Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yuvraj Singh: 'ಸಿಕ್ಸರ್ ಕಿಂಗ್' ವಲ್ಡ್ ರೆಕಾರ್ಡ್ ಬ್ರೇಕ್ ಮಾಡಿದ ಯುವ ಬ್ಯಾಟರ್!

ಆಗಸ್ಟ್ 20 ಮಂಗಳವಾರ, ಭಾರತ ತಂಡದ ಮಾಜಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಒಂದು ಓವರ್‌ನಲ್ಲಿ 6 ಸಿಕ್ಸರ್ ಬಾರಿಸುವ ಮೂಲಕ ಅಪರೂಪದ ದಾಖಲೆಯನ್ನು ಅವರು ಹೊಂದಿದ್ದಾರೆ. ಇಲ್ಲಿವರೆಗೂ ಈ ದಾಖಲೆಯನ್ನು ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗಿರಲಿಲ್ಲ.

ಆದರೆ, ಇದೀಗ 3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಮೋವಾ ದೇಶದ 28 ವರ್ಷದ ಬ್ಯಾಟರ್ ಈ ದಾಖಲೆಯನ್ನು ಮುರಿಯುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಪೂರ್ವ ಏಷ್ಯಾ-ಪೆಸಿಫಿಕ್ ರೀಜನ್ ಕ್ವಾಲಿಫೈಯರ್-ಎ ಪಂದ್ಯದಲ್ಲಿ ಈ ಅದ್ಭುತ ನಡೆದಿದೆ.

Yuvraj Singh world record breaking Darius Visser

ಕ್ವಾಲಿಫೈಯರ್-ಎ ಪಂದ್ಯದಲ್ಲಿ ಸಮೋವಾ ಮತ್ತು ವನವಾಟು ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯವನ್ನು ಸಮೋವಾ ತಂಡವು 10 ರನ್‌ಗಳಿಂದ ಗೆದ್ದಿತ್ತು. ಸಮೋವಾ ತಂಡದ ಗೆಲುವಿಗೆ ಶ್ರಮವಹಿಸಿದ ಯುವ ಬ್ಯಾಟರ್ ಡೇರಿಯಸ್ ವಿಸ್ಸರ್ ಶತಕ ಗಳಿಸಿದರು. ಜೊತೆಗೆ ಯುವರಾಜ್ ಸಿಂಗ್ ದಾಖಲೆಯನ್ನು ಮುರಿದರು.

ಡೇರಿಯಸ್ ವಿಸ್ಸರ್ ಇನ್ಸಿಂಗ್ಸ್

ವನವಾಟು ತಂಡದ ಬೌಲರ್‌ಗಳನ್ನು ಬೆಂಡಿತ್ತಿದ ವಿಸ್ಸರ್ ಕೇವಲ 62 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ 132 ರನ್‌ಗಳನ್ನು ಬಾರಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 14 ಸಿಕ್ಸರ್‌ಗಳನ್ನು ಹೊಡೆದು ಸಾಧನೆಗೈದರು.

ಯುವರಾಜ್ ಅವರಂತೆ ವಿಸ್ಸರ್ ಕೂಡ ಈ ಪಂದ್ಯದ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದರು. ಈಗ ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ಬ್ಯಾಟರ್ ಆಗಿದ್ದು, ಅತಿಹೆಚ್ಚು ರನ್ ಕಲೆ ಹಾಕಿದ ದಾಖಲೆಯನ್ನು ಮಾಡಿದ್ದಾರೆ.

ಯುವರಾಜ್ ದಾಖಲೆ

2007ರ ಟಿ20 ವಿಶ್ವಕಪ್ ಆರಂಭಿಕ ಆವೃತ್ತಿಯಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರನ್ನು ಯುವರಾಜ್ ತರಾಟೆಗೆ ತೆಗೆದುಕೊಂಡಿದ್ದರು. ಬ್ರಾಡ್ ಅವರ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಯುವಿ 36 ರನ್‌ಗಳ ಪೇರಿಸಿದ್ದರು.

ಇದು ಈವರೆಗಿನ ಟಿ20 ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಕಲೆ ಹಾಕಿದ ಗರಿಷ್ಠ ಸ್ಕೋರ್‌ ಆಗಿತ್ತು. ಈ ವಿಶ್ವದಾಖಲೆಯನ್ನು ಯುವಿ ಹೊಂದಿದ್ದರು. ಅದು ಈಗ ವಿಸ್ಸರ್ ಹೆಸರಿನಲ್ಲಿದೆ.

ವನವಾಟು ವಿರುದ್ಧದ ಪಂದ್ಯದ 15ನೇ ಓವರ್‌ನಲ್ಲಿ ವಿಸ್ಸರ್ ಈ ಸಾಧನೆ ಮಾಡಿದರು. ನಳಿನ್ ನಿಪಿಕೊ ಅವರ ಓವರ್‌ನಲ್ಲಿ ವಿಸ್ಸರ್ 6 ಸಿಕ್ಸರ್‌ಗಳನ್ನು ಬಾರಿಸಿದರು. ಈ ಓವರ್‌ನಲ್ಲಿ ಮೂರು ನೋ ಬಾಲ್‌ಗಳು ಸಹ ಇದ್ದವು, ಇದರಿಂದಾಗಿ ಬ್ಯಾಟರ್ ಒಟ್ಟು 39 ರನ್ ಗಳಿಸಲು ಸಾಧ್ಯವಾಯಿತು.

Story first published: Tuesday, August 20, 2024, 14:00 [IST]
Other articles published on Aug 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+