ಅಂಕಿಗಳಲ್ಲಿ 'ಸಿಕ್ಸರ್ ಕಿಂಗ್' ಯುವರಾಜ್ ವೃತ್ತಿ ಬದುಕಿನ ಹಿನ್ನೋಟ

ಬೆಂಗಳೂರು, ಜೂನ್ 10: ಟೀಂ ಇಂಡಿಯಾದ ವಿಶ್ವಕಪ್ ಹೀರೋ, ಸಿಕ್ಸರ್ ಕಿಂಗ್, ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ತಮ್ಮ 19 ವರ್ಷದ ವೃತ್ತಿ ಬದುಕಿಗೆ ಜೂನ್ 10, 2019ರಂದು ವಿದಾಯ ಹೇಳಿದ್ದಾರೆ. ಸಾಕಷ್ಟು ಏಳು ಬೀಳು ಕಂಡ ಯುವಿ ಅವರು ಬದುಕಿನ ಚಿತ್ರಣವನ್ನು ಅಂಕಿ ಅಂಶಗಳ ಮೂಲಕ ತೆರೆದಿಡಲಾಗಿದೆ.
1996ರಲ್ಲಿ ಅಂಡರ್ 15 ವಿಶ್ವಕಪ್, 2000ರಲ್ಲಿ ಅಂಡರ್ 19 ವಿಶ್ವಕಪ್, 2007ರಲ್ಲಿ ಟಿ20 ವಿಶ್ವಕಪ್, 2011ರ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಯುವರಾಜ್ ಸಿಂಗ್ ಅವರು ವಿಶ್ವಕಪ್ ಹೀರೋ ಆಗಿ, 2007ರಲ್ಲಿ ಇಂಗ್ಲೆಂಡಿನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಕ್ರಿಕೆಟರ್ ಆಗಿ ಅಭಿಮಾನಿಗಳ ಅಚ್ಚು ಮೆಚ್ಚಿನ ಆಟಗಾರರಾಗಿ ಗುರುತಿಸಲ್ಪಟ್ಟಿದ್ದಾರೆ. ಭಾರತದ ಹಿರಿಯ ಕ್ರಿಕೆಟರ್, ಆಲ್ ರೌಂಡರ್, ಟಿ20 ಸ್ಪೆಷಲಿಸ್ಟ್ ಯುವರಾಜ್ ಸಿಂಗ್ ಅವರು ಇನ್ಮುಂದೆ ವಿವಿಧ ಟಿ20 ಟೂರ್ನಮೆಂಟ್ ಗಳಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ಯುವರಾಜ್ ವೃತ್ತಿ ಬದುಕಿನ ಚಿತ್ರಣ :
* 12: ಡಿಸೆಂಬರ್ 12 ಯುವಿ ಹುಟ್ಟಿದ ದಿನಾಂಕ. ಯುವಿ ಜರ್ಸಿ ಸಂಖ್ಯೆ ಕೂಡಾ 12.
* 301: 304 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 301ಬಾರಿ ಬ್ಯಾಟ್ ಬೀಸಿರುವ ಯುವಿ, ಸಾರ್ವಕಾಲಿಕ ಅತಿ ಹೆಚ್ಚು ಆಟಗಾರರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.
* 8701: ಏಕದಿನ ಕ್ರಿಕೆಟ್ ನಲ್ಲಿ ಯುವಿ ಗಳಿಸಿದ ರನ್ ಗಳು. ಯುವಿಗಿಂತ 6 ಮಂದಿ ಭಾರತದ ಬ್ಯಾಟ್ಸ್ ಮನ್ ಗಳು ಅಧಿಕ ರನ್ ಗಳಿಸಿದ್ದಾರೆ.
* 40: ಯುವಿ ಆಡಿರುವ ಒಟ್ಟು ಟೆಸ್ಟ್ ಪಂದ್ಯಗಳು, 1900ರನ್ ಗಳಿಸಿದ್ದಾರೆ.
* 58 : ಯುವಿ ಆಡಿರುವ ಟಿ20ಐ ಪಂದ್ಯಗಳು, 1177 ರನ್ ಗಳಿಕೆ.
* 169: ಟೆಸ್ಟ್ ಕ್ರಿಕೆಟ್ ನಲ್ಲಿ ಯುವಿ ಗರಿಷ್ಠ ಮೊತ್ತ, 2007ರಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದರು.
* 12: ತ್ವರಿತಗತಿಯಲ್ಲಿ ಟಿ20ಐ ಅರ್ಧಶತಕ ಗಳಿಸಲು ಕೇವಲ 12 ಎಸೆತ ಮಾತ್ರ ಯುವಿಗೆ ಸಾಕಾಗಿತ್ತು. ಇಂಗ್ಲೆಂಡ್ ವಿರುದ್ಧ 2007ರಲ್ಲಿ ಈ ಸಾಧನೆ ಮಾಡಿದರು. ಗೇಲ್, ಝಝಾಯಿ ಕೂಡಾ ಈ ಸಾಧನೆ ಮಾಡಿದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವಿ ದಾಖಲೆ ಯಾರೂ ಮುರಿದಿಲ್ಲ.
* 1: ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್, ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಯುವರಾಜ್ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ಕ್ಷಣ ಮರೆಯುವಂತಿಲ್ಲ. ಐಪಿಎಲ್ ನಲ್ಲಿ ಕೊನೆಯ ಬಾರಿಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದು, 1 ಕೋಟಿ ರು ಗೆ.
* 7: 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಯುವಿ ಗಳಿಸಿದ ಶತಕಗಳ ಸಂಖ್ಯೆ, ಈ ಸಾಧನೆ ಮಾಡಿದ ಏಕೈಕ ಒಡಿಐ ಬ್ಯಾಟ್ಸ್ ಮನ್
* 3 : 3 ಐಸಿಸಿ ಟ್ರೋಫಿ ಗೆದ್ದಿರುವ ಯುವರಾಜ್, 2002ರಲ್ಲಿ ಚಾಂಪಿಯನ್ ಟ್ರೋಫಿ, 2007ರಲ್ಲಿ ವಿಶ್ವಟಿ20, 2011ರ ವಿಶ್ವಕಪ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications