T20 World Cup 2024: ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾದ ಯಜ್ವೇಂದ್ರ ಚಹಾಲ್; ಏನಿದು ದಾಖಲೆ?
ಜೂನ್ 20 ಗುರುವಾರ, ಪ್ರಸುತ್ತ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ನ ಭಾರತ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಸಹ ಸ್ಥಾನ ಪಡೆದಿದ್ದಾರೆ. ಆದರೆ ಚಹಾಲ್‌ಗೆ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿಲ್ಲ.
ಇದರ ಬೆನ್ನಲ್ಲೇ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಯುಜ್ವೇಂದ್ರ ಚಹಾಲ್ ದೊಡ್ಡ ಇತಿಹಾಸ ಸೃಷ್ಟಿಸುವ ಅಂಚಿನಲ್ಲಿದ್ದಾರೆ. ಹೊಸ ದಾಖಲೆ ಬರೆಯಲು ಚಹಾಲ್ ಕೇವಲ 4 ವಿಕೆಟ್‌ಗಳ ಅಂತರದಲ್ಲಿದ್ದಾರೆ.

ಚಹಾಲ್ ಟಿ20 ಕ್ರಿಕೆಟ್‌ನಲ್ಲಿ 4 ವಿಕೆಟ್ ಪಡೆದ ತಕ್ಷಣ ಹೊಸ ಮೈಲಿಗಲ್ಲು ತಲುಪಲಿದ್ದಾರೆ. ಬಳಿಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಆದರೆ ಇದಕ್ಕಾಗಿ ಚಹಾಲ್‌ಗೆ ಪ್ಲೇಯಿಂಗ್-11 ನಲ್ಲಿ ಆಡುವ ಅವಕಾಶ ಸಿಗಬೇಕು. 2024ರ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಕ್ಕರೆ ಈ ಅದ್ಭುತ ಸಾಧನೆಯನ್ನು ಚಹಾಲ್ ಮಾಡಲು ಅವಕಾಶವಿದೆ.
ಭಾರತದ ಪರ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ವಿಕೆಟ್ ಪಡೆದ ಬೌಲರ್ ಯುಜ್ವೇಂದ್ರ ಚಹಾಲ್, ಇದುವರೆಗೆ ಆಡಿರುವ 80 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 96 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಅವರ ಅತ್ಯುತ್ತಮ ಸ್ಪೆಲ್ 25 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿರುವುದು.
ಒಮ್ಮೆ ಅವರು 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ಎರಡು ಬಾರಿ ಅವರು ತಮ್ಮ ಹೆಸರಿನಲ್ಲಿ 4 ವಿಕೆಟ್ ಪಡೆದಿದ್ದಾರೆ. 2023ರ ಆಗಸ್ಟ್‌ನಲ್ಲಿ ಕೊನೆಯ ಬಾರಿಗೆ ಟೀಮ್ ಇಂಡಿಯಾ ಟಿ20 ಆಡಿದ್ದಾರೆ. ಅಂದಿನಿಂದ ಅವರು ಯಾವುದೇ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ.
ಇತಿಹಾಸ ಸೃಷ್ಟಿಸಲಿರುವ ಚಹಾಲ್
ಒಂದು ವೇಳೆ ಯುಜ್ವೇಂದ್ರ ಚಹಾಲ್ ಅವರಿಗೆ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಕ್ಕಿ 4 ವಿಕೆಟ್ ಪಡೆದರೆ, ಅವರು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್ ಪೂರೈಸಿದ ಭಾರತದ ಮೊದಲ ಬೌಲರ್ ಆಗಲಿದ್ದಾರೆ.
ಇಲ್ಲಿಯವರೆಗೆ ಯಾವ ಭಾರತೀಯ ಬೌಲರ್ ನಿಂದಲ್ಲೂ ಈ ಸಾಧನೆ ಸಾಧ್ಯವಾಗಿಲ್ಲ. ಚಹಾಲ್ ನಂತರ ಭುವನೇಶ್ವರ್ ಕುಮಾರ್ ಭಾರತ ಪರ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಅವರು 87 ಪಂದ್ಯಗಳಲ್ಲಿ 90 ವಿಕೆಟ್ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್ 95 ಪಂದ್ಯಗಳಲ್ಲಿ 80 ವಿಕೆಟ್ ಪಡೆದಿದ್ದಾರೆ.
ಚಹಾಲ್ ಕ್ರಿಕೆಟ್ ವೃತ್ತಿಜೀವನ
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 200ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಚಹಾಲ್‌ಗೆ ಇನ್ನೂ ಟೆಸ್ಟ್ ಆಡುವ ಅವಕಾಶ ಸಿಕ್ಕಿಲ್ಲ. ಭಾರತದ ಪರ 80 ಟಿ20 ಪಂದ್ಯಗಳಲ್ಲಿ 96 ವಿಕೆಟ್ ಪಡೆದಿದ್ದಲ್ಲದೆ, ಏಕದಿನದಲ್ಲಿ 121 ವಿಕೆಟ್ ಪಡೆದಿದ್ದಾರೆ.
ಚಹಾಲ್ ಆಡಿರುವ 72 ಏಕದಿನ ಪಂದ್ಯಗಳಿಂದ ಈ ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ ಏಕದಿನ ಪಂದ್ಯಗಳಲ್ಲಿ ಎರಡು ಬಾರಿ 5 ವಿಕೆಟ್ ಹಾಗೂ 5 ಬಾರಿ 4 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications