For Quick Alerts
ALLOW NOTIFICATIONS  
For Daily Alerts
 

'ನನಗೆ ಈಗ ಅರ್ಥವಾಗಿದೆ'; ಸತತ 3ನೇ ವಿಶ್ವಕಪ್ ತಪ್ಪಿಸಿಕೊಂಡ ಯುಜ್ವೇಂದ್ರ ಚಹಾಲ್ ಹೀಗೆ ಹೇಳಿದ್ದೇಕೆ?

ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮುಂಬರುವ 2023ರ ಏಕದಿನ ವಿಶ್ವಕಪ್‌ ಪಂದ್ಯಾವಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ದೀರ್ಘಾವಧಿಯ ಯೋಜನೆಯಲ್ಲಿದ್ದರು.

ಅದರೆ, ತಂಡದ ಆಡಳಿತವು ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ ಅಕ್ಷರ್ ಪಟೇಲ್‌ಗೆ ಆದ್ಯತೆ ನೀಡಿತು ಮತ್ತು ಎಡಗೈ ಸ್ಪಿನ್ನರ್ ಗಾಯಗೊಂಡ ನಂತರ ಐಸಿಸಿ ಪಂದ್ಯಾವಳಿಯಿಂದ ಹೊರಗುಳಿದರು. ವಿಶ್ವಕಪ್ ಭಾರತ ತಂಡಕ್ಕೆ ಯುಜ್ವೇಂದ್ರ ಚಹಾಲ್‌ರನ್ನು ಹೊರಗಿಟ್ಟು, ಅನುಭವಿ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಲಾಯಿತು.

Yuzvendra Chahals First Reaction On omission from India Squad in World Cup 2023

ಯುಜ್ವೇಂದ್ರ ಚಹಾಲ್ ಈ ಬಾರಿಯೂ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಇತ್ತೀಚಿನ ದಿನಗಳಲ್ಲಿ ಭಾರತದ ಅತ್ಯುತ್ತಮ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಯುಜ್ವೇಂದ್ರ ಚಹಾಲ್ ಅವರನ್ನು ಮತ್ತೊಮ್ಮೆ ತಂಡದಿಂದ ಕಡೆಗಣಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದಕ್ಕೂ ಮೊದಲು, ಯುಜ್ವೇಂದ್ರ ಚಹಾಲ್ ಯುಎಇಯಲ್ಲಿ ನಡೆದ 2021ರ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಲಿಲ್ಲ ಮತ್ತು 2022ರ ಆವೃತ್ತಿಯ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಯ್ಕೆಯಾಗಿದ್ದರೂ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ.

ಇದೀಗ ಇಂಗ್ಲೆಂಡ್‌ನಿಂದ ವಿಸ್ಡನ್‌ನೊಂದಿಗೆ ಮಾತನಾಡಿದ ಯುಜ್ವೇಂದ್ರ ಚಹಾಲ್, ನಾನು ಡ್ರಾಪ್ ಆಗುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ ಮತ್ತು ಅದು ತನ್ನ ಜೀವನದ ಒಂದು ಭಾಗವಾಗಿದೆ ಎಂದು ಹೇಳಿದರು.

Yuzvendra Chahals First Reaction On omission from India Squad in World Cup 2023

"ವಿಶ್ವಕಪ್ ತಂಡದಲ್ಲಿ ಕೇವಲ 15 ಆಟಗಾರರು ಭಾಗವಾಗಿರಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಏಕೆಂದರೆ ಇದು ವಿಶ್ವಕಪ್ ಆಗಿದೆ. ಅಲ್ಲಿ ನೀವು 17 ಅಥವಾ 18 ಆಟಗಾರರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ," ಎಂದು ಯುಜ್ವೇಂದ್ರ ಚಾಹಲ್ ವಿಸ್ಡನ್ ಇಂಡಿಯಾಗೆ ತಿಳಿಸಿದರು.

"ಇದನ್ನು ನಾನು ಸ್ವಲ್ಪ ಕೆಟ್ಟದಾಗಿ ಭಾವಿಸುತ್ತೇನೆ, ಆದರೆ ಜೀವನದಲ್ಲಿ ನನ್ನ ಧ್ಯೇಯವಾಕ್ಯವು ಮುಂದುವರೆಯುತ್ತದೆ. ಸತತ ಮೂರು ವಿಶ್ವಕಪ್‌ಗಳನ್ನು ತಪ್ಪಿಸಿಕೊಂಡಿದ್ದೇನೆ. ನಾನು ಈಗ ಅದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ," ಎಂದು ಯುಜ್ವೇಂದ್ರ ಚಹಾಲ್ ನಗುತ್ತಾ ಉತ್ತರಿಸಿದರು.

ಮನೆಯಲ್ಲಿ ಕುಳಿತುಕೊಳ್ಳಲು ಇಷ್ಟವಿಲ್ಲದ ಕಾರಣ ಕೌಂಟಿ ಕ್ರಿಕೆಟ್ ಆಡಲು ಭಾರತವನ್ನು ತೊರೆದಿದ್ದೇನೆ ಎಂದು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ನರ್ ಹೇಳಿದ್ದಾರೆ.

"ಅದಕ್ಕಾಗಿಯೇ ನಾನು ಕೆಂಟ್‌ನಲ್ಲಿ ಕ್ರಿಕೆಟ್ ಆಡಲು ಬಂದಿದ್ದೇನೆ. ಏಕೆಂದರೆ ನಾನು ಯಾವಾಗಲೂ ಕ್ರಿಕೆಟ್ ಆಡಲು ಬಯಸುತ್ತೇನೆ," ಎಂದು ಯುಜ್ವೇಂದ್ರ ಚಹಾಲ್ ತಿಳಿಸಿದರು.

"ನಾನು ಇಲ್ಲಿ ಕೆಂಪು ಚೆಂಡಿನೊಂದಿಗೆ ಅವಕಾಶವನ್ನು ಪಡೆಯುತ್ತಿದ್ದೇನೆ ಮತ್ತು ನಾನು ಭಾರತಕ್ಕಾಗಿ ಟೆಸ್ಟ್ ಪಂದ್ಯ ಆಡಲು ಬಯಸುತ್ತೇನೆ. ಹಾಗಾಗಿ ಇದು ನನಗೆ ಉತ್ತಮ ಅನುಭವವಾಗಿದೆ," ಎಂದು ಭಾರತದ ಸ್ಟಾರ್ ಲೆಗ್ ಸ್ಪಿನ್ನರ್ ಅಭಿಪ್ರಾಯಪಟ್ಟರು.

ಭಾರತವು ತಮ್ಮ ತಂಡದಲ್ಲಿ ಮೂವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿಕೊಂಡಿದೆ. ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್. ಗಾಯಗೊಂಡ ಅಕ್ಷರ್ ಪಟೇಲ್ ಬದಲಿಗೆ ಅಶ್ವಿನ್ ತಡವಾಗಿ ತಂಡಕ್ಕೆ ಪ್ರವೇಶಿಸಿದರು. ಈ ಮೂವರ ಪೈಕಿ ಕುಲದೀಪ್ ಅವರ ಶೈಲಿಯ ಹೊಸತನದಿಂದಾಗಿ ಭಾರತ ತಂಡದ ಅಸ್ತ್ರವಾಗಬಹುದೆಂದು ನಿರೀಕ್ಷಿಸಲಾಗಿದೆ.

ಯುಜ್ವೇಂದ್ರ ಚಹಾಲ್ ತನ್ನ ಕೌಂಟಿ ಪ್ರವಾಸದ ಬಗ್ಗೆ ಸ್ವಲ್ಪ ಹೆಚ್ಚು ಮಾತನಾಡುತ್ತಾ, ಇಂಗ್ಲೆಂಡ್‌ನಲ್ಲಿ ಟಾಪ್ ಫ್ಲೈಟ್ ಕ್ರಿಕೆಟ್ ಆಡಲು ಸಂತೋಷವಾಗಿದೆ ಮತ್ತು ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತೇನೆ ಎಂದು ಹೇಳಿದರು.

Story first published: Sunday, October 1, 2023, 14:13 [IST]
Other articles published on Oct 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+