For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ಏಕದಿನ ಸರಣಿ ಗೆಲ್ಲಲಿದ್ದೇವೆ ಎಂದು ಭವಿಷ್ಯ ನುಡಿದ ಜಿಂಬಾಬ್ವೆ ಆಟಗಾರ

ZIM vs IND: Innocent Kaia said Zimbabwe will win tODI series against India by 2-1

ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಟೀಮ್ ಇಮಡಿಯಾ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದರೂ ಬಲಿಷ್ಠ ತಮಡದೊಂದಿಗೆ ಜಿಂಬಾಬ್ವೆಗೆ ಪ್ರಯಾಣಿಸಿದೆ. ಆದರೆ ಈ ಸರಣಿಯಲ್ಲಿ ಜಿಂಬಾಬ್ವೆ ಖಂಡಿತವಾಗಿಯೂ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ಜಿಂಬಾಬ್ವೆ ತಂಡದ ಆಟಗಾರ ಇನೋಸೆಂಟ್ ಕೈಯಾ ವ್ಯಕ್ತಪಡಿಸಿದ್ದಾರೆ.

ಇನೋಸೆಣಟ್ ಕೈಯಾ ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. ಆದರೆ ಈ ಸರಣಿಯನ್ನು ಬಾಂಗ್ಲಾದೇಶದ ವಿರುದ್ಧ ಜಿಂಬಾಬ್ವೆ 1-2 ಅಂತರದಿಂದ ಸೋಲು ಅನುಭವಿಸಿತ್ತು. ಆದರೆ ಭಾರತದ ವಿರುದ್ಧದ ಸರಣಿಯನ್ನು ಜಿಂಬಾಬ್ವೆ 2-1 ಅಂತರದಿಂದ ಗೆಲುವು ಸಾಧಿಸಲಿದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ ಇನೋಸೆಂಟ್ ಕೈಯಾ.

ಭಾರತ ತಂಡದ ಅನನುಭವ ನೆರವಾಗಲಿದೆ

ಭಾರತ ತಂಡದ ಅನನುಭವ ನೆರವಾಗಲಿದೆ

"ಈ ಸರಣಿಯನ್ನು ಜಿಂಬಾಬ್ವೆ 2-1 ಅಂತರದಿಂದ ಗೆಲುವು ಸಾಧಿಸಲಿದೆ. ನನ್ನ ವೈಯಕ್ತಿಕ ನಿರೀಕ್ಷೆಯಲ್ಲಿ ನಾನು ಈ ಸರಣಿಯಲ್ಲಿ ಅತ್ಯಂತ ಹೆಚ್ಚು ರನ್‌ಗಳಿಸಲು ಬಯಸುತ್ತೇನೆ ಮತ್ತು ಶತಕವನ್ನು ಗಳಿಸಲು ಬಯಸುತ್ತೇನೆ. ಸರಳವಾದ ಯೋಜನೆ. ಹೆಚ್ಚು ರನ್‌ಗಳಿಸಿ ಈ ಸರಣಿಯಲ್ಲಿ ಹೆಚ್ಚು ರನ್‌ಗಳಿಸಬೇಕು ಎಂಬುದು ನನ್ನ ಯೋಜನೆಯಾಗಿದೆ. ಅದೇ ನನ್ನ ಗುರಿ" ಎಂದಿದ್ದಾರೆ ಕೈಯಾ. ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಜಿಂಬಾಬ್ವೆಯ ಈ ಆಟಗಾರ.

ಟೀಮ್ ಇಂಡಿಯಾಗೆ ಕೆಎಲ್ ನಾಯಕ

ಟೀಮ್ ಇಂಡಿಯಾಗೆ ಕೆಎಲ್ ನಾಯಕ

ಇನ್ನು ಸುದೀರ್ಘ ಕಾಲ ಗಾಯದ ಕಾರಣದಿಂದಾಗಿ ವಿಶ್ರಾಂತಿಯಲ್ಲಿದ್ದ ಕೆಎಲ್ ರಾಹುಲ್ ಮತ್ತೆ ಆಡಲು ಸಮರ್ಥವಾಗಿದ್ದು ಈ ಸರಣಿಯ ಮೂಲಕ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ತಂಡದ ನಾಯಕತ್ವದ ಹೊಣೆಗಾರಿಕೆ ಕೆಎಲ್ ರಾಹುಲ್ ಹೆಗಲೇರಿದೆ. ಇದಕ್ಕೂ ಮೊದಲು ಜುಲೈ 30ರಂದು ಈ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಪ್ರಕಟಿಸಿದ್ದಾಗ ಕೆಎಲ್ ರಾಹುಲ್ ಅವರು ಈ ತಂಡದಲ್ಲಿರಲಿಲ್ಲ. ಶಿಖರ್ ಧವನ್ ಅವರನ್ನು ತಂಡದ ನಾಯಕನನ್ನಾಗಿ ಘೋಷಣೆ ಮಾಡಲಾಗಿತ್ತು. ಬಳಿಕ ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು ನಾಯಕತ್ವವನ್ನು ಕೂಡ ರಾಹುಲ್‌ಗೆ ನೀಡಲಾಗಿದೆ, ಧವನ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ.

ಒಂದೇ ತಾಣದಲ್ಲಿ ನಡೆಯಲಿದೆ ಏಕದಿನ ಸರಣಿ

ಒಂದೇ ತಾಣದಲ್ಲಿ ನಡೆಯಲಿದೆ ಏಕದಿನ ಸರಣಿ

ಇನ್ನು ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳು ಕೂಡ ಒಂದೇ ತಾಣದಲ್ಲಿ ನಡೆಯಲಿದೆ. ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಈ ಮೂರು ಪಂದ್ಯಗಳು ಆಯೋಜನೆಯಾಗಲಿದ್ದು ಆಗಸ್ಟ್ 18, 20 ಹಾಗೂ 22ರಂದು ಈ ಪಂದ್ಯಗಳು ನಡೆಯಲಿದೆ. ಆಗಸ್ಟ್ 22ರಂದು ಈ ಸರಣಿ ಅಂತ್ಯವಾಗಲಿದ್ದು ಈ ಸರಣಿಯಿಂದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಈ ಸರಣಿ ಮುಕ್ತಾಯವಾದ ಕೆಲವೇ ದಿನಗಳ ಅಂತರದಲ್ಲಿ ಅಂದರೆ ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ದ್ರಾವಿಡ್ ಬದಲಿಗೆ ಲಕ್ಷ್ಮಣ್ ಅವರನ್ನು ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡಕ್ಕೆ ಕೋಚ್ ಆಗಿ ನೇಮಿಸಲಾಗಿದೆ.

ಭಾರತ ತಂಡದ ಸ್ಕ್ವಾಡ್ ಹೀಗಿದೆ

ಭಾರತ ತಂಡದ ಸ್ಕ್ವಾಡ್ ಹೀಗಿದೆ

ಟೀಮ್ ಇಂಡಿಯಾ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್ , ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್.

Story first published: Sunday, August 14, 2022, 21:49 [IST]
Other articles published on Aug 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+