ತಂದೆಯಾದ ಸಂಭ್ರಮದಲ್ಲಿ ಜಹೀರ್ ಖಾನ್: ಮಗುವಿನ ಹೆಸರು ಏನು?
ಟೀಮ್ ಇಂಡಿಯಾದ ದಿಗ್ಗಜ ವೇಗದ ಬೌಲರ್ ಜಹೀರ್ ಖನ್, ಸದ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೇಳೆ ಜಹೀರ್ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಈ ಬಗ್ಗೆ ಜಹೀರ್ ಖಾನ್ ಸ್ವತಃ ಸಾಮಾಜಿಕ ತಾಣದಲ್ಲಿ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. 46 ವರ್ಷದ ಮಾಜಿ ಕ್ರಿಕೆಟಿಗ ತಮ್ಮ ಪತ್ನಿ ಸಾಗರಿಕಾ ಘಾಟ್ಗೆ ಜೊತೆಗಿನ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇವರ ಜೊತೆ ಪುಟ್ಟ ಮಗುವನ್ನು ಸಹ ಚಿತ್ರದಲ್ಲಿ ಕಾಣಬಹುದಾಗಿದೆ.
ಜಹೀರ್ ಖಾನ್ ಈ ಪೋಟೋ ಅಪ್ ಲೋಡ್ ಮಾಡ್ತಾ ಇದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ನಟ ಹಾಗೂ ನಟಿಯರು ಶುಭ ಕೋರಿದ್ದಾರೆ. ಜಹೀರ್ ಮತ್ತು ಸಾಗರಿಕಾ ತಮ್ಮ ಮಗಳ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಅವರು ತಮ್ಮ ಮಗುವನ್ನು ಮುದ್ದಿಸುತ್ತಿರುವುದು ಕಂಡುಬಂದರೆ, ಎರಡನೇ ಚಿತ್ರದಲ್ಲಿ ಅವನು ತನ್ನ ಮಗುವಿನ ಬೆರಳುಗಳನ್ನು ಹಿಡಿದಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಜಹೀರ್ ಈ ಫೋಟೋ ಹಾಕಿಕೊಂಡು ಹೀಗೆ ಬರೆದಿದ್ದಾರೆ. 'ದೇವರ ಪ್ರೀತಿ ಮತ್ತು ಆಶೀರ್ವಾದದಿಂದ, ನಾವು ನಮ್ಮ ಪ್ರೀತಿಯ ಪುಟ್ಟ ಮಗಳು "ಫತೇಹ್ ಸಿಂಗ್ ಖಾನ್" ಸ್ವಾಗತಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ. ಅತಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಸುರೇಶ್ ರೈನಾ ಅವರಂತಹ ಪ್ರಮುಖ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಅವರನ್ನು ಅಭಿನಂದಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಹಾಗೂ ಸಾಗರಿಕಾ ದೀರ್ಘಕಾಲ ಡೇಟಿಂಗ್ ಮಾಡಿದ ಬಳಿಕ 2017ರಲ್ಲಿ ಮದುವೆ ಆದರು. ಸಿಂಪಲ್ ಮದುವೆ ಆದ ಜೋಡಿ, ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗಾಗಿ ಅದ್ಧೂರಿ ವಿವಾಹ ಆರತಕ್ಷತೆಯನ್ನು ಏರ್ಪಡಿಸಿದ್ದರು.
ಪ್ರೀತಿ ಆಗಿದ್ದು ಹೇಗೆ?
'ಚಕ್ ದೇ ಇಂಡಿಯಾ' ಚಿತ್ರದಲ್ಲಿ ಪ್ರೀತಿ ಸಭರ್ವಾಲ್ ಪಾತ್ರದಲ್ಲಿ ಸಾಗರಿಕಾ ಘಾಟ್ಗೆ ನಟಿಸಿದ್ದರು. ಈ ಫಿಲ್ಮ್‌ಗೆ ಸಂಬಂಧಿಸಿದ ಪಾರ್ಟಿಯೊಂದರಲ್ಲೇ ಇವರಿಬ್ಬರು ಪರಿಚಿತರಾದರು. ಆರಂಭದಲ್ಲಿ'ಹಾಯ್-ಹಲೋ' ಗೆ ಸೀಮಿತರಾಗಿದ್ದ ಗೆಳೆತನ ದಿನಕಳೆದಂತೆ ಪ್ರೀತಿಯಾಯಿತು. ಇಬ್ಬರ ನಡುವಿನ ಸಾಮಾನ್ಯ ಸ್ನೇಹಿತರು ಇವರಿಬ್ಬರೂ ಪದೆ ಪದೆ ಭೇಟಿಯಾಗಲು ನೆರವಾದರು. ಪರಿಣಾಮ ಭೇಟೆ ಹೆಚ್ಚಾಯಿತು. ಸಮಯನೋಡಿಕೊಂಡು ಜಹೀರ್ ತನ್ನ ಭಾವನೆಗಳನ್ನು ವ್ಯಕ್ತ ಪಡಿಸಿದರು. ಅಲ್ಲಿಂದ ಇಬ್ಬರ ನಡುವಿನ ಸಂಬಂಧ ಗಾಢವಾಗಿ ಬೆಳೆಯುತ್ತಾ ಸಾಗಿತು.
ಜಹೀರ್ ಖಾನ್ ಸಾಧನೆ
ಜಹೀರ್ ಖಾನ್ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್‌ಗಳಲ್ಲಿ ಒಬ್ಬರು. ಇವರು ಅಡಿದ 92 ಟೆಸ್ಟ್ ಪಂದ್ಯಗಳಲ್ಲಿ 311 ವಿಕೆಟ್ ಪಡೆದಿದ್ದಾರೆ. ಈ ವೇಳೆ 15 ಬಾರಿ 4 ವಿಕೆಟ್ ಹಾಗೂ 11 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. ಇನ್ನು ಭಾರತದ ಪರ 200 ಏಕದಿನ ಪಂದ್ಯಗಳನ್ನು ಆಡಿರುವ ಜಹೀರ್ 4.93 ಎಕಾನಮಿಯೊಂದಿಗೆ 282 ವಿಕೆಟ್ ಕಬಳಿಸಿದ್ದಾರೆ. ಆಡಿದ 17 ಟಿ20 ಪಂದ್ಯಗಳಲ್ಲಿ ಜಹೀರ್ 17 ವಿಕೆಟ್ ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications