For Quick Alerts
ALLOW NOTIFICATIONS  
For Daily Alerts
 

T20 World Cup 2024: ವಿರಾಟ್‌ ಕೊಹ್ಲಿ ವಿಶ್ವ ಶ್ರೇಷ್ಠ ಬ್ಯಾಟರ್‌ ಆಗಿದ್ದೇಗೆ?; ಗುಟ್ಟು ಬಿಟ್ಟು ಕೊಟ್ಟ ಯುವರಾಜ್‌ ಸಿಂಗ್

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು. ಕಳೆದ ಒಂದು ದಶಕದಿಂದ ಕ್ರಿಕೆಟ್‌ ಲೋಕದಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಮುರಿದು ಹೊಸ ಮೈಲಿಗಲ್ಲು ತಲುಪಿದ್ದಾರೆ.

ಹೀಗಾಗಿ ಯಾವುದೇ ಮಾದರಿ ಕ್ರಿಕೆಟ್‌ನಲ್ಲೂ ವಿರಾಟ್‌ ಕೊಹ್ಲಿ ಹೆಸರು ಮುಂಚೂಣಿಯಲ್ಲಿರುತ್ತದೆ. ಇಂತಹ ಅಪರೂಪದ ಕ್ರಿಕೆಟಿಗ ಟೀಮ್‌ ಇಂಡಿಯಾದಲ್ಲಿರುವುದು ಹಲವು ಯುವ ಆಟಗಾರರಿಗೆ ಸ್ಪೂರ್ತಿ ಆಗಿದೆ. ಇಷ್ಟರ ಮಟ್ಟಿಗೆ ವಿರಾಟ್‌ ಕೊಹ್ಲಿ ಕ್ರಿಕೆಟ್‌ನಲ್ಲಿ ಹೆಸರು ಮಾಡಲು ಆನೇಕ ರೀತಿಯಲ್ಲಿ ಹಲವರು ವಿರ್ಮಶೆ ಮಾಡುತ್ತಾರೆ.

Yuvraj Singh reveals the secret of Virat Kohli success in Cricket

ಆದರೆ ಕೊಹ್ಲಿಯನ್ನು ಬಹಳ ಹತ್ತಿರದಿಂದ ನೋಡಿರುವ ಸಿಕ್ಸರ್‌ ಕಿಂಗ್‌ ಖ್ಯಾತಿಯ ಟೀಮ್‌ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿರುವ ಯುವರಾಜ್ ಸಿಂಗ್ ಅವರು ವಿರಾಟ್‌ ಯಶಸ್ಸಿನ ಗುಟ್ಟನ್ನು ತಿಳಿಸಿದ್ದಾರೆ. ಇತ್ತೀಚೆಗೆ ಟಿ20 ಅಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್‌ನ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಹೀಗಾಗಿ ಟಿ20 ವಿಶ್ವಕಪ್‌ಗೂ ಮೊದಲು ತಮ್ಮ ಮಾಜಿ ಸಹ ಆಟಗಾರನ ಬೆಂಬಲಕ್ಕೆ ಯುವರಾಜ್‌ ಸಿಂಗ್‌ ನಿಂತಿದ್ದಾರೆ.

ಕೊಹ್ಲಿ ತಮ್ಮ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ನಾನು ಕೊನೆಯವರೆಗೂ ಕ್ರೀಸ್‌ನಲ್ಲಿದ್ದರೆ ಪಂದ್ಯವನ್ನು ಗೆಲ್ಲಬಹುದು ಎಂದು ತಿಳಿದಿದ್ದಾರೆ. ಈ ಹಿಂದೆ ಕೂಡ 2016ರ ಟಿ20 ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್‌ ಕೊಹ್ಲಿ ಕೊನೆವರೆಗೂ ಉಳಿದುಕೊಂಡು 52 ಎಸೆತಗಳಲ್ಲಿ ಅಜೇಯ 82* ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಇದನ್ನು ಕೊಹ್ಲಿ ಕೂಡ ನೆನಪಿಸಿಕೊಳ್ಳುತ್ತಾರೆ ಜೊತೆಗೆ ನಾನು ಕೂಡ ಮೆಲುಕು ಹಾಕುತ್ತಿರುತ್ತೇನೆ ಎಂದು ಯುವರಾಜ್‌ ಸಿಂಗ್‌ ಹೇಳಿದ್ದಾರೆ.

Yuvraj Singh reveals the secret of Virat Kohli success in Cricket

ಒಮ್ಮೆ ಗುರಿಯನ್ನು ಬೆನ್ನಟ್ಟುವ ಪರಿಸ್ಥಿತಿಯನ್ನು ತಿಳಿದುಕೊಂಡರೆ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಕೊಹ್ಲಿಗೆ ತಿಳಿದಿದೆ. ಜೊತೆಗೆ ಯಾವ ಬೌಲರ್ ಅನ್ನು ಆಟ್ಯಾಕ್‌ ಮಾಡಿ ರನ್‌ ಗಳಿಸಬೇಕೆಂದು ಕೂಡ ತಿಳಿದಿದೆ. ಬಳಿಕ ಯಾವ ಓವರ್‌ನಲ್ಲಿ ಯಾವ ಬೌಲರ್‌ ನನ್ನು ಮತ್ತೆ ಆಟ್ಯಾಕ್‌ ಮಾಡಬೇಕೆಂದು ಚೆನ್ನಾಗಿ ತಿಳಿದುಕೊಂಡಿದ್ದಾನೆ. ಅಲ್ಲದೆ, ಪಂದ್ಯದ ವೇಳೆ ಹೇಗೆ ಒತ್ತಡವನ್ನು ನಿಭಾಯಿಸಬೇಕು ಮತ್ತು ತಮ್ಮ ಆಟವನ್ನು ಯಾವಾಗ ಬದಲಾಯಿಸಬೇಕು ಎಂದು ಕೂಡ ಕೊಹ್ಲಿ ಚೆನ್ನಾಗಿ ಗೊತ್ತಿದೆ.

ಪ್ರತಿ ಬಾರಿಯೂ ನೆಟ್‌ನಲ್ಲಿ ಕೇವಲ ಬ್ಯಾಟಿಂಗ್‌ ಅಭ್ಯಾಸ ಮಾಡುತ್ತಾರೆ. ಆದರೆ ಬೌಲಿಂಗ್‌ ಮಾಡಲು ಹೋಗುವುದಿಲ್ಲ . ನೆಟ್‌ನಲ್ಲಿಯೂ ಕೊಹ್ಲಿ ಯಾವಾಗಲೂ ಪಂದ್ಯದಲ್ಲಿ ಆಡುವಂತೆ ಮಾಡುವಂತೆ ಬ್ಯಾಟಿಂಗ್‌ ಮಾಡುತ್ತಾರೆ. ಕೊಹ್ಲಿ ಯಶಸ್ಸಿಗೆ ಪ್ರಮುಖ ಕಾರಣವಾದ ಅನೇಕ ಆಟಗಾರರಲ್ಲಿ ನಾನು ಈ ರೀತಿ ಅಭ್ಯಾಸ ಮಾಡುವುದನ್ನು ನೋಡಿಲ್ಲ. ಹೀಗಾಗಿ ಕೊಹ್ಲಿ ಕ್ರಿಕೆಟ್‌ನಲ್ಲಿ ಸಾಧನೆ ಶಿಖರವನ್ನು ಏರಿದ್ದಾರೆ ಎಂದು ಯುವರಾಜ್‌ ಸಿಂಗ್‌ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಈ ತಲೆಮಾರಿನ ಅತ್ಯುತ್ತಮ ಬ್ಯಾಟರ್ ಎಂದು ನಾನು ಭಾವಿಸುತ್ತೇನೆ. ವಿರಾಟ್‌ ಈಗಾಗಲೇ ಒಂದು ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆದರೆ ಆ ಒಂದು ಪ್ರಶಸ್ತಿಯಿಂದ ವಿರಾಟ್‌ ತೃಪ್ತರಾಗಿಲ್ಲ ಎಂದು ನನಗೆ ಗೊತ್ತಿದೆ. ಹೀಗಾಗಿ ಕೊಹ್ಲಿ ಈ ಬಾರಿಯ ಟಿ20 ವಿಶ್ವಕಪ್‌ಗೆ ಅರ್ಹರು ಎಂದು ನಾನು ಹೇಳುತ್ತೇನೆ ಎಂದು ಯುವರಾಜ್‌ ಸಿಂಗ್‌ ನುಡಿದ್ದಾರೆ.

Story first published: Thursday, May 9, 2024, 18:32 [IST]
Other articles published on May 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+