ZIM vs NZ Test: ಜಿಂಬಾಬ್ವೆ ಬ್ಯಾಟರ್‌ಗಳನ್ನು ಕಾಡಿದ ಕಿವೀಸ್ ವೇಗಿ
ನ್ಯೂಜಿಲೆಂಡ್ ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿದೆ. ಈ ವೇಳೆ ಆತಿಥೇಯ ತಂಡದ ವಿರುದ್ಧ ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯ ಬುಧವಾರದಿಂದ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿದೆ. ಆತಿಥೇಯ ತಂಡದ ಬ್ಯಾಟಿಂಗ್ ವಿಭಾಗಕ್ಕೆ ನ್ಯೂಜಿಲೆಂಡ್ ತಂಡದ ಮಾರಕ ವೇಗಿ ಮ್ಯಾಟ್ ಹೆನ್ರಿ ಪೆಟ್ಟು ನೀಡಿದ್ದಾರೆ. ಇವರ ದಾಳಿಯನ್ನು ಎದುರಿಸುವಲ್ಲಿ ವಿಫಲರಾಗಿರುವ ಬಿಂಬಾಬ್ವೆ 149 ರನ್‌ಗಳಿಗೆ ಆಲೌಟ್ ಆಗಿದೆ.
ಜಿಂಬಾಬ್ವೆ ಪರ ಎರ್ವಿನ್ (39) ಟಾಪ್ ಸ್ಕೋರರ್ ಆದರೆ, ತಫಡ್ಜಾವ್ ಸಿಗಾ 30 ರನ್ ಗಳಿಸಿದರು. ಉಳಿದಂತೆ ಸ್ಟಾರ್ ಬ್ಯಾಟರ್‌ಗಳಾದ ಬ್ರಿಯಾನ್ ಬೆನೆಟ್, ಬೆನ್ ಕರನ್ ಮತ್ತು ಸಿಕಂದರ್ ರಾಜಾ ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ಪಂದ್ಯದಲ್ಲಿ ಜಿಂಬ್ವಬೆಯ 60.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ನ್ಯೂಜಿಲೆಂಡ್ ತಂಡದ ಪರ ಮ್ಯಾಟ್ ಹೆನ್ರಿ ಅಮೋಘ ದಾಳಿ ನಡೆಸಿದರು. ಇವರು ಕರಾರುವಕ್ ಲೈನ್ ಹಾಗೂ ಲೆಂಥ್ ದಾಳಿಯನ್ನು ಎದುರಿಸುವಲ್ಲಿ ಜಿಂಬಾಬ್ವೆ ಬ್ಯಾಟರ್‌ಗಳು ವಿಫಲರಾದರು. ಪಂದ್ಯದಲ್ಲಿ ಮ್ಯಾಟ್ ಹೆನ್ರಿ 15.3 ಓವರ್ ಬೌಲಿಂಗ್ ಮಾಡಿ 6 ವಿಕೆಟ್ ಪಡೆದು 39 ರನ್ ಬಿಟ್ಟುಕೊಟ್ಟರು. ಇವರನ್ನು ಬಿಟ್ಟರೆ ಕಿವೀಸ್ ತಂಡದ ಪರ ನಾಥನ್ ಸ್ಮಿತ್ 20 ರನ್‌ಗಳಿಗೆ ಮೂರು ವಿಕೆಟ್ ಪಡೆದರು.
ಕೈಲ್ ಮಿಲ್ಸ್ ದಾಖಲೆ ಹಿಂದಿಕ್ಕಿದ ಹೆನ್ರಿ
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ 33 ವರ್ಷದ ಮ್ಯಾಟ್ ಹೆನ್ರಿ ಹಲವು ದಾಖಲೆ ಬರೆದರು. ಇವರು ನ್ಯೂಜಿಲೆಂಡ ಪರ ಅಂತಾರಾಷ್ಟ್ರೀ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಕೈಲ್ ಮಿಲ್ಸ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆನ್ರಿ 328 ವಿಕೆಟ್ ಕಬಳಿಸಿದ್ದಾರೆ. ಕಿವಿ ತಂಡಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವಲ್ಲಿ ಟಿಮ್ ಸೌಥಿ (776 ವಿಕೆಟ್) ಮೊದಲ ಸ್ಥಾನದಲ್ಲಿದ್ದಾರೆ.

ಮೊದಲ ಇನಿಂಗ್ಸ್ ಆಂಭಿಸಿರುವ ಕಿವೀಸ್ ತಂಡ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟ ವಿಲ್ಲದೆ 92 ರನ್ ಕಲೆ ಹಾಕಿದೆ. ಆರಂಭಿಕರಾದ ವಿಲ್ ಯಂಗ್ (ಅಜೇಯ 41), ಡ್ವೇನ್ ಕಾನ್ವೆ (ಅಜೇಯ 51) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications