ಮಾರ್ಟಿನ್ ಗಪ್ಟಿಲ್ ವಿಕೆಟ್ ಯುಜುವೇಂದ್ರ ಚಾಹಲ್ ಪಡೆಯಬೇಕಂತೆ!

ಹ್ಯಾಮಿಲ್ಟನ್, ಜನವರಿ 29: ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಇಂದು ಮೂರನೇ ಟಿ-ಟ್ವೆಂಟಿ ಪಂದ್ಯದಲ್ಲಿ ಆಡುತ್ತಿವೆ. ಐದು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯ ಗೆದ್ದು ಮುನ್ನಡೆಯಲ್ಲಿರುವ ಭಾರತ ಇಂದು ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ.
ಹ್ಯಾಮಿಲ್ಟನ್‌ನ ಸೆಡ್ಡನ್ ಪಾಕ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲರ್ ಯುಜುವೇಂದ್ರ ಚಾಹಲ್ ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಅವರ ವಿಕೆಟ್ ಪಡೆಯಬೇಕು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಆಸೆ ವ್ಯಕ್ತಪಡಿಸಿದ್ದಾರೆ.
ಭಾರತ vs ನ್ಯೂಜಿಲೆಂಡ್, 3ನೇ ಟಿ20ಐ, Live ಸ್ಕೋರ್‌ಕಾರ್ಡ್
ಎರಡನೇ ಟಿ-ಟ್ವೆಂಟಿ ಪಂದ್ಯದ ಬಳಿಕ ಚಹಾಲ್ ಮತ್ತು ಮಾರ್ಟಿನ್ ಗಪ್ಟಿಲ್ ನಡುವಿನ ಸನ್ನಿವೇಶ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ನೇರ ಪ್ರಸಾರದಲ್ಲೇ ಚಾಹಲ್ ಗೆ ಗಪ್ಟಿಲ್ ಅವಾಚ್ಯವಾಗಿ ಸಂಬೋಧಿಸಿದ್ದು, ಈ ವಿಡಿಯೋ ವೈರಲ್ ಆಗಿತ್ತು.
ಹಾಗಾಗಿ, ಗಪ್ಟಿಲ್ ವಿಕೆಟ್ ಚಾಹಲ್ ಪಡೆದರೆ ಮಜಾ ಇರುತ್ತೆ ಎಂದು ಸೈಫಿ ಅಭಿಪ್ರಾಯಪಟ್ಟಿದ್ದಾರೆ. ಅಂದ್ಹಾಗೆ, ಚಾಹಲ್ ಗೆ ಗಪ್ಟಿಲ್ ಅವಾಚ್ಯ ಶಬ್ದ ಬಳಸಿದ್ದು ಗಂಭೀರವಾಗಲ್ಲ. ಅದು ಅಕಸ್ಮಾತ್ ಆಗಿ. ರೋಹಿತ್ ಶರ್ಮಾ ಮತ್ತು ಗಪ್ಟಿಲ್ ಸಂಭಾಷಣೆಯಲ್ಲಿ ತೊಡಗಿದ್ದರು. ಈ ವೇಳೆ ಆ್ಯಕರ್ ಕೈಯಿಂದ ಮೈಕ್ ಪಡೆದುಕೊಂಡ ಚಾಹಲ್, ''ವಾಟ್ಸಾಪ್ ಬಾಯ್ಸ್ ಎಂದು ಹೇಳಿಕೊಂಡು ಅವರ ಬಳಿ ಹೋದರು. ಅಷ್ಟರಲ್ಲಿ, ಗಪ್ಟಿಲ್ ಕ್ಯಾರೆ ಗಾಂ....' ಎಂದರು. ಬಹುಶಃ ಆ ಪದದ ಅರ್ಥವೇನು ಎಂಬುದು ಕೂಡ ಗಪ್ಟಿಲ್ ಗೆ ಗೊತ್ತಿಲ್ಲ. ರೋಹಿತ್ ಶರ್ಮಾ ಹೇಳಿಕೊಟ್ಟಿರಬೇಕು ಎನ್ನಲಾಗಿದೆ. ಆದರೂ ಇದು ಕಾಮಿಡಿಗೆ ಆಗಿದ್ದು.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಮಗ ಸೈಫಿ ಅಲಿ ಖಾನ್. ಕ್ರಿಕೆಟ್ ಕುಟುಂಬದ ಸೆಲೆಬ್ರಿಟಿ ಆಗಿರುವ ಸೈಫ್ ತಮ್ಮ ಮುಂದಿನ ಚಿತ್ರವನ್ನು ಸ್ಟಾರ್ ಸ್ಫೋರ್ಟ್ಸ್ ವಾಹಿನಿಯಲ್ಲಿ ಪ್ರಚಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗಪ್ಟಿಲ್ ವಿಕೆಟ್ ಚಾಹಲ್ ಪಡೆಯಬೇಕು ಎಂದು ಹೇಳಿದ್ದಾರೆ. ಆದರೆ ಸೈಫ್ ಮಾತು ನಿಜವಾಗಿಲ್ಲ. ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ವಿಕೆಟ್ ಚಾಹಲ್‌ಗೆ ಲಭಿಸುವ ಬದಲು ವೇಗಿ ಶಾರ್ದೂಲ್ ಠಾಕೂರ್‌ಗೆ ಲಭಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications