For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಯಾಕೆ ಐಪಿಎಲ್ ಟ್ರೋಫಿ ಗೆಲ್ಲುತ್ತಿಲ್ಲ?; ಎಪಿಕ್ ಉತ್ತರ ನೀಡಿದ ಯುಜ್ವೇಂದ್ರ ಚಹಾಲ್

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವುದು ಬಹುತೇಕ ಯುವ ಕ್ರಿಕೆಟಿಗರ ಕನಸಾಗಿರುತ್ತದೆ. ಈವೆರೆಗೆ 16 ಐಪಿಎಲ್ ಆವೃತ್ತಿಗಳು ಕಳೆದಿವೆ.

ಇನ್ನು ವಿಶ್ವದ ಅತ್ಯಂತ ಪ್ರಸಿದ್ಧ ಕ್ರೀಡಾ ಫ್ರಾಂಚೈಸಿಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇನ್ನೂ ಒಂದು ಬಾರಿಯೂ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲದಿರುವುದು ವಿಪರ್ಯಾಸವೇ ಸರಿ.

ಸತತವಾಗಿ 16 ಸೀಸನ್‌ಗಳಲ್ಲಿ ಮತ್ತು ಹೆಚ್ಚಿನ ಆವೃತ್ತಿಗಳಲ್ಲಿ ಲೀಗ್‌ನ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದ್ದರೂ, ಆರ್‌ಸಿಬಿ ಫ್ರಾಂಚೈಸಿಗೆ ಟ್ರೋಫಿ ಮೇಲೆ ಕೈಗಳನ್ನಿಡಲು ಸಾಧ್ಯವಾಗಿಲ್ಲ.

Yuzvendra Chahal Gives Epic Answer To Why RCB Is Not Winning IPL Title

ಆರ್‌ಸಿಬಿ ಫ್ರಾಂಚೈಸಿಯೊಂದಿಗೆ 8 ಆವೃತ್ತಿಗಳಲ್ಲಿ ಆಡಿರುವ ಆಟಗಾರ ಯುಜ್ವೇಂದ್ರ ಚಹಾಲ್‌ಗೆ ಆರ್‌ಸಿಬಿ ಏಕೆ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುತ್ತಿಲ್ಲ? ಎಂಬ ಕುತೂಹಲಕಾರಿ ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆಗೆ ಸ್ವತಃ ತಾನೂ ಉತ್ತರ ಹುಡುಕಲು ಪ್ರಯತ್ನಿಸುತ್ತಿರುವುದಾಗಿ ಯುಜ್ವೇಂದ್ರ ಚಹಾಲ್ ಪ್ರಾಮಾಣಿಕವಾಗಿ ಪ್ರತಿಕ್ರಿಯೆ ನೀಡಿದರು.

ನಾನು 8 ವರ್ಷಗಳಿಂದ ಈ ಪ್ರಶ್ನೆಗೆ ಉತ್ತರವನ್ನು ಹುಡುಕಲು ಪ್ರಯತ್ನಿಸುತ್ತಿದ್ದೇನೆ ಎಂದು ರಣವೀರ್ ಅಲ್ಲಾಬಾಡಿಯಾ ಶೋನಲ್ಲಿ ಯುಜ್ವೇಂದ್ರ ಚಾಹಲ್ ಹೇಳಿದರು.

2021ರ ಋತುವಿನ ನಂತರ ಆರ್‌ಸಿಬಿ ತೊರೆದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್, 2016ರ ಐಪಿಎಲ್ ಋತುವನ್ನು ನೆನಪಿಸಿಕೊಂಡರು. ಆಗ ಆರ್‌ಸಿಬಿ ಫ್ರಾಂಚೈಸಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಹತ್ತಿರಕ್ಕೆ ಬಂದಿತ್ತು. ಆದರೆ ಫೈನಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೋಲು ಅನುಭವಿಸಿತು.

Yuzvendra Chahal Gives Epic Answer To Why RCB Is Not Winning IPL Title

"2016ರಲ್ಲಿ ನಾವು ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಮತ್ತು ಕೆಎಲ್ ರಾಹುಲ್ ಅವರನ್ನು ಹೊಂದಿದ್ದರಿಂದ ನಮಗೆ ಉತ್ತಮ ಅವಕಾಶ ಸಿಕ್ಕಿತ್ತು. ನಾವು ಫೈನಲ್‌ನಲ್ಲಿ ಸೋತೆವು. ನಾವು ಅಂತಿಮವಾಗಿ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿದ್ದೇವೆ. ದೆಹಲಿ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ನಾನು ನನ್ನ ಮೊದಲ ಪರ್ಪಲ್ ಕ್ಯಾಪ್ ಅನ್ನು ಎರಡು ದಿನಗಳವರೆಗೆ ಪಡೆದುಕೊಂಡಿದ್ದೆ," ಎಂದು ಯುಜ್ವೇಂದ್ರ ಚಾಹಲ್ ತಿಳಿಸಿದರು.

ನಾವು ಸೋತರೆ, ನಾವು ಟಾಪ್ 4 ಸ್ಥಾನಗಳಿಂದ ಹೊರಗುಳಿಯುತ್ತೇವೆ ಮತ್ತು ನಾವು ಗೆದ್ದರೆ ಎರಡನೇ ಸ್ಥಾನ ಪಡೆಯುತ್ತೇವೆ ಎಂಬ ಸಮೀಕರಣವಾಗಿತ್ತು.

"ನಾವು ಪಂದ್ಯವನ್ನು ಗೆದ್ದು ಫೈನಲ್‌ ತಲುಪಿದೆವು. ನಾವು ಎಂ ಚಿನ್ನಸ್ವಾಮಿ ಮೈದಾನದಲ್ಲಿ ಆಡಿದೆವು. ಆದರೆ ಆ ಪಂದ್ಯವನ್ನು 8 ರನ್‌ಗಳಿಂದ ಕಳೆದುಕೊಂಡೆವು. ಅದು ನೋವುಂಟು ಮಾಡಿತು," ಎಂದು ಆರ್‌ಸಿಬಿ ಮಾಜಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ನೆನಪಿಸಿಕೊಂಡರು.

ಸೋಲು ಕಂಡ ಆವೃತ್ತಿ ನಂತರ ನಡೆಯುವ ಮಾತುಕತೆಗಳ ಬಗ್ಗೆ ಕೇಳಿದಾಗ, ಮುಂದಿನ ಸೀಸನ್‌ನಲ್ಲಿ ವಿಭಿನ್ನವಾಗಿ ಏನು ಮಾಡಬಹುದು ಎಂಬುದರ ಕುರಿತು ಯಾವಾಗಲೂ ಸಂಭಾಷಣೆ ನಡೆಯುತ್ತವೆ. ಆದರೆ, ಉತ್ತಮ ಕ್ರಿಕೆಟ್‌ ಆಡಿರುವ ತಂಡ ಸೋತರೆ ಅಷ್ಟೊಂದು ನೋವಾಗುವುದಿಲ್ಲ ಎಂದರು.

"ಮುಂದಿನ ವರ್ಷ ನಮ್ಮ ತಂಡ ವಿಭಿನ್ನವಾಗಿ ಏನು ಮಾಡಬಹುದು ಎಂಬುದರ ಕುರಿತು ನಾವು ಮಾತನಾಡುತ್ತೇವೆ. ಉತ್ತಮ ಕ್ರಿಕೆಟ್ ಆಡಿದ ನಂತರ ಸೋತಾಗ ಅದು ಕೆಟ್ಟದಾಗಿ ನೋಯಿಸುವುದಿಲ್ಲ," ಎಂದು ಯುಜ್ವೇಂದ್ರ ಚಹಾಲ್ ಹೇಳಿದರು.

"ಒಮ್ಮೆ ನಾವು 6 ಪಂದ್ಯಗಳನ್ನು ಸತತವಾಗಿ ಸೋತಿದ್ದೇವೆ, ನಾವು 7ನೇ ಪಂದ್ಯವನ್ನು ಗೆದ್ದಾಗ ಪ್ರಶಸ್ತಿಯನ್ನು ಗೆದ್ದಂತೆ ಸಂಭ್ರಮಿಸಿದ್ದೇವೆ. ಕ್ರಿಕೆಟ್ ಕೂಡ ಇಂತಹ ಚಿತ್ರಗಳನ್ನು ನಿಮಗೆ ತೋರಿಸುತ್ತದೆ," ಎಂದರು.

"ಈ ಬಾರಿ ರಾಜಸ್ಥಾನ ಅತ್ಯುತ್ತಮ ತಂಡವಾಗಿತ್ತು. ಆದರೆ ಪ್ಲೇಆಫ್‌ಗೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ನಮ್ಮ ಕೈಯಲ್ಲಿಲ್ಲದ ವಿಷಯಗಳ ಬಗ್ಗೆ ನಾವು ಹೆಚ್ಚು ಯೋಚಿಸುವುದಿಲ್ಲ," ಎಂದು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅಭಿಪ್ರಾಯಪಟ್ಟರು.

Story first published: Sunday, July 16, 2023, 19:06 [IST]
Other articles published on Jul 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+