ಬಹುದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಹಾಗೂ ನೃತ್ಯ ನಿರ್ದೇಶಕ ಧನಶ್ರೀ ವರ್ಮಾ ಅವರ ವಿಚ್ಛೇದನ ಪ್ರಕರಣ ಅಂತ್ಯ ಕಂಡಿದೆ. ಮುಂಬೈ ಹೈ ಕೋರ್ಟ್ ಇವರ ವಿಚ್ಛೇದನ ಪ್ರಕರಣದ ತೀರ್ಪನ್ನು ಗುರುವಾರ (ಮಾರ್ಚ್ 20) ರಂದು ನೀಡುವಂತೆ ಸೂಚಿಸಿತ್ತು. ಇದರಂತೆ ಫ್ಯಾಮಿಲಿ ಕೋರ್ಟ್ ಇವರಿಬ್ಬರ ವಿಚ್ಛೇದನ ತೀರ್ಪು ನೀಡಿದೆ. ಸುಮಾರು ನಾಲ್ಕು ವರ್ಷಗಳ ದಾಂಪತ್ಯದ ನಂತರ, ಇಬ್ಬರೂ ಈಗ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ.
ಧನಶ್ರೀ ಮತ್ತು ಚಾಹಲ್ ಅವರ ಈ ಪ್ರಕರಣ ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿತ್ತು. ಈಗ ಅದರ ತೀರ್ಪು ಹೊರ ಬಿದ್ದಿದೆ. ಚಹಾಲ್ ಹಾಗೂ ಧನಶ್ರೀ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯುತ್ತಿದ್ದಾರೆ. ವರದಿಗಳ ಪ್ರಕಾರ, ಚಾಹಲ್ ಧನಶ್ರೀಗೆ ಜೀವನಾಂಶವಾಗಿ 4.75 ಕೋಟಿ ರೂ.ಗಳನ್ನು ಪಾವತಿಸಬೇಕಾಗಿದೆ. ಇದರಲ್ಲಿ ಅವರು ಈಗಾಗಲೇ 2.37 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ. ತೀರ್ಪನ್ನು ನೀಡುವ ವೇಳೆ ಇಬ್ಬರೂ ಕೋರ್ಟ್‌ನಲ್ಲಿ ಹಾಜರಿದ್ದರು.

ಚಹಾಲ್ ಹಾಗೂ ಧನಶ್ರೀ ಇಬ್ಬರು ಕೌಟುಂಬಿಕ ಕೋರ್ಟ್‌ನಲ್ಲಿ ಮಾಸ್ಕ್ ಹಾಕಿಕೊಂಡು ಕೋರ್ಟ್‌ಗೆ ಎಂಟ್ರಿ ಆದ್ರು. ಈ ವೇಳೆ ಕ್ಯಾಮೆರಾಗಳು ಅವರನ್ನು ಸುತ್ತುವರೆದವು. ಚಹಾಲ್ ಮತ್ತು ಧನಶ್ರೀ ಸುಮಾರು ಒಂದು ಗಂಟೆ ಕಾಲ ನ್ಯಾಯಾಲಯದಲ್ಲಿಯೇ ಇದ್ದರು. ಧನಶ್ರೀ ಬಿಳಿ ಟಾಪ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಮತ್ತು ಕಪ್ಪು ಸನ್ ಗ್ಲಾಸ್ ಧರಿಸಿದ್ದರು. ಇಬ್ಬರೂ ಯಾವುದೇ ಹೇಳಿಕೆ ನೀಡಲಿಲ್ಲ.
*ಝಲಕ್ ದಿಖ್ಲಾ ಜಾ-11 ರ ಸಂಚಿಕೆಯಲ್ಲಿ ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಾಲ್ ತಮ್ಮ ಪ್ರೇಮವನ್ನು ಬಹಿರಂಗ ಪಡಿಸಿದ್ದರು. ಡಿಸೆಂಬರ್ 11, 2020 ರಂದು ಇಬ್ಬರೂ ವಿವಾಹವಾದ್ರು.
*ಧನಶ್ರೀ ಹಾಗೂ ಚಹಾಲ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಇತ್ತೀಚಿಗೆ ಬಯಲಾಗಿತ್ತು. ಆದ್ರೆ ಇವರಿಬ್ಬರು ಸುಮಾರು 2 ವರ್ಷಗಳ ಹಿಂದೆ ಪ್ರತ್ಯೇಕವಾಗಿ ಇರಲು ಆರಂಭಿಸಿದ್ದರು. ಅಲ್ಲದೆ ಸಾಮಾಜಿಕ ತಾಣದಲ್ಲಿ ಅನ್ ಫಾಲೋ ಸಹ ಮಾಡಿದ್ದರು. ಅಲ್ಲದೆ ಚಹಾಲ್ ಜೊತೆಗಿನಿ ಎಲ್ಲ ಫೋಟೋಗಳನ್ನು ನೃತ್ಯ ಸಂಯೋಜಕಿ ತೆಗೆದು ಹಾಕಿದ್ದರು.
*ಇವರಿಬ್ಬರೂ ಪ್ರತ್ಯೇಕವಾಗಿ ಇರಲು ಆರಂಭಿಸಿದ್ದು ಏಕೆ ಎಂಬ ಕಾರಣ ಮಾತ್ರ ಇನ್ನು ಬಹಿರಂಗವಾಗಿಲ್ಲ.
*ಚಹಾಲ್ ಹಾಗೂ ಧನಶ್ರೀ ಇಬ್ಬರೂ 2 ವರ್ಷಗಳ ನಂತರ ಮುಂಬೈನಲ್ಲಿ ಇದೇ ವರ್ಷ ಫೆ.2025ರಂದು ಅರ್ಜಿ ಸಲ್ಲಿಸಿದ್ರು. ಇವರಿಬ್ಬರೂ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ನ್ಯಾಯಾಲಯ ಆರು ತಿಂಗಳ ಕೂಲಿಂಗ್ ಆಫ್ ಅವಧಿಯನ್ನು ನೀಡಿತ್ತು. ಇದನ್ನು ರದ್ದು ಗೊಳಿಸುವಂತೆ ಚಹಾಲ್ ಮೇಲ್ಮನವಿ ಸಲ್ಲಿಸಿದ್ದರು.
*ಬುಧವಾರ ಈ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈ ಕೋರ್ಟ್ ಮಾರ್ಚ್ 20 ರಂದು ತೀರ್ಪು ನೀಡುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಆದೇಶಿಸಿತ್ತು. ಚಹಾಲ್ ಐಪಿಎಲ್‌ನಲ್ಲಿ ಭಾಗವಹಿಸಬೇಕಿದ್ದು, ಮಾರ್ಚ್ 21 ರಿಂದ ಅವರು ಲಭ್ಯ ಇರುವುದಿಲ್ಲ ಎಂದು ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಏಕ ಪೀಠ ಹೇಳಿತ್ತು.