Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yuzvendra Chahal: ಡಿವೋರ್ಸ್ ಗಾಸಿಪ್ ಬೆನ್ನಲ್ಲೇ ಹೊಸ ಹುಡ್ಗಿ ಜೊತೆ ಕಾಣಿಸಿಕೊಂಡ ಚಹಾಲ್

ಭಾರತ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ನಡುವಿನ ವಿಚ್ಛೇದನ ವಂದತಿಗಳು ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿವೆ. ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ ನಂತರ ಮತ್ತು ಒಟ್ಟಿಗೆ ತೆಗೆದ ಫೋಟೋಗಳನ್ನು ಡಿಲೀಟ್ ಮಾಡಿದ ನಂತರ ವಿಚ್ಛೇದನದ ವದಂತಿಗಳು ವೇಗವನ್ನು ಪಡೆದುಕೊಂಡಿವೆ. ಇದರ ಬೆನ್ನಲ್ಲೇ ಯುಜ್ವೇಂದ್ರ ಹೊಸ ಹುಡುಗಿ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

ಯುಜ್ವೇಂದ್ರ ಚಹಾಲ್ ಇತ್ತೀಚೆಗೆ ಮುಂಬೈನಲ್ಲಿ ನಿಗೂಢ ಹುಡುಗಿಯ ಜೊತೆ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ವೈರಲ್ ಆಗುತ್ತಿರುವ ಫೋಟೋದಲ್ಲಿ, ಚಹಾಲ್ ಅಪರಿಚಿತ ಹುಡುಗಿ ಜೊತೆ ಮುಂಬೈನ ಹೋಟೆಲ್‌ನಲ್ಲಿದ್ದರು. ಚಹಾಲ್ ಬಿಳಿ ಬಣ್ಣದ ಟಿ-ಶರ್ಟ್ ಮತ್ತು ತಿಳಿ ನೀಲಿ ಬ್ಯಾಗಿ ಜೀನ್ಸ್ ಧರಿಸಿದ್ದರು. ಚಹಾಲ್ ಜೊತೆಗಿದ್ದ ಹುಡುಗಿ ಕಡು ಹಸಿರು ಬಣ್ಣದ ಸ್ವೆಟ್‌ಶರ್ಟ್ ಧರಿಸಿರುವುದು ಕಂಡು ಬಂದಿದೆ.

Yuzvendra Chahal spotted with new girl after divorce gossip

ಯುಜ್ವೇಂದ್ರ ಚಹಾಲ್ ಜೊತೆ ಇದ್ದ ಹುಡುಗಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಹೋಟೆಲ್‌ನಲ್ಲಿ ಚಹಾಲ್ ಮತ್ತು ಹುಡುಗಿಯ ಫೋಟೋ ತೆಗೆಯುವಾಗ ಮುಖವನ್ನು ಮರೆಮಾಚುತ್ತಿದ್ದರು ಎಂಬುದು ಕಂಡುಬಂದಿದೆ. ಫೋಟೋ ನೋಡಿದ ನೆಟ್ಟಿಗರು ಚಹಾಲ್ ಹೊಸ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಕೆಲವು ನೆಟ್ಟಿಗರು ಚಹಾಲ ಪರವಾಗಿ ಉತ್ತಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ತಮ್ಮ ವಿಚ್ಛೇದನ ವಂದತಿಗಳಿಂದಾಗಿ ಟ್ರೆಂಡ್‌ನಲ್ಲಿದ್ದಾರೆ. ಈ ವಿಚ್ಛೇದನದ ಗದ್ದಲದ ನಡುವೆ ಚಹಾಲ್ ಇನ್‌ಸ್ಟಾಗ್ರಾಮ್ ಪೋಸ್ಟ್ ಕೂಡ ಸದ್ದು ಮಾಡುತ್ತಿದೆ. ಇದುವರೆಗೂ ಇಬ್ಬರೂ ಈ ವಿಚಾರಗಳ ಬಗ್ಗೆ ಮೌನ ಮುರಿದಿರಲಿಲ್ಲ. ಆದರೆ ಈಗ ಚಹಾಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಾಕುವ ಮೂಲಕ ತುಟಿ ಬಿಚ್ಚಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾಕ್ರಟೀಸ್ ಅವರ ಸಾಲನ್ನು ಹಾಕಿದ್ದಾರೆ. 'ನಿಶ್ಯಬ್ದವು ಆಳವಾದ ಸಂಗೀತವಾಗಿದೆ, ಎಲ್ಲ ಶಬ್ದಗಳಿಗಿಂತ ಅದನ್ನು ಕೇಳುವವರಿಗೆ.' ಎಂದು ಬರೆದಿರುವ ಸಾಕ್ರಟೀಸ್ ಅವರ ಸಾಲನ್ನು ಪೋಸ್ಟ್ ಮಾಡಿದ್ದಾರೆ.

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಇಬ್ಬರೂ ವಿಚ್ಛೇದನ ವದಂತಿಗಳಿಗೆ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಚಹಾಲ್ ಮುಂಬೈ ಮೂಲದ ದಂತವೈದ್ಯೆ ಮತ್ತು ಡ್ಯಾನ್ಸರ್ ಧನಶ್ರೀ ವರ್ಮಾ ಅವರನ್ನು ಡಿಸೆಂಬರ್ 2020 ರಲ್ಲಿ ಗುರುಗ್ರಾಮ್‌ನಲ್ಲಿ ವಿವಾಹವಾಗಿದ್ದರು. ಲಾಕ್‌ಡೌನ್ ವೇಳೆ ಯೂಟ್ಯೂಬ್‌ನಲ್ಲಿ ಚಹಾಲ್ ಧನಶ್ರೀ ವರ್ಮಾ ಅವರ ಆನ್‌ಲೈನ್ ನೃತ್ಯ ತರಗತಿಗೆ ಸೇರಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಕಥೆ ಪ್ರಾರಂಭವಾಯಿತು. ಅಂತಿಮವಾಗಿ ಅವರು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು.

Story first published: Tuesday, January 7, 2025, 18:14 [IST]
Other articles published on Jan 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+