October 24, 2019, 16:08 [IST]
Other articles published on Oct 24, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+