For Quick Alerts
ALLOW NOTIFICATIONS  
For Daily Alerts
 

Yuzvendra Chahal: ಟೀಮ್ ಇಂಡಿಯಾದಿಂದ ಹೊರಗಿರುವ ಯುಜ್ವೇಂದ್ರ ಚಹಾಲ್ ದೊಡ್ಡ ನಿರ್ಧಾರ

ಭಾರತ ಕ್ರಿಕೆಟ್ ತಂಡದಿಂದ ದೀರ್ಘಕಾಲದಿಂದ ಹೊರಗುಳಿದಿದ್ದ ಬಲಗೈ ಸ್ಪಿನ್ ಬೌಲರ್ ಯುಜ್ವೇಂದ್ರ ಚಹಾಲ್ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಟಿ20 ವಿಶ್ವಕಪ್ 2024ರಲ್ಲಿ ಭಾರತ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಸ್ಥಾನ ಪಡೆದಿದ್ದರೂ. ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿರಲಿಲ್ಲ. ಇದಾದ ನಂತರ ನಡೆದ ಯಾವುದೇ ಸರಣಿಗಳಲ್ಲಿಯೂ ಟೀಮ್ ಇಂಡಿಯಾ ಪರ ಯುಜ್ವೇಂದ್ರ ಚಹಾಲ್ ಕಾಣಿಸಿಕೊಂಡಿಲ್ಲ. ಹೀಗಾಗಿ ಯುಜುವೇಂದ್ರ ಚಹಾಲ್ ಈಗ ಬೇರೆ ದೇಶಕ್ಕೆ ಹೋಗಿ ಕ್ರಿಕೆಟ್ ಆಡಲು ನಿರ್ಧರಿಸಿದ್ದಾರೆ.

ಯುಜ್ವೇಂದ್ರ ಚಹಾಲ್ 2025ರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಮತ್ತೊಮ್ಮೆ ನಾರ್ಥಾಂಪ್ಟನ್‌ಶೈರ್ ಪರ ಆಡಲು ತಯಾರಿ ನಡೆಸುತ್ತಿದ್ದಾರೆ. ಐಪಿಎಲ್ 2025ರ ನಂತರ ಯುಜ್ವೇಂದ್ರ ಚಹಾಲ್ ಜೂನ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರು ಕೌಂಟಿ ಚಾಂಪಿಯನ್‌ಶಿಪ್ ಮತ್ತು ಏಕದಿನ ಕಪ್ ಎರಡರಲ್ಲೂ ಭಾಗವಹಿಸಲಿದ್ದು, ಅವರ ಮೊದಲ ಪಂದ್ಯ ಜೂನ್ 22 ರಂದು ಮಿಡ್ಲ್‌ಸೆಕ್ಸ್ ವಿರುದ್ಧ ನಡೆಯಲಿದೆ.

Yuzvendra Chahal to play for Northamptonshire in County Championship 2025

ಯುಜ್ವೇಂದ್ರ ಚಹಾಲ್ 2024 ರಲ್ಲಿ ನಾರ್ಥಾಂಪ್ಟನ್‌ಶೈರ್‌ಗಾಗಿ ಕೌಂಟಿ ಚಾಂಪಿಯನ್‌ಶಿಪ್ ಮತ್ತು ಏಕದಿನ ಕಪ್‌ನಲ್ಲಿ ಭಾಗವಹಿಸಿದ್ದರು. ಏಕದಿನ ಕಪ್‌ನಲ್ಲಿ ಕೆಂಟ್ ವಿರುದ್ಧದ ತಮ್ಮ ಚೊಚ್ಚಲ ಪಂದ್ಯದಲ್ಲೇ ಯುಜ್ವೇಂದ್ರ ಚಹಾಲ್ ಐದು ವಿಕೆಟ್‌ಗಳನ್ನು ಕಬಳಿಸಿದ್ದರು. ನಂತರ ಡರ್ಬಿಶೈರ್ ವಿರುದ್ಧದ ಪಂದ್ಯದಲ್ಲಿ ಯುಜ್ವೇಂದ್ರ ಚಹಾಲ್ 99 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಬಳಿಸಿದರು. ಇದು ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿತ್ತು. ಡರ್ಬಿಶೈರ್ ಮತ್ತು ಲೀಸೆಸ್ಟರ್‌ಶೈರ್ ವಿರುದ್ಧ ಚಹಾಲ್ ಅವರ ಪ್ರದರ್ಶನವು ನಾರ್ಥಾಂಪ್ಟನ್‌ಶೈರ್ ತಂಡವನ್ನು ಸತತ ಎರಡು ಗೆಲುವುಗಳಿಗೆ ಕರೆದೊಯ್ಯಿತು.

ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ನಾನು ನಿಜವಾಗಿಯೂ ಆನಂದಿಸಿದ್ದು, ಆದ್ದರಿಂದ ನಾನು ಹಿಂತಿರುಗಲು ತುಂಬಾ ಸಂತೋಷವಾಗಿದ್ದೇನೆ. ಆ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೆಲವು ಉತ್ತಮ ಆಟಗಾರರಿದ್ದಾರೆ. ನಾನು ಮತ್ತೆ ಕೌಂಟಿ ಭಾಗವಾಗಲು ಕಾಯಲು ಸಾಧ್ಯವಿಲ್ಲ. ಋತುವಿನ ಅಂತ್ಯದ ವೇಳೆಗೆ ನಾವು ಕೆಲವು ಉತ್ತಮ ಕ್ರಿಕೆಟ್ ಆಡಿದ್ದೇವೆ. ಆದ್ದರಿಂದ ನಾವು ಅದನ್ನು ಮಾಡಲು ಸಾಧ್ಯವಾಗುತ್ತದೆ ಅಂದುಕೊಂಡಿದ್ದೇನೆ ಎಂದು ಚಹಾಲ್ ಹೇಳಿದ್ದಾರೆ.

ನಾರ್ಥಾಂಪ್ಟನ್‌ಶೈರ್‌ ತಂಡದ ಹೊಸ ಹೆಡ್‌ಕೋಚ್ ಡ್ಯಾರೆನ್ ಲೆಹ್ಮನ್ ಅವರು ಚಹಾಲ್ ಬಗ್ಗೆ ಮಾತನಾಡಿದ್ದಾರೆ. 'ವಿಶ್ವದ ಅತ್ಯುತ್ತಮ ಲೆಗ್-ಸ್ಪಿನ್ನರ್‌ಗಳಲ್ಲಿ ಚಹಾಲ್ ಕೂಡ ಒಬ್ಬರು. ನಾರ್ಥಾಂಪ್ಟನ್‌ಶೈರ್‌ಗೆ ಮರಳುತ್ತಿರುವುದು ನನಗೆ ನಿಜವಾಗಿಯೂ ಸಂತೋಷ ತಂದಿದೆ. ಜೂನ್ ಮಧ್ಯಭಾಗದಿಂದ ಋತುವಿನ ಅಂತ್ಯದವರೆಗೆ ಅವರು ಕೌಂಟಿ ಕ್ರಿಕೆಟ್‌ನಲ್ಲಿ ಲಭ್ಯವಿದ್ದರೆ ನಮಗೆ ತುಂಬಾ ಒಳ್ಳೆಯದು ಎಂದಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಯುಜುವೇಂದ್ರ ಚಹಾಲ್ ಪಾತ್ರರಾಗಿದ್ದು, ಒಟ್ಟು 205 ವಿಕೆಟ್‌ಗಳನ್ನು ಪಡೆದಿದ್ದಾರೆ. ಆಗಸ್ಟ್ 2023 ರಿಂದ ಯುಜ್ವೇಂದ್ರ ಚಹಾಲ್ ಭಾರತ ಪರ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಯುಜ್ವೇಂದ್ರ ಚಹಾಲ್ 41 ಪ್ರಥಮ ದರ್ಜೆ ಪಂದ್ಯಗಳಲ್ಲಿ 33.79 ಸರಾಸರಿಯಲ್ಲಿ 115 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Friday, March 14, 2025, 19:08 [IST]
Other articles published on Mar 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+