For Quick Alerts
ALLOW NOTIFICATIONS  
For Daily Alerts
 

ಫಸ್ಟ್ ಕ್ಲಾಸ್‌ ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ಮಾಜಿ RCB ಬೌಲರ್

ಸೆಪ್ಟೆಂಬರ್‌ 19 ರಿಂದ ಚೆನ್ನೈನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್‌ ಪಂದ್ಯ ನಡೆಯಲಿದೆ. ಈ ಟೆಸ್ಟ್‌ ಪಂದ್ಯಕ್ಕಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದ ಮಾಜಿ ಆರ್‌ಸಿಬಿ ಬೌಲರ್ ಆಸೆ ಮತ್ತೆ ಕಮರಿದೆ. ಭಾರತ ತಂಡದ ಪರ ಸೀಮಿತ ಓವರ್‌ಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸ್ಪಿನ್ ಬೌಲರ್‌, ಒಂದೇ ಒಂದು ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಪರ ಆಡಿಲ್ಲ.

ಆರ್‌ಸಿಬಿ ತಂಡದ ಮಾಜಿ ಸ್ಪಿನ್ ಬೌಲರ್‌ ಯಜುವೇಂದ್ರ ಚಹಾಲ್‌, ಸದ್ಯ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಚಾಹಲ್ ನಾರ್ಥಾಂಪ್ಟನ್‌ಶೈರ್‌ ಪರ ಕೌಂಟಿಯಲ್ಲಿ ಆಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚಹಾಲ್ 100 ವಿಕೆಟ್‌ ಸಾಧನೆ ಮಾಡಿದ್ದಾರೆ.

Yuzvendra Chahal Excels in County Cricket but Misses India Test Squad

ಚಹಾಲ್‌ ಪಂಚ್

ಟೆಸ್ಟ್‌ ತಂಡದಲ್ಲಿ ಭಾರತದ ಪರ ಆಡುವ ಕನಸು ಯಜುವೇಂದ್ರ ಚಹಾಲ್‌ ಅವರದ್ದಾಗಿದೆ. ಅವರು ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂಗ್ಲೆಂಡ್‌ನಂತಹ ಬೌನ್ಸಿ ಪಿಚ್‌ಗಳಲ್ಲೂ ತಮ್ಮ ಸ್ಪಿನ್ ಮೋಡಿ ಮಾಡಿ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಚಾಹಲ್ ನಾರ್ಥಾಂಪ್ಟನ್‌ಶೈರ್‌ನ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್‌ನ ಡಿವಿಷನ್ 2 ಪಂದ್ಯದಲ್ಲಿ ಡರ್ಬಿಶೈರ್ ವಿರುದ್ಧ 45 ರನ್‌ಗಳಿಗೆ ಐದು ವಿಕೆಟ್ ಪಡೆದು ಅಬ್ಬರಿಸಿದ್ದಾರೆ.

ಭಾರತದ ಸೀಮಿತ ಓವರ್‌ಗಳಲ್ಲಿ ಮಿಂಚಿರುವ ಯಜುವೇಂದ್ರ ಚಹಾಲ್‌, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಪೂರೈಸಿದ್ದಾರೆ. ಅಲ್ಲದೆ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಮೂರನೇ ಬಾರಿ ಐದಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದಾರೆ. ಕೌಂಟಿ ಕ್ರಿಕೆಟ್‌ ಈ ಸೀಸನ್‌ನಲ್ಲಿ ಚಹಾಲ್‌ ಮೋಡಿ ಮಾಡಿದ್ದಾರೆ. ಚಹಾಲ್‌ ಕಳೆದ ತಿಂಗಳು ನಡೆದಿದ್ದ ಏಕದಿನ ಕಪ್‌ನಲ್ಲಿ ಅಬ್ಬರಿಸಿದ್ದರು. ಕೆಂಟ್ ವಿರುದ್ಧ ಚಹಾಲ್‌ ಐದು ವಿಕೆಟ್‌ ಪಡೆದು ಬೀಗಿದ್ದರು.

Yuzvendra Chahal Excels in County Cricket but Misses India Test Squad

ಪ್ರಸಕ್ತ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನಾರ್ಥಾಂಪ್ಟನ್‌ಶೈರ್ 219 ರನ್ ಗಳಿಸಿತು. ಚಹಾಲ್ ಮತ್ತು ರಾಬ್ ಕಿಯೋಗ್ ಇವರ ಮಾರಕ ದಾಳಿಗೆ ಡರ್ಬಿಶೈರ್ ತಂಡ 61.3 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು.

ಭಾರತ ತಂಡ ಸೇರುವ ಕನಸು ಹೊಂದಿರುವ ಇನ್ನೋರ್ವ ಆಟಗಾರ ಪೃಥ್ವಿ ಶಾ ಕೌಂಟಿ ಕ್ರಿಕೆಟ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇವರು ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಸಿಂಗಲ್‌ ಡಿಜಿಟ್‌ನಲ್ಲಿ ತಮ್ಮ ಕೆಲಸ ಮುಗಿಸಿದ್ದಾರೆ. ಈ ಹಿಂದಿನ ಮೂರು ಫಸ್ಟ್‌ ಕ್ಲಾಸ್‌ ಮ್ಯಾಚ್‌ಗಳಲ್ಲಿ ಪೃಥ್ವಿ 50ರ ಗಡಿಯನ್ನು ದಾಟಲು ಎಡವಿದ್ದಾರೆ.

ಚಹಾಲ್ ಸಾಧನೆ

ಯಜುವೇಂದ್ರ ಚಹಾಲ್ 2016 ರಲ್ಲಿ ಭಾರತದ ಪರ ಪದಾರ್ಪಣೆ ಮಾಡಿದರು. ಚಹಾಲ್ 80 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 96 ವಿಕೆಟ್ ಪಡೆದಿದ್ದು, ಚುಟುಕು ಫಾರ್ಮೆಟ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್‌ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಸಹ ಇವರದ್ದಾಗಿದೆ. ಇವರು ಇತ್ತೀಚಿಗೆ ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್‌ ಚಾಂಪಿಯನ್‌ ತಂಡದ ಸದಸ್ಯರು.

Story first published: Wednesday, September 11, 2024, 7:31 [IST]
Other articles published on Sep 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+