ಟಿ10 ಕ್ರಿಕೆಟ್ ಲೀಗ್ ಗೆ ಜಹೀರ್, ಪ್ರವೀಣ್, ಮುನಾಫ್

ದುಬೈ, ನವೆಂಬರ್ 05: ಟೀಂ ಇಂಡಿಯಾ ಮಾಜಿ ಆಟಗಾರರಾದ ಜಹೀರ್ ಖಾನ್, ಮುನಾಫ್ ಪಟೇಲ್ ಹಾಗೂ ಪ್ರವೀಣ್ ಕುಮಾರ್ ಅವರು ಮುಂಬರುವ ಟಿ10 ಕ್ರಿಕೆಟ್ ಲೀಗ್ ನಲ್ಲಿ ಬಹುಬೇಡಿಕೆಯ ಆಟಗಾರರಾಗಿ ಹೊರ ಹೊಮ್ಮಿದ್ದಾರೆ.
ಯುಎಇಯಲ್ಲಿ ಕಳೆದ ವರ್ಷ ಚೊಚ್ಚಲ ಆವೃತ್ತಿಯ ಟಿ10 ಕ್ರಿಕೆಟ್ ಲೀಗ್ಶಾರ್ಜಾದಲ್ಲಿ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ನವೆಂಬರ್ 21ರಿಂದ ಡಿಸೆಂಬರ್ 02ರ ತನಕ ನಡೆಯಲಿದೆ.
ಇದು ಒಲಿಂಪಿಕ್ಸ್ನಲ್ಲಿ ಆಡಿಸಲು ಅತ್ಯಂತ ಸೂಕ್ತವಾದ ಕ್ರಿಕೆಟ್ ಪ್ರಕಾರ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿರುವುದರಿಂದ ಕುತೂಹಲ ಇನ್ನಷ್ಟು ಹೆಚ್ಚಿದೆ.
ಯಾರು ಯಾರ ಪರ ಆಡಲಿದ್ದಾರೆ?: ಬೆಂಗಾಲ್ ಟೈಗರ್ಸ್ ಪರ ಜಹೀರ್ ಆಡಲಿದ್ದರೆ, ಪಂಜಾಬಿ ಲೆಜೆಂಡ್ಸ್ ಪರ ಪ್ರವೀಣ್ ಕುಮಾರ್, ಎಸ್ ಬದರಿನಾಥ್- ಮರಾಠ ಅರೇಬಿಯನ್ಸ್ ಪರ, ರಿತೀಂದರ್ ಸಿಂಗ್ ಸೋಧಿ ಅವರು ಕೇರಳ ಕಿಂಗ್ಸ್ ಪರ, ಪಖ್ತೂನ್ಸ್ ಪರ ಆರ್ ಪಿ ಸಿಂಗ್, ರಜಪೂತ್ಸ್ ಪರ ಮುನಾಫ್ ಪಟೇಲ್ ಆಡಲಿದ್ದಾರೆ. ಇವರಲ್ಲದೆ ಪ್ರವೀಣ್ ತಾಂಬೆ ಅವರು ಕರಾಚಿಯನ್ಸ್ ಪರ, ಅಮಿತೋಜ್ ಸಿಂಗ್ ಅವರು ನಾರ್ದನ್ ವಾರಿಯರ್ಸ್ ಪರ ಆಡಲಿದ್ದಾರೆ.
ಟಿ10 ಆಡಲು ಮುಂದಾಗಿದ್ದ ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕರ ಈ ಬಾರಿಯೂ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ವಿಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೊ, ಮೊಹಮದ್ ಆಮಿರ್, ಅಲೆಕ್ಸ್ ಹೇಲ್ಸ್, ಕಿರಾನ್ ಪೊಲ್ಲಾರ್ಡ್, ಡೇವಿಡ್ ಮಿಲ್ಲರ್, ಡರೇನ್ ಸಾಮಿ ಟೂರ್ನಿಯಲ್ಲಿ ಆಡಿದ್ದ ಇತರ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರು.
ಒಟ್ಟು 8 ಫ್ರಾಂಚೈಸಿಗಳು ಕಣದಲ್ಲಿವೆ. ಅವುಗಳೆಂದರೆ ಕೇರಳ ಕಿಂಗ್ಸ್ (ಭಾರತ), ಮರಾಠ ಅರೇಬಿಯನ್ಸ್,ಬೆಂಗಾಲ್ ಟೈಗರ್ಸ್ (ಬಾಂಗ್ಲಾದೇಶ), ದಿ ಕರಾಚಿಯನ್ಸ್(ಪಾಕಿಸ್ತಾನ) ಪಾಖ್ತೂನ್ಸ್, ಪಂಜಾಬ್ ಲೆಜೆಂಡ್ಸ್ (ಪಾಕಿಸ್ತಾನ), ಪಖ್ತೂನ್ಸ್, ನಾರ್ದನ್ ವಾರಿಯರ್ಸ್

ಯಾರು ಯಾರ ಪರ ಆಡಲಿದ್ದಾರೆ?:
ಬೆಂಗಾಲ್ ಟೈಗರ್ಸ್ ಪರ ಜಹೀರ್ ಆಡಲಿದ್ದರೆ, ಪಂಜಾಬಿ ಲೆಜೆಂಡ್ಸ್ ಪರ ಪ್ರವೀಣ್ ಕುಮಾರ್, ಎಸ್ ಬದರಿನಾಥ್- ಮರಾಠ ಅರೇಬಿಯನ್ಸ್ ಪರ, ರಿತೀಂದರ್ ಸಿಂಗ್ ಸೋಧಿ ಅವರು ಕೇರಳ ಕಿಂಗ್ಸ್ ಪರ, ಪಖ್ತೂನ್ಸ್ ಪರ ಆರ್ ಪಿ ಸಿಂಗ್, ರಜಪೂತ್ಸ್ ಪರ ಮುನಾಫ್ ಪಟೇಲ್ ಆಡಲಿದ್ದಾರೆ. ಇವರಲ್ಲದೆ ಪ್ರವೀಣ್ ತಾಂಬೆ ಅವರು ಕರಾಚಿಯನ್ಸ್ ಪರ, ಅಮಿತೋಜ್ ಸಿಂಗ್ ಅವರು ನಾರ್ದನ್ ವಾರಿಯರ್ಸ್ ಪರ ಆಡಲಿದ್ದಾರೆ.

ಕೇವಲ 90 ನಿಮಿಷದಲ್ಲಿ ಮುಗಿದುಹೋಗುತ್ತದೆ
ಟಿ10 ಪಂದ್ಯ ಕೇವಲ 90 ನಿಮಿಷದಲ್ಲಿ ಮುಗಿದುಹೋಗುತ್ತದೆ. 10 ಓವರ್ಗಳಲ್ಲಿ 2 ಓವರ್ ಪವರ್ಪ್ಲೇ ಇರುತ್ತದೆ. ಈ ಬಾರಿ ೨೯ ಪಂದ್ಯಗಳು ನಡೆಯಲಿವೆ. ಅಂದ ಹಾಗೆ, 39 ವರ್ಷ ವಯಸ್ಸಿನ ಸೆಹ್ವಾಗ್ ಮರಾಠ ತಂಡದಲ್ಲಿದ್ದರು. ಈ ತಂಡಕ್ಕೆ ವಾಸೀಂ ಅಕ್ರಂ ಕೋಚ್. ಬಾಲಿವುಡ್ ನಟ ಸೊಹೈಲ್ ಖಾನ್ ಸಹ ಮಾಲೀಕತ್ವ ಈ ತಂಡಕ್ಕಿದೆ.
ಈ ಬಾರಿ ಸೆಹ್ವಾಗ್ ಆಡುವುದು ಅನುಮಾನ, ಜಹೀರ್ ಅವರು 14 ವರ್ಷಗಳ ಕಾಲ ಕ್ರಿಕೆಟ್ ಬದುಕಿನಲ್ಲಿ 311 ಟೆಸ್ಟ್ ವಿಕೆಟ್, 282 ಏಕದಿನ ವಿಕೆಟ್, 17 ಟಿ20 ವಿಕೆಟ್ ಗಳಿಸಿದ್ದಾರೆ.

ಟಿ10 ಲೀಗ್ ಚೇರ್ಮನ್ ಶಾಜಿ ಮುಲ್ಕ್
ಟಿ10 ಲೀಗ್ ಗೆ ಭಾರತದ ಸ್ಟಾರ್ ಆಟಗಾರರನ್ನು ಸೇರಿಸುವುದರಿಂದ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಲಿದೆ. 90ನಿಮಿಷಗಳಲ್ಲಿ ಮುಗಿಯುವ ಈ ಪಂದ್ಯಗಳು 12 ದಿನಗಳ ಕಾಲ ಎಲ್ಲರನ್ನು ರಂಜಿಸಲಿದೆ. ಮೊದಲ ಆವೃತ್ತಿ ನಾಲ್ಕು ದಿನಗಳ ಕಾಲ ಆಯೋಜನೆಗೊಂಡಿತ್ತು ಎಂದರು.

ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ನಿಂದ ಮಾನ್ಯತೆ
ವಿಶ್ವದ ಮೊಟ್ಟ ಮೊದಲ 10 ಓವರ್ ಗಳ ಅಂತಾರಾಷ್ಟ್ರೀಯ ವೃತ್ತಿಪರರ ಕ್ರಿಕೆಟ್ ಲೀಗ್ ಗೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಮಾನ್ಯತೆ ಸಿಕ್ಕಿದೆ. ಸೋನಿ ನೆಟ್ವರ್ಕ್ ಮೂರು ವರ್ಷಗಳ ಕಾಲ ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾಗಳಲ್ಲಿ ಪ್ರಸಾರದ ಹಕ್ಕು ಪಡೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications