For Quick Alerts
ALLOW NOTIFICATIONS  
For Daily Alerts
 

ತನ್ನ ಬಯೋಪಿಕ್‌ಗೆ ನಟನ ಆರಿಸಿದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್

Yuvraj Singh names actor he would like to see play him in biopic

ನವದೆಹಲಿ, ಮಾರ್ಚ್ 26: ಒಂದುವೇಳೆ ತನ್ನ ಬಯೋಪಿಕ್ ಮಾಡಿದರೆ ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ನಟಿಸಬೇಕು ಎಂದು ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ತನ್ನ ಚಿತ್ರದಲ್ಲಿ ತಾನೇ ನಟಿಸಬಲ್ಲೆ ಎಂದೂ ಯುವಿ ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ ಪಂಜಾಬ್‌ ಶೇರ್ ಯುವಿ, 'ಬಹುಶ ನನ್ನ ಚಿತ್ರದಲ್ಲಿ ನಾನೇ ನಟಿಸುತ್ತೇನೆ. ಆದರೆ ಅದು ಬಹಳ ಕೆಟ್ಟದಾಗಿರುತ್ತದೆ, ಅಲ್ವಾ?' ಎಂದು ಮರುಪ್ರಶ್ನಿಸಿದವರೆ ಜೋರಾಗಿ ನಕ್ಕುಬಿಟ್ಟರು. ಮಾತು ಮುಂದುವರೆಸಿದ ಯುವಿ ತನಗೆ ಸಿದ್ಧಾಂತ್ ಸಿನಿಮಾಗಳು ಇಷ್ಟ ಎಂದೂ ತಿಳಿಸಿದ್ದಾರೆ.

ತನ್ನ ಬಯೋಪಿಕ್ ಬಗ್ಗೆ ಮಾತನಾಡಿದ ಸಿಂಗ್, 'ನೋಡಿ, ಬಯೋಪಿಕ್ ಮಾಡಬೇಕಾಗಿ ಬಂದರೆ ನನ್ನ ಪಾತ್ರಕ್ಕೆ ನಟ ಯಾರಾಗಬೇಕು ಎಂದು ನಿರ್ದೇಶಕರು ನಿರ್ಧರಿಸುತ್ತಾರೆ. ಆ ಕೆಲಸ ಅವರದ್ದು. ಬಾಲಿವುಡ್‌ಗೆ ಬಂದರೆ ಇಲ್ಲಿ ನನ್ನ ಪ್ರಕಾರ ಸಿದ್ಧಾಂತ್ ಚತುರ್ವೇದಿ ಉತ್ತಮ ಆಯ್ಕೆ. ಚಿತ್ರದಲ್ಲಿ ಆತನನ್ನು ನೋಡಲು ನನಗಿಷ್ಟ,' ಎಂದರು.

ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಯುವರಾಜ್ ಸಿಂಗ್, ಸದ್ಯ ಗ್ಲೋಬಲ್ ಟಿ20 ಕೆನಡಾ, ಅಬುದಾಬಿ ಟಿ10 ಲೀಗ್‌ನಂತ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗೆ ರದ್ದಾದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2020ಯಲ್ಲಿ ಯುವಿ, ಇಂಡಿಯಾ ಲೆಜೆಂಡ್ಸ್‌ ಪ್ರತಿನಿಧಿಸಿದ್ದರು.

Story first published: Thursday, March 26, 2020, 16:09 [IST]
Other articles published on Mar 26, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+