T20 World Cup 2024: ಯುಜ್ವೇಂದ್ರ ಚಹಾಲ್‌ಗೆ ಕೈ ಕೊಟ್ಟ ಅದೃಷ್ಟ; ಒಂದು ಪಂದ್ಯವನ್ನಾಡಿದ ಟೂರ್ನಿ ಮುಗಿಸಿದ ಸ್ಟಾರ್ ಸ್ಪಿನ್ನರ್
ಜೂನ್ 29 ಶನಿವಾರ, ಟೀಮ್ ಇಂಡಿಯಾ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 8 ವರ್ಷಗಳಾಗಿವೆ. ಚಹಾಲ್ ಈ ಅವಧಿಯಲ್ಲಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.
ಈ ಮೂಲಕ ವಿಶ್ವದ ಅತ್ಯುತ್ತಮ ಲೆಗ್ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ಚಹಾಲ್ ಪಾತ್ರರಾಗಿದ್ದಾರೆ. ಆದರೆ, 2024ರ ಟಿ20 ವಿಶ್ವಕಪ್ ಟೂರ್ನಿ ಚಹಾಲ್ ಪಾಲಿಗೆ ಅದೃಷ್ಟದ ಬಾಗಿಲು ಮುಂಚಿದಂತಾಗಿದೆ.

ಏಕೆಂದೆರೆ ಟೂರ್ನಿ ಆರಂಭದಿಂದ ಫೈನಲ್ ಪಂದ್ಯದ ವರೆಗೂ ಚಹಾಲ್ ಅವರಿಗೆ ಟೀಮ್ ಇಂಡಿಯಾ ಪರ ಆಡುವ ಅವಕಾಶ ಸಿಗಲಿಲ್ಲ. ಇದರೊಂದಿಗೆ ಚಹಾಲ್ ಅವರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಆಡವ ಕನಸು ನನಸಾಗಿಲ್ಲ.
ಕಳೆದ ಮೂರು ವರ್ಷಗಳಲ್ಲಿ 3 ಟಿ20 ವಿಶ್ವಕಪ್‌ಗಳು ಬಂದು ಹೋಗಿದ್ದು, ಚಹಾಲ್‌ಗೆ ಮಾತ್ರ ಭಾರತ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಲೆಗ್ ಸ್ಪಿನ್ನರ್ ಭಾರತಕ್ಕೆ ಕೇವಲ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರವಲ್ಲದೆ, ಇಂಡಿಯನ್ ಪ್ರೀಮಿಯ್ ಲೀಗ್ (ಐಪಿಎಲ್)ನಲ್ಲಿಯೂ ಮಂಚಿದ್ದಾರೆ. 79 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಆಡಿರುವ ಚಹಾಲ್ 96 ವಿಕೆಟ್‌ಗಳನ್ನು ಪಡೆದಿದ್ದಾರೆ.
ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಎಂಬ ದಾಖಲೆಯನ್ನು ಚಹಾಲ್ ಬರೆದಿದ್ದಾರೆ. 2024ರ ಐಪಿಎಲ್‌ನಲ್ಲಿ ಚಹಾಲ್ ನೀಡಿದ ಪ್ರದರ್ಶನದ ಹಿನ್ನೆಲೆಯಲ್ಲಿ ಅವರು ಟಿ20 ವಿಶ್ವಕಪ್‌ಗೆ ಆಯ್ಕೆಯಾಗದರು. ಆದರೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications