ರೈತರ ಪ್ರತಿಭಟನೆಗೆ ಯುವರಾಜ್ ಸಿಂಗ್ ತಂದೆ ಬೆಂಬಲ, ವಿವಾದ ಸೃಷ್ಠಿ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಎರಡು ಬಾರಿಯ ವಿಶ್ವಕಪ್ ವಿಜೇತ ಕ್ರಿಕೆಟರ್ ಯುವರಾಜ್ ಸಿಂಗ್ ತಂದೆ, ಮಾಜಿ ಕ್ರಿಕೆಟರ್ ಯೋಗ್ರಾಜ್ ಸಿಂಗ್ ಬೆಂಬಲ ಸೂಚಿಸಿದ್ದಾರೆ. ಆದರೆ ಪ್ರತಿಭಟನಾ ಭಾಷಣದ ವೇಳೆ ಯೋಗ್ರಾಜ್ ಹೇಳಿಕೆ ವಿವಾದ ಸೃಷ್ಠಿಸಿದೆ.
ದೆಹಲಿ ಗಡಿಯಲ್ಲಿ ಉತ್ತರ ಪ್ರದೇಶ, ರಾಜಸ್ಥಾನ್ ಮತ್ತು ಹರ್ಯಾಣದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೋದಿಯ ಬಿಜೆಪಿ ಸರ್ಕಾರ ತಂದಿರುವ ಕೃಷಿ ಮಸೂದೆಗಳು ರೈತ ವಿರೋಧಿಯಾಗಿದೆ. ಮಾರಾಟಗಾರರ, ದೊಡ್ಡ ಸಂಸ್ಥೆಗಳ ಪರವಾಗಿದೆ ಎಂದು ರೈತರು ಪ್ರತಿಭಟಿಸುತ್ತಿದ್ದಾರೆ.
ಆದರೆ ಪ್ರತಿಭಟನೆಗೆ ಜಗ್ಗದ ಸರ್ಕಾರ ಪೊಲೀಸರನ್ನು ಮುಂದಿಟ್ಟು ಟಿಯರ್ ಗ್ಯಾಸ್, ಜಲಫಿರಂಗಿ, ಲಾಠಿ ಚಾರ್ಜ್ ಮೂಲಕ ರೈತರನ್ನು ಹಿಮ್ಮೆಟ್ಟಿಸಲು ಯತ್ನಿಸಿತ್ತು. ಈ ಘಟನೆ ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಹೀಗಾಗಿ ಯುವಿ ತಂದೆ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಭಾವೋದ್ವೇಗದ ಹೇಳಿಕೆ ನೀಡಿದ್ದರು. ಆದರೆ ಯುವಿ ತಂದೆಯ ಹೇಳಿಕೆ ಹಿಂದೂ ವಿರೋಧಿಯಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸತೊಡಗಿದ್ದಾರೆ.
ರೈತರಿಗೆ ಬೆಂಬಲ ಸೂಚಿಸಿದ್ದಕ್ಕೆ ಯುವಿ ತಂದೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಮಂದಿ ಮೆಚ್ಚುಗೆ ವ್ಯಕಪಡಿಸುತ್ತಿದ್ದಾರೆ. ಇನ್ನು ಕೆಲವರು ಯೋಗ್ರಾಜ್ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸತೊಡಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ #ArrestYograjSingh ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications