ಅಶಿಸ್ತು ಪ್ರದರ್ಶಿಸಿದ ಲೆಗ್ ಸ್ಪಿನ್ನರ್ ಝಾಂಪಗೆ ಎಚ್ಚರಿಸಿದ ಐಸಿಸಿ!

ಲಂಡನ್, ಜೂನ್ 07: ವೆಸ್ಟ್ ಇಂಡೀಸ್ ವಿರುದ್ಧದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದ ವೇಳೆ ಅಶಿಸ್ತು ಪ್ರದರ್ಶಿಸಿ ಪ್ರಥಮಿಕ ಹಂತದ ನಿಯಮ ಉಲ್ಲಂಘನೆ ಎಸಗಿದೆ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಝಾಂಪಗೆ ಔಪಚಾರಿಕೆ ಎಚ್ಚರಿಕೆ ನೀಡಲಾಗಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಗುರುವಾರ ನಡೆದ ಪಂದ್ಯದ ವೇಳೆ ಝಾಂಪ ಐಸಿಸಿ ನೀತಿ ನಿಯಮದ ಉಲ್ಲಂಘನೆ ಮಾಡಿರುವುದು ತಿಳಿದುಬಂದಿದ್ದು, ಪ್ರಥಮಿಕ ಹಂತದ ಉಲ್ಲಂಘನೆಯಾದ ಕಾರಣ ಐಸಿಸಿ ಯಾವುದೇ ದಂಡ ವಿಧಿಸದೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದೆ. ಅಲ್ಲದೆ ಶಿಸ್ತು ಕ್ರಮ ಕೈಗೊಂಡು ಒಂದು ಡೀಮೆರಿಟ್ ಅಂಕವನ್ನು ನೀಡಿದೆ.
"ತಮ್ಮ ಅಸಭ್ಯ ವರ್ತನೆಯನ್ನು ಝಾಂಪ ಒಪ್ಪಿಕೊಂಡಿದ್ದು, ಮ್ಯಾಚ್ ರೆಫ್ರಿ ಜೆಫ್ ಕ್ರೋವ್ ವಿಧಿಸಿರುಚ ಶಿಕ್ಷೆಗೆ ಸಮ್ಮತಿಸಿದ್ದಾರೆ. ಹೀಗಾಗಿ ಈ ವಿಚಾರವಾಗಿ ಯಾವುದೇ ಹೆಚ್ಚುವರಿ ವಿಚಾರಣೆ ನಡೆಯುವುದಿಲ್ಲ. ಆನ್‌ಫೀಲ್ಡ್ ಅಂಪೈರ್‌ಗಳಾದ ಮಾರಾಯಿಸ್ ಎರಾಸ್ಮಸ್ ಮತ್ತು ಕ್ರಿಸ್ ಗ್ಯಾಫನಿ ಮೂರನೇ ಅಂಪೈರ್ ರುಚಿರಾ ಪಲ್ಲಿಯಾಗುರುಗೆ ಹಾಗೂ 4ನೇ ಅಂಪೈರ್ ಎಸ್. ರವಿ ಝಾಂಪಾ ವಿರುದ್ಧದ ಶಿಕ್ಷೆಗೆ ಸಮ್ಮತಿಸಿದ್ದಾರೆ,'' ಎಂದು ಐಸಿಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಆರಂಭಿಕ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಜಯ ದಾಖಲಿಸಿದ್ದ ಆಸ್ಟ್ರೇಲಿಯಾ ತಂಡ ಗುರುವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 15 ರನ್‌ಗಳ ಅಂತರದಲ್ಲಿ ಮಣಿಸಿ ಸತತ ಎರಡನೇ ಗೆಲುವಿನ ಸಿಹಿಯುಂಡಿದೆ. ಇದೀಗ ತನ್ನ ಮೂರನೇ ಪಂದ್ಯದಲ್ಲಿ ಜೂನ್ 9ರಂದು ಬಲಿಷ್ಠ ಭಾರತ ವಿರುದ್ಧ ಪೈಪೋಟಿ ನಡೆಸಲಿದೆ.
ಆಸ್ಟ್ರೇಲಿಯಾ: 49 ಓವರ್‌ಗಳಲ್ಲಿ 288/10 (ಸ್ಟೀವ್ ಸ್ಮಿತ್ 73, ಅಲೆಕ್ಸ್ ಕ್ಯಾರಿ 43, ನೇಥನ್ ಕೌಲ್ಟರ್ ನೈಲ್ 92; ಕಾರ್ಲೋಸ್ ಬ್ರಾತ್‌ವೇಟ್ 67ಕ್ಕೆ 3).
ವೆಸ್ಟ್ ಇಂಡೀಸ್: 50 ಓವರ್‌ಗಳಲ್ಲಿ 273/9 (ಶೇಯ್ ಹೋಪ್ 68, ನಿಕೊಲಸ್ ಪೂರನ್ 40, ಜೇಸನ್ ಹೋಲ್ಡರ್ 51; ಮಿಚೆಲ್ ಸ್ಟಾರ್ಕ್ 46ಕ್ಕೆ 5, ಪ್ಯಾಟ್ ಕಮಿನ್ಸ್ 41ಕ್ಕೆ 2).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications