Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yuzvendra Chahal: ಬೆಡಗಿಗೆ ಪ್ರೇಮ ನಿವೇದನೆ ಮಂಡಿಸಿದ ಚಹಾಲ್‌?

ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್‌ ಯುಜುವೇಂದ್ರ ಚಹಾಲ್, ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ಅವರು ಈ ಬಾರಿ ಸುದ್ದಿಯಲ್ಲಿರುವುದು ಅವರ ಮನಮೋಹಕ ಬೌಲಿಂಗ್‌ನಿಂದ ಅಲ್ಲವೇ ಅಲ್ಲ. ಆದರೆ ಈ ಬಾರಿ ಅವರು ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ಚಹಾಲ್‌ ತಮ್ಮ ಪತ್ನಿಗೆ ವಿಚ್ಛೇಧನ ನೀಡಲಿದ್ದಾರೆ ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತಿವೆ. ಈ ಬೆನ್ನೆಲ್ಲೆ ಈಗ ಚಹಾಲ್‌ ಹೊಸ ಹುಡುಗಿಯ ಜೊತೆ ಲವ್ವಿ ಡವ್ವಿ ನಡೆಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಯುಜುವೇಂದ್ರ ಚಹಾಲ್‌ ಹಾಗೂ ಧನುಶ್ರೀ ನಡುವೆ ಕೌಟುಂಬಿಕ ಜೀವನ ಸರಿಯಿಲ್ಲ ಎಂಬ ಸುದ್ದಿಗಳು ಬಹುದಿನಗಳ ಓಡಾಡುತ್ತಿವೆ. ಆದರೆ ಈ ಬಗ್ಗೆ ಉಭಯ ಸ್ಟಾರ್ ಆಟಗಾರರು ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಆದರೆ ಈಗ ಚಹಾಲ್‌ ಮತ್ತೊಬ್ಬ ಹುಡುಗಿಯ ಪ್ರೇಮ ಪಾಶಕ್ಕೆ ಬಿದಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಚಹಾಲ್‌ ಈಗ ಆರ್‌ ಜೆ ಮಹಾವಿಶ್‌ಗೆ ಪ್ರಪೋಸ್‌ ಮಾಡಿದ್ದಾರೆ. ಈ ನಟಿಯೊಂದಿಗೆ ಡೇಟಿಂಗ್ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

yuzvendra Chahal Caught in Dating Rumors Amid Divorce Speculations RJ Mahvash and Zara Yasmin React

ಚಹಾಲ್‌, ಮಹಾವಿಶ್‌ಗೆ ಪ್ರಪೋಸ್‌ ಮಾಡಿರುವ ಸುದ್ದಿ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಅವರ ಹಾಗೂ ಧನುಶ್ರೀ ವಿಚ್ಛೇಧನ ಕುರಿತಾಗಿ ಇನ್ನು ಯಾವುದೇ ಕ್ಲೀಯಾರಿಟಿ ಸಿಗುತ್ತಿಲ್ಲ. ಈ ಮಧ್ಯೆ ಮಹಾವಿಶ್‌ ಅವರೊಂದಿಗಿನ ಡೇಟಿಂಗ್‌ ಸುದ್ದಿ ಹೆಚ್ಚಾಗಿ ಸದ್ದು ಮಾಡುತ್ತಿದೆ. ಆದರೆ ಈ ಸುದ್ದಿ ಸುಳ್ಳು ಎದ್ದು ಮಹಾವಿಶ್‌ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಚಹಾಲ್‌ ನನಗೆ ಪ್ರಪೋಸ್ ಮಾಡಿದರೆ ನಾನೇ ಬಂದು ನಿಮಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಮತ್ತೊಂದು ವಿವಾದ

ಈ ವಿವಾದದ ಜೊತೆಗೆ ಮತ್ತೊಂದು ವಿವಾದ ತಳಕು ಹಾಕಿಕೊಂಡಿದೆ. ಚಹಾಲ್‌ ಮತ್ತೊಬ್ಬ ನಟಿಯೊಂದಿಗೆ ಡೇಟಿಂಗ್ ನಡೆಸಿದ್ದರು ಎಂಬ ಸುದ್ದಿಗಳು ಹರಿದಾಡುತ್ತಿವೆ. ಆ ನಟಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಹಾಲ್‌ ಹಾಗೂ ತಮ್ಮ ನಡುವಿನ ಸಂಬಂಧದ ಬಗ್ಗೆ ನಟಿ ಜರಾ ಯಾಸ್ಮಿನ್‌ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಕೋವಿಡ್‌ ಸಮಯದಲ್ಲಿ ಇವರಿಬ್ಬರು ಆಗಾಗ್ಗೆ ಚಾಟ್‌ಗಳು ನಡೆಯುತ್ತಿದ್ದವು. ಈ ವೇಳೆ ಚಹಾಲ್‌ ಅಡುಗೆ ಮಾಡುವುದು ಹೇಗೆ ಎಂದು ಎಲ್ಲ ಚಾಟ್ ಮಾಡಿ ಕೇಳುತ್ತಿದ್ದರು.

yuzvendra Chahal Caught in Dating Rumors Amid Divorce Speculations RJ Mahvash and Zara Yasmin React

ಕೋವಿಡ್‌ ಸಮಯದಲ್ಲಿ ಚಹಾಲ್‌ ಹಾಗೂ ಜರಾ ಚಾಟ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಅಲ್ಲದೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಲು ಪ್ರಾರಂಭವಾಯಿತು. ಆಗ ಅವರಿಬ್ಬರು ಆಶ್ಚರ್ಯಚಕಿತರಾದರು. ಚಹಾಲ್‌ ತಮಗೆ ಪ್ರಪೋಸ್ ಮಾಡಿದ್ದಾರೆ ಎಂದು ಹೇಳುವ ಸುದ್ದಿಗಳು ಶುದ್ಧ ಸುಳ್ಳು ಎಂದು ಜರಾ ತಿಳಿಸಿದ್ದಾರೆ. ಕೋವಿಡ್‌ ವೇಳೆಯಲ್ಲಿ ಜರಾ ಹಾಗೂ ಚಹಾಲ್‌ ಸಾಮಾಜಿಕ ತಾಣದಲ್ಲಿ ಲೈವ್ ಬಂದಿದ್ದರು. ಇದಾದ ಬಳಿಕ ಇವರಿಬ್ಬರ ಸಂಬಂಧದ ಬಗ್ಗೆ ಹೆಚ್ಚಿನ ಊಹಾಪೋಹಗಳು ಹರಿದಾಡಲು ಆರಂಭಿಸಿದವು.

Story first published: Monday, February 3, 2025, 12:02 [IST]
Other articles published on Feb 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+