ಟೊರೊಂಟೊ ನ್ಯಾಷನಲ್ಸ್ ಪರ ಬ್ಯಾಟ್ ಬೀಸಲಿದ್ದಾರೆ ಯುವರಾಜ್ ಸಿಂಗ್

ಒಟ್ಟಾವಾ, ಜೂನ್ 21: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿದ್ದ ಯುವರಾಜ್ ಸಿಂಗ್ ಗ್ಲೋಬಲ್ ಟಿ20 ಕೆನಾಡಾ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪಂದ್ಯಾಟದಲ್ಲಿ ಟೊರೊಂಟೊ ನ್ಯಾಷನಲ್ಸ್ ಪರ ಯುವಿ ಬ್ಯಾಟ್ ಬೀಸಲಿದ್ದಾರೆ. ಜುಲೈ 25ರಿಂದ ಈ ಟೂರ್ನಿ ಆರಂಭಗೊಳ್ಳಲಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಕೆನಡಿಯನ್ ಟಿ20 ಲೀಗ್ ಅಧಿಕೃತ ಟ್ವಿಟರ್ ಖಾತೆ ಈ ವಿಚಾರವನ್ನು ಖಾತರಿಪಡಿಸಿದೆ. ಕೆಲ ದಿನಗಳ ಹಿಂದಷ್ಟೆ ಯುವಿ, ಬಿಸಿಸಿಐಗೆ ಐಪಚಾರಿಕ ಪತ್ರ ಬರೆದು, ಅಂತಾರಾಷ್ಟ್ರೀಯ ಟಿ20 ಲೀಗ್‌ಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕೆಂದು ಕೋರಿಕೊಂಡಿದ್ದರು. ಇದಕ್ಕೆ ಬಿಸಿಸಿಯಿಂದ ಅನುಮತಿಯೂ ಲಭಿಸಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತು ಐಪಿಎಲ್‌ಗೆ ನಿವೃತ್ತಿ ಘೋಷಿಸುವಾಗಲೇ ಯುವಿ ತನಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಆಸಕ್ತಿಯಿದೆ. ಖುಷಿಗಾಗಿ ಮತ್ತೆ ಇನ್ನಿಂಗ್ಸ್ ಆರಂಭಿಸಬೇಕು. ಯಾವುದೇ ಒತ್ತಡಗಳಿಲ್ಲದೆ ಸ್ವತಂತ್ರವಾಗಿ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳಬೇಕು ಎಂದಿದ್ದರು.
ನಿವೃತ್ತಿ ವೇಳೆ ಸಿಕ್ಸರ್ ಕಿಂಗ್ ಯುವರಾಜ್, 'ಟಿ20 ಕ್ರಿಕೆಟ್ ಆಡಲು ನಾನು ಬಯಸಿದ್ದೇನೆ. ಈ ವಯಸ್ಸಿನಲ್ಲಿ ನಾನು ಖುಷಿಗಾಗಿ ಒಂದಿಷ್ಟು ಕ್ರಿಕೆಟ್ ಆಡಬಲ್ಲೆ. ಆಡಲು ತೆರಳಿ ನನ್ನ ಬದುಕನ್ನು ಸಂಭ್ರಮಿಸಲು ಬಯಸಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್, ಐಪಿಎಲ್‌ನಂತ ದೊಡ್ಡ ಟೂರ್ನಿಗಳ ಬಗ್ಗೆ ಯೋಚಿಸುವಾಗ ಒತ್ತಡವೆನಿಸುತ್ತದೆ. ಅದಕ್ಕೆ ಈ ದಾರಿಯತ್ತ ಯೋಚಿಸಿದ್ದೇನೆ' ಎಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications