Yuzvendra Chahal: ಭಾರತ-ನ್ಯೂಜಿಲೆಂಡ್ ಫೈನಲ್‌ನಲ್ಲಿ ಹೊಸ ಹುಡುಗಿ ಜೊತೆ ಕಾಣಿಸಿಕೊಂಡ ಚಹಾಲ್
ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಿವೆ. ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಮ್ಮ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಆದರೆ, ಅಭಿಮಾನಿಗಳ ಗಮನ ಸೆಳೆದದ್ದು ಚಹಾಲ್ ಜೊತೆ ಕುಳಿತಿದ್ದ ಅಪರಿಚಿತ ಹುಡುಗಿ. ಈ ಅಪರಿಚಿತ ಹುಡುಗಿಯ ಜೊತೆಗಿನ ಚಹಾಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ಹುಡುಗಿ ಯಾರೆಂದು ತಿಳಿಯಲು ಅಭಿಮಾನಿಗಳು ಹತಾಶರಾಗಿದ್ದಾರೆ.
ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಹಾಲ್ ಕಳೆದ ಕೆಲವು ವಾರಗಳಿಂದ ವಿಚ್ಛೇದನದ ಬಗ್ಗೆ ಸುದ್ದಿಯಲ್ಲಿದ್ದರು. ಇತ್ತೀಚೆಗೆ ಇಬ್ಬರು ಬೇರ್ಪಟ್ಟಿರುವ ಬಗ್ಗೆ ಹಲವು ವರದಿಗಳಲ್ಲಿ ಹೇಳಲಾಗುತ್ತಿದೆ.

ಮುಂಬೈನ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ಚಹಾಲ್ ಅಥವಾ ಧನಶ್ರೀ ಆಗಲಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಇದೆಲ್ಲದರ ನಡುವೆ, ಚಹಲ್ ಅವರು ಭಾರತ-ನ್ಯೂಜಿಲೆಂಡ್ ಫೈನಲ್ ಪಂದ್ಯವನ್ನು ವೀಕ್ಷಿಸಲು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ತಲುಪಿದರು, ಅಲ್ಲಿ ಅವರೊಂದಿಗೆ ಕುಳಿತಿದ್ದ ಅಪರಿಚಿತ ಹುಡುಗಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.
ಯುಜ್ವೇಂದ್ರ ಚಹಾಲ್ ಅವರೊಂದಿಗೆ ಇರುವ ಹುಡುಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಫೋಟೋದಲ್ಲಿ ಇಬ್ಬರೂ ಮಾತನಾಡುತ್ತಿರುವುದು ಕಂಡು ಬಂದಿದೆ. ಫೋಟೋ ವೈರಲ್ ಆದ ತಕ್ಷಣ, ಅಭಿಮಾನಿಗಳು ಚಹಾಲ್ ಅವರೊಂದಿಗೆ ಇದ್ದ ಹುಡುಗಿ ಯಾರು ಎಂದು ತಿಳಿದುಕೊಳ್ಳುವ ಕುತೂಹಲಗೊಂಡಿದ್ದಾರೆ. 'ಅವಳು ಧನಶ್ರೀಗಿಂತ ಸುಂದರವಾಗಿ ಕಾಣುತ್ತಿದ್ದಾಳೆ' ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಆದರೆ, ಚಹಾಲ್ ಜೊತೆಗಿರುವ ಹುಡುಗಿ ಯಾರು ಎಂಬುದರ ಕುರಿತು ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.
ಇತ್ತೀಚಿನ ದಿನಗಳಲ್ಲಿ ಚಹಾಲ್ ಟೀಮ್ ಇಂಡಿಯಾದಿಂದ ಹೊರಗಿದ್ದಾರೆ. ಅವರು ಕೊನೆಯ ಬಾರಿಗೆ 2024 ರ ಟಿ 20 ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಟೀಮ್ ಇಂಡಿಯಾ ಕೂಡ ವಿಶ್ವ ಚಾಂಪಿಯನ್ ಆಯಿತು. ಆದರೆ ಚಹಾಲ್ ಅವರಿಗೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications