Yuzvendra Chahal: ವಿಚ್ಛೇದನ ವದಂತಿಗಳ ನಡುವೆ ಚಹಾಲ್ ಪೋಸ್ಟ್ ವೈರಲ್!
ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿರುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರು ಸುಮಾರು ಐದು ವರ್ಷಗಳ ದಾಂಪತ್ಯದ ನಂತರ ಬೇರ್ಪಡುತ್ತಿದ್ದಾರೆ ಎಂದು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರು ಪರಸ್ಪರ ಅನ್‌ಫಾಲೋ ಮಾಡಿಕೊಂಡಿರುವ ಅವರ ಸಂಬಂಧದ ಬಗ್ಗೆ ಊಹಾಪೋಹಗಳು ಹೆಚ್ಚುವಂತೆ ಮಾಡಿದೆ.
ವರದಿಗಳ ಪ್ರಕಾರ, ಯುಜ್ವೇಂದ್ರ ಚಹಾಲ್ ಅವರು ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೋಗಳನ್ನು ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಇದು ಅವರ ವಿಚ್ಛೇದನ ವಂದತಿಗೆ ಮತ್ತಷ್ಟು ಜೀವ ತುಂಬಿದಂತಿದೆ. ಇದರ ಮಧ್ಯೆ ಚಹಾಲ್ ಇನ್‌ಸ್ಟಾಗ್ರಾಮ್ ಸ್ಟೋರಿ ವೈರಲ್ ಆಗಿದೆ.

ಚಹಾಲ್-ಧನಶ್ರೀ ಬ್ರೇಕಪ್?
ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ಕಳೆದ ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಈ ಸ್ಟಾರ್ ಜೋಡಿಯ ವಿಚ್ಛೇದನದ ವದಂತಿಗಳು ಸದ್ದು ಮಾಡುತ್ತಿರುವುದು ಇದೇ ಮೊದಲಲ್ಲ. 2023ರಲ್ಲಿ ಧನಶ್ರೀ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಚಹಾಲ್ ಅವರನ್ನು ಅನ್‌ಫೋಲೋ ಮಾಡಿದ್ದರು. ಇದು ಅವರ ಸಂಬಂಧದ ಬಗ್ಗೆ ಊಹಾಪೋಹಗಳನ್ನು ಹೆಚ್ಚಿಸಿತು. ಇದೇ ವೇಳೆ ಚಹಾಲ್ ಒಂದು ಪೋಸ್ಟ್ ಅನ್ನು ಮಾಡಿದ್ದರು. ಫೋಸ್ಟ್‌ನಲ್ಲಿ 'ಹೊಸ ಜೀವನವು ಲೋಡ್ ಆಗುತ್ತಿದೆ' ಎಂದು ಬರೆದುಕೊಂಡಿದ್ದರು. ಇದು ಕೂಡ ವಿಚ್ಛೇದನದ ಊಹಾಪೋಹಕ್ಕೆ ಕಾರಣವಾಗಿತ್ತು. ಆದಾಗ್ಯೂ, ಆ ಸಮಯದಲ್ಲಿ ಚಹಾಲ್ ವದಂತಿಗಳನ್ನು ತಳ್ಳಿಹಾಕಿದರು. ಸುಳ್ಳು ಮಾಹಿತಿಯನ್ನು ಹರಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಇದೀಗ ಚಹಾಲ್ ಮಾಡಿರುವ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಏನಿದು ಪೋಸ್ಟ್?
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಹಾಲ್ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ. 'ಕಠಿಣ ಪರಿಶ್ರಮವು ಜನರ ಪಾತ್ರವನ್ನು ಬಹಿರಂಗಪಡಿಸುತ್ತದೆ. ನಿಮ್ಮ ಪ್ರಯಾಣ ನಿಮಗೆ ತಿಳಿದಿದೆ. ನಿನ್ನ ನೋವು ನಿನಗೆ ಗೊತ್ತು. ಇಲ್ಲಿಗೆ ತಲುಪಲು ನೀವು ಏನು ಮಾಡಿದ್ದೀರಿ ಎಂಬುದು ನಿಮಗೆ ತಿಳಿದಿದೆ. ಜಗತ್ತಿಗೇ ಗೊತ್ತು. ನೀವು ಎತ್ತರದಲ್ಲಿದ್ದೀರಿ. ನಿಮ್ಮ ತಂದೆ ತಾಯಿ ಹೆಮ್ಮೆ ಪಡುವಂತೆ ಶ್ರಮಿಸಿದ್ದೀರಿ. ಹೆಮ್ಮೆಯ ಮಗನಂತೆ ಯಾವಾಗಲೂ ಬಲವಾಗಿ ಉಳಿಯಿರಿ ಎಂದು ಬರೆದಿರುವ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.
ಚಹಾಲ್-ಧನಶ್ರೀ ಮೌನ
ಯುಜ್ವೇಂದ್ರ ಚಹಾಲ್ ಚಹಾಲ್ ಅವರ ಇನ್‌ಸ್ಟಾಗ್ರಾಮ್ ಸ್ಟೋರಿ ಹಿನ್ನಲೇ ಏನು ಎಂಬುದು ಭಾರತೀಯ ಕ್ರಿಕೆಟ್ ಅಭಮಾನಿಗಳ ಪ್ರಶ್ನೆ ಆಗಿದೆ. ಕೆಲವರು ಯುಜ್ವೇಂದ್ರ ಚಹಾಲ್ ವಿಚ್ಛೇದನ ಪಡೆದಿದ್ದಾರೆ ಎಂದು ಹೇಳತ್ತಿದ್ದಾರೆ. ಇದಲ್ಲದೆ, ಈಗ ಬರುತ್ತಿರುವ ವರದಿಗಳ ಪ್ರಕಾರ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ಶೀಘ್ರದಲ್ಲಿ ಬೇರೆಯಾಗಲಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಈ ವದಂತಿಗಳ ಬಗ್ಗೆ ಚಹಾಲ್ ಅಥವಾ ಧನಶ್ರೀ ಮೌನ ಮುರಿದಿಲ್ಲ. ಈ ಸ್ಟಾರ್ ಜೋಡಿ 2020 ರಲ್ಲಿ ವಿವಾಹವಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications