Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yuzvendra Chahal: RCB ಮಾಜಿ ಆಟಗಾರನ ಬಾಳಲ್ಲಿ ಬಿರುಗಾಳಿ

ಭಾರತ ತಂಡದ ಸ್ಪಿನ್ ಬೌಲರ್‌ ಯುಜುವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆರ್‌ಸಿಬಿ ತಂಡದ ಮಾಜಿ ಸ್ಪಿನ್ ಬೌಲರ್‌ ಚಹಾಲ್‌ ಹಾಗೂ ಧನಶ್ರೀ ವರ್ಮಾ ವಿಚ್ಛೇದನದ ವದಂತಿಗಳು ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಇಬ್ಬರೂ ಸ್ಟಾರ್‌ಗಳು ಈಗಾಗಲೇ ಇನ್‌ಸ್ಟಾಗ್ರಾಮ್‌ನಿಂದ ಪರಸ್ಪರರನ್ನು ಅನ್‌ಫಾಲೋ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಹುವೇಗ ಪಡೆದುಕೊಂಡಿದೆ. ಈ ಸುದ್ದಿ ಇಷ್ಟು ವ್ಯಾಪಕವಾಗಿ ಹರಿದಾಡಲು ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಚಹಾಲ್‌ ಹಾಗೂ ಧನಶ್ರೀ ಆಗಾಗ ತಮ್ಮ ದಾಂಪತ್ಯ ಜೀವನದ ಸಂಗತಿಗಳನ್ನು ಸಾಮಾಜಿಕ ತಾಣದಲ್ಲಿ ಹಾಕಿಕೊಂಡು ಎಲ್ಲರ ಚಿತ್ತ ಕದ್ದಿದ್ದರು. ಈಗ ಚಹಾಲ್‌ ಪತ್ನಿ ಜೊತೆಗಿನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಡಿಲೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಧನಶ್ರೀ ಸಹ ಖ್ಯಾತ ಸ್ಪಿನ್ ಬೌಲರ್‌ನ್ನು ಅನ್‌ ಫಾಲೋ ಮಾಡಿದ್ದಾರೆ. ಆದರೆ ಧನಶ್ರೀ ಮಾತ್ರ ಅವರಿಬ್ಬರ ಫೋಟೋಗಳನ್ನು ಇನ್ನು ತೆಗೆದು ಹಾಕಿಲ್ಲ. ಈಗ ಬರುತ್ತಿರುವ ವರದಿಗಳ ಅನುಸಾರ ವಿಚ್ಛೇಧನದ ಪ್ರಕಿಯೆಗಳು ಮುಗಿದಿದ್ದು ಪ್ರಕಟಣೆ ಮಾತ್ರ ಬಾಕಿ ಇದೆ ಎಂದು ತಿಳಿದು ಬಂದಿದೆ.

Yuzvendra Chahal and Dhanashree Verma Spark Divorce Rumors

ತುಟಿ ಬಿಚ್ಚದ ಸ್ಟಾರ್ಸ್‌

ಈ ತಾರಾ ಜೋಡಿ 2020ರ ಡಿಸೆಂಬರ್‌ 11 ರಂದು ವಿವಾಹವಾಗಿದ್ದರು. ಈ ವದಂತಿಗಳ ಬಗ್ಗೆ ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಆಗಲಿ, ಧನಶ್ರೀ ಆಗಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಬಿಟ್ಟ ಸುದ್ದಿ ತುಂಬ ದಿನಗಳಿಂದ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಬರುತ್ತಿರುವ ವರದಿಗಳ ಅನುಸಾರ ಇವರು ಶೀಘ್ರದಲ್ಲಿ ಬೇರೆಯಾಗಲಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಇವರಿಬ್ಬರೂ ವಿಶ್ಚೇಧನ ಪಡೆಯಲು ಕಾರಣ ಏನು ಎಂಬ ಬಗ್ಗೆ ಇನ್ನು ಯಾವುದೇ ಮಾಹಿತಿ ಇಲ್ಲ.

ಇವರಿಬ್ಬರ ನಡುವೆ ಪ್ರೇಮವಾಗಿದ್ದು ಹೇಗೆ?

ಇವರಿಬ್ಬರೂ ರಿಯಾಲಿಟಿ ಶೋ ವೇಳೆ ಎಲ್ಲರ ಗಮನ ಸೆಳೆದಿದ್ದರು. ಕೋವಿಡ್‌-19 ಲಾಕ್‌ಡೌನ್‌ ಸಮಯದಲ್ಲಿ ಚಹಾಲ್‌ ನೃತ್ಯವನ್ನು ಕಲಿಯಲು ಧನಶ್ರೀ ಅವರನ್ನು ಸಂಪರ್ಕಿಸಿದ್ದರು. ಇದಾದ ಬಳಿಕ ಚಹಾಲ್‌ ಅವರಿಗೆ ನೃತ್ಯ ಹೇಳಿಕೊಡುತ್ತಾ ಧನಶ್ರೀ ಅವರ ಪ್ರೀತಿಯಲ್ಲಿ ಬಿದ್ದರು.

2023ರಲ್ಲೇ ಈ ಸಂಬಂಧದಲ್ಲಿ ಬಿರುಕು ಬಿಟ್ಟ ಬಗ್ಗೆ ಗುಸುಗುಸು ಆರಂಭವಾಗಿತ್ತು. ಇದಕ್ಕೆ ಕಾರಣ ಚಹಾಲ್ ಪೋಸ್ಟ್ ಮಾಡಿದ ಒಂದು ಸ್ಟೋರಿ. ಈ ಸ್ಟೋರಿಯ ಸಾರಾಂಶ ಹೊಸ ಜೀವನ ಕಾದಿದೆ ಎಂಬುದಾಗಿತ್ತು. ಈ ಸ್ಟೋರಿಯ ಬಳಿಕ ಧನಶ್ರೀ ಸಹ ತಮ್ಮ ಹೆಸರಿನ ಪಕ್ಕದಲ್ಲಿ ಹಾಕಿಕೊಂಡಿದ್ದ ಚಹಾಲ್‌ ಎಂಬ ಹೆಸರನ್ನು ತೆಗೆದಿದ್ದರು. ಇದಾದ ಬಳಿಕ ಉಭಯ ದಂಪತಿಗಳ ಜೀವನ ಎಲ್ಲರೂ ಅಂದುಕೊಂಡಂತೆ ಇಲ್ಲ ಎಂಬುದು ತಿಳಿಯಿತು. ಆದರೆ ಕ್ರಿಕೆಟಿಗ ಚಹಾಲ್ ಮಾತ್ರ ಈ ಸುದ್ದಿಯನ್ನು ಬರೀ ವದಂತಿ ಎಂದು ತಿಳಿಸಿದ್ದರು.

ಚಹಾಲ್‌ ಹಾಗೂ ಧನಶ್ರೀ ಇಬ್ಬರೂ ವಿಶ್ಛೇದನಕ್ಕೆ ಮುಂದಾಗಿರುವುದಕ್ಕೆ ಅಸಲಿ ಕಾರಣ ಇನ್ನು ಹೊರ ಬರಬೇಕಿದೆ. ಈಗೇನಿದ್ದರೂ ಊಹಾಪೋಹಗಳೇ ಹರಿದಾಡುತ್ತಿವೆ.

Story first published: Saturday, January 4, 2025, 23:37 [IST]
Other articles published on Jan 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+