ವಿಮಾನದಲ್ಲಿ ಇ-ಸಿಗರೇಟ್ ಸೇದಿದ ಚಹಾಲ್: ವಿಡಿಯೋ ವೈರಲ್
ಮೈದಾನದಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡುವ ಯುಜುವೇಂದ್ರ ಚಹಾಲ್, ಈಗ ಬೇಡದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಜೊತೆಗೆ ಪ್ರಯಾಣ ಬೆಳೆಸುವ ವೇಳೆ ಚಹಾಲ್ ವಿಮಾನದಲ್ಲಿ ಇ-ಸಿಗರೇಟ್ ಸೇದುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಪಂಜಾಬ್ ಕಿಂಗ್ಸ್ ಆಟಗಾರರು ಮುಂದಿನ ಪಂದ್ಯಕ್ಕಾಗಿ ಬೇರೆ ಊರಿಗೆ ಪ್ರಯಾಣ ಬೆಳೆಸುತ್ತಿರುವುದಾಗಿದೆ. ಈ ಸೆರೆಯಾದ ವಿಡಿಯೋ ಆಟಗಾರರು ಒಬ್ಬರಿಗೊಬ್ಬರು ಮಾತನಾಡುವುದು ಕಂಡು ಬಂದಿದೆ. ಇದೇ ವೇಳೆ ಚಹಾಲ್ ತಮ್ಮ ಬಲಗೈನಲ್ಲಿ ಇ-ಸಿಗರೇಟ್ ಸೇದುತ್ತಿರುವ ದೃಶ್ಯಗಳು ಸೆರೆಯಾಗಿವೆ. ಚಹಾಲ್ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಬಹುದೆಂಬ ಭಯದಿಂದ ಎರಡೂ ಕೈಗಳಿಂದ ಇ-ಸಿಗರೇಟ್ ಸೇದಿರುವುದು ಕಂಡು ಬಂದಿದೆ.

ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ಪ್ರಯಾಣಿಕ ಇ-ಸಿಗರೇಟ್ ಧೂಮಪಾನ ಮಾಡುವುದು ಮತ್ತು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ ಇದು ಗಂಭೀರ ಅಪರಾಧವಾಗಿದೆ. ವಿಮಾನದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಅಥವಾ ವೇಪ್‌ಗಳನ್ನು ಒಯ್ಯುವುದು ಮತ್ತು ಬಳಸುವುದನ್ನು ನಿಷೇಧಿಸಲಾಗಿದೆ. ಇದರಿಂದ ನೂರಾರು ಪ್ರಯಾಣಿಕರಿಗೆ ಜೀವಕ್ಕೆ ಅಪಾಯ ಉಂಟುಮಾಡುತ್ತದೆ.
ಟೀಕೆಗೆ ಗುರಿಯಾದ ಚಹಾಲ್
ಅನುಭವಿ ಚಹಾಲ್ ಈ ರೀತಿಯ ವರ್ತನೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ವೀಡಿಯೊ ವೈರಲ್ ಆದ ನಂತರ, ಟೀಕೆಗಳು ಕೇಳಿ ಬರುತ್ತಿವೆ. ಇನ್ನು ಈ ಬಗ್ಗೆ ಅಧಿಕೃತ ದೂರು ದಾಖಲಾಗಿದ್ದರೆ ಚಹಾಲ್ ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಪರಾಗ್‌ಗೆ ದಂಡ
ಇದಕ್ಕೂ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರು ಸಹ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ ಸೇದುತ್ತಿರುವ ದೃಶ್ಯಗಳು ವೈರಲ್ ಆಗಿತ್ತು. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಟೀಕೆಗಳು ಸಹ ಕೇಳಿ ಬಂದಿದ್ದವು. ಅಲ್ಲದೆ ಮಾಜಿ ಆಟಗಾರರು ರಿಯಾನ್ ಪರಾಗ್ ಅವರ ಈ ನಡೆಯನ್ನು ಪ್ರಶ್ನೆಸಿದ್ದರು. ಬಿಸಿಸಿಐ ಅವರಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಿತು ಮತ್ತು ಅವರ ಖಾತೆಗೆ ಡಿಮೆರಿಟ್ ಪಾಯಿಂಟ್ ಸೇರಿಸಿತು. ಅವರು ಇತರ ಆಟಗಾರರಿಗೆ ಕಠಿಣ ಎಚ್ಚರಿಕೆಯನ್ನು ಸಹ ನೀಡಿತ್ತು.
ವೈರಲ್ ಆಗುತ್ತಿರುವ ವಿಡಿಯೋಗಳು ಆಟಗಾರರ ಫಿಟ್ನೆಸ್ ಹಾಗೂ ಶಿಸ್ತಿ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿವೆ. ಈಗಾಗಲೇ ಕ್ರಿಕೆಟ್ ಅಂಗಳದಲ್ಲಿ ಹೆಸರು ಮಾಡಿರುವಂತಹ ಈ ಆಟಗಾರರು ಯುವಕರಿಗೆ ಮಾದರಿ ಆಗುವಂತಹ ನಡವಳಿಕೆ ಹೊಂದಿರಬೇಕು. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಿಮಾನದಂತಹ ಸೂಕ್ಷ್ಮ ಸ್ಥಳಗಳಲ್ಲಿ ಇಂತಹ ಕಾರ್ಯ ನಡೆದಿದ್ದು ವ್ಯಾಪಕ ಚರ್ಚೆಗೆ ಗುರಿಯಾಗಿದೆ. ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಬಿಸಿಸಿಐ ಏನು ಕ್ರಮ ಕೈಗೊಳ್ಳಬಹುದು ಎಂಬ ಕುತೂಹಲ ಮೂಡಿಸಿದೆ. ಆಟಗಾರರು ತಮ್ಮ ಸಾಮಾಜಿಕ ಜವಾಬ್ದಾರಿ ಮತ್ತು ಸುರಕ್ಷತಾ ನಿಯಮಗಳನ್ನು ಮರೆಯಬಾರದು ಎಂದು ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications