ಭಾರತ vs ಆಸೀಸ್: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಚಾಹಲ್ ಕಮಾಲ್!

ಮೆಲ್ಬರ್ನ್, ಜನವರಿ 18: ರಿಸ್ಟ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಚಾಹಲ್ ಇತಿಹಾಸ ನಿರ್ಮಿಸಿದರು.
ಶುಕ್ರವಾರ (ಜನವರಿ 18) ಎಂಸಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಭರ್ಜರಿ 6 ವಿಕೆಟ್ ಉರುಳಿಸಿದರು. ಈ ಸಾಧನೆಯಿಂದ ಚಾಹಲ್ ಎಂಸಿಜಿಯಲ್ಲಿ ನಡೆದ ಏಕದಿನ ಇನ್ನಿಂಗ್ಸ್ ಒಂದರಲ್ಲಿ ಅಧಿಕ ವಿಕೆಟ್ ಪಡೆದ ಸಾಧಕರಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
ಶುಕ್ರವಾರದ ಪಂದ್ಯದಲ್ಲಿ ಯುಜುವೇಂದ್ರ ಕ್ರಮವಾಗಿ ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಮಾರ್ಕಸ್ ಸ್ಟೋಯ್ನಿಸ್, ಜೀಯೆ ರಿಚರ್ಡ್ಸನ್ ಮತ್ತು ಆದಮ್ ಝಂಪಾ ವಿಕೆಟ್ ಬಲಿ ಪಡೆದರು. ಹೀಗಾಗಿ ಎಂಸಿಜಿಯಲ್ಲಿ ಈ ಸಾಧನೆ ಮೆರೆದ ಅಗ್ರ ಐವರು ಆಟಗಾರಲ್ಲಿ ಚಾಹಲ್ ಮೊದಲ ಸ್ಥಾನ ಆವರಿಸಿಕೊಂಡಿದ್ದಾರೆ.
42 ರನ್ನಿಗೆ 6 ವಿಕೆಟ್ ಕೆಡವಿ ಮೊದಲ ಸ್ಥಾನದಲ್ಲಿರುವ ಚಾಹಲ್, ಹಿಂದೆ ಬ್ರಾಡ್ ಹಾಗ್ (ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ವಿರುದ್ಧ) ಅವರ 32/5, ಅಬ್ದುಲ್ ಖಾದಿರ್ (ಪಾಕಿಸ್ತಾನ-ಆಸೀಸ್ ವಿರುದ್ಧ) 53/5, ಶೇನ್ ವಾರ್ನ್ (ಆಸೀಸ್-ನ್ಯೂಜಿಲ್ಯಾಂಡ್ ವಿರುದ್ಧ) 19/4, ಪೀಟರ್ ಟೇಲರ್ (ಆಸೀಸ್-ಶ್ರೀಲಂಕಾ ವಿರುದ್ಧ) 38/4 ವಿಕೆಟ್ ಸಾಧನೆಯನ್ನು ಮೀರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications