ಟೀಮ್ ಇಂಡಿಯಾ ಈ ವರೆಗೂ ಅದೆಷ್ಟೋ ಸ್ಟಾರ್ ಆಲ್‌ರೌಂಡರ್‌ಗಳನ್ನು ನೋಡಿದೆ. ಅದರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಇಬ್ಬರು ಆಟಗಾರರು ಎಂದರೆ ಯುವರಾಜ್ ಸಿಂಗ್, ಕಪಿಲ್ ದೇವ್. ಇಬ್ಬರು ಶ್ರೇಷ್ಠ ಆಟದ ಮೂಲಕ ತಂಡಕ್ಕೆ ನೆರವಾದ ಆಟಗಾರರು. ಕಪಿಲ್ ದೇವ್ 1983 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರೆ, ಯುವಿ 2007 ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ತಮ್ಮದೇ ಪಾತ್ರವನ್ನು ವಹಿಸಿದ್ದಾರೆ.
ಯುವರಾಜ್ ಸಿಂಗ್ ಅವರನ್ನು ಟೀಮ್ ಇಂಡಿಯಾದ ಟ್ರಬಲ್ ಶೂಟರ್ ಎಂದೆ ಕರೆಯುತ್ತಾರೆ. ಯಾವುದೇ ಸನ್ನಿವೇಶವಿದ್ದರೂ ಯುವಿ ಅಖಾಡಕ್ಕೆ ಎಂಟ್ರಿ ನೀಡಿದರೆ, ತಮ್ಮ ಪರವಾಗಿ ಮಾಡಿಕೊಳ್ಳುವಂತಹ ಕ್ಷಮತೆ ಅವರಿಗಿತ್ತು. ಆದರೆ 2011ರ ವಿಶ್ವಕಪ್ ವೇಳೆ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಯುವಿ ವಿದೇಶದಲ್ಲಿ ಟ್ರಿಟ್ಮೆಂಟ್ ಪಡೆದು ಮಹಾಮಾರಿಯನ್ನು ಸೋಲಿಸಿ ತವರಿಗೆ, ಮತ್ತೆ ಅಖಾಡದಲ್ಲಿ ಅಬ್ಬರಿಸಿದ್ದರು. ಆದರೆ ಅವರ ತಂದೆಯ ಹಳೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಈ ಹಳೆಯ ವಿಡಿಯೋದಲ್ಲಿ ಯುವರಾಜ್ ಸಿಂಗ್ ತಂದೆ, ಯೋಗರಾಜ್ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಅವರು ಮಹೇಂದ್ರ ಸಿಂಗ್ ಧೋನಿ ಮತ್ತು ಕಪಿಲ್ ದೇವ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಈ ಮಧ್ಯೆ, ಯುವರಾಜ್ ತನ್ನ ತಂದೆಯ ಬಗ್ಗೆ ಹೇಳಿಕೆ ನೀಡಿದ್ದ ಹಳೆಯ ವಿಡಿಯೋ ವೈರಲ್ ಆಗುತ್ತಿದೆ.
ಯೋಗರಾಜ್ ಸಹ ಒಬ್ಬ ಮಾಜಿ ಕ್ರಿಕೆಟ್ ಆಟಗಾರ. ಇವರು ಭಾರತದ ಪರ ಕೇವಲ ಒಂದು ಟೆಸ್ಟ್ ಪಂದ್ಯ ಮತ್ತು 6 ODI ಪಂದ್ಯಗಳನ್ನು ಆಡಿದ್ದಾರೆ. ಇವರು ಸಂದರ್ಶನದಲ್ಲಿ ಮಹೇಂದ್ರ ಸಿಂಗ್ ಧೋನಿಯರನ್ನು ಗುರಿಯಾಗಿಸಿದ್ದಾರೆ. ಇದರಲ್ಲಿ ಯೋಗರಾಜ್ ಎಂಎಸ್‌ಡಿ ತಮ್ಮ ಮುಖವನ್ನು ಒಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇನ್ನು ಕಪಿಲ್ ದೇವ್ ಬಗ್ಗೆಯೂ ಅವರ ಟೀಕೆಗಳನ್ನು ಮಾಡಿದ್ದಾರೆ.

ತಂದೆ ಯೋಗರಾಜ್ ಅವರ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಾಜಿ ಆಲ್‌ರೌಂಡರ್ ಯುವಿ ಹಳೆಯ ವಿಡಿಯೋ ಸಹ ವೈರಲ್ ಆಗುತ್ತಿದೆ. ಇದರಲ್ಲಿ ಅವರು ರಣವೀರ್ ಅಲಹಬಾಡಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ನನ್ನ ತಂದೆಗೆ ಮಾನಸಿಕ ಸಮಸ್ಯೆ ಇದೆ ಎಂದು ತಿಳಿಸಿದ್ದಾರೆ..
ಯುವರಾಜ್ ಸಿಂಗ್ ಭಾರತ ಕಂಡ ಅಪ್ರತಿಮ ಆಲ್‌ರೌಂಡರ್. ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ 6 ಸಿಕ್ಸರ್‌ಗಳನ್ನು ಸಿಡಿಸಿದ ಏಕೈಕ ಭಾರತೀಯ ಆಟಗಾರ ಯುವರಾಜ್ ಸಿಂಗ್. ಯುವರಾಜ್ ಭಾರತದ ಪರ ಮೂರು ಮಾದರಿಗಳಲ್ಲಿ ಕಣಕ್ಕೆ ಇಳಿದಿದ್ದಾರೆ. ಟೀಂ ಇಂಡಿಯಾ ಪರ 40 ಟೆಸ್ಟ್‌ಗಳಲ್ಲಿ 1900 ರನ್, 304 ಏಕದಿನ ಪಂದ್ಯಗಳಲ್ಲಿ 8701 ರನ್ ಮತ್ತು 58 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1177 ರನ್ ಗಳಿಸಿದ್ದಾರೆ.