ಅಂತಾರಾಷ್ಟ್ರೀಯ ಕ್ರಿಕೆಟ್ ಆಟ ಮುಗಿಸಿದ ಆಲ್ ರೌಂಡರ್ ಸೊಲೊಮನ್ ಮೈರ್

ಹರಾರೆ, ಜುಲೈ 23: ಜಿಂಬಾಬ್ವೆ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ಸೊಲೊಮನ್ ಮೈರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸೋಮವಾರ (ಜುಲೈ 22) ಸೊಲೊಮನ್ ಸಾಮಾಜಿಕ ಜಾಲತಾಣದ ಮೂಲಕ ತನ್ನ ನಿರ್ಧಾರ ತಿಳಿಸಿದ್ದಾರೆ.
ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮ ಮೀರಿರುವುದಾಗಿ ಐಸಿಸಿಯು ಜಿಂಬಾಬ್ವೆಯನ್ನು ಇತ್ತೀಚೆಗೆ ಅಮಾನತುಗೊಳಿಸಿತ್ತು. ಅಂದರೆ ಜಿಂಬ್ವಾಬ್ವೆ ಇನ್ನು ಮುಂದೆ ಐಸಿಸಿ ನಡೆಸುವ ಯಾವುದೇ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಜಿಂಜ್ವಾಬ್ವೆ ಈ ಆಘಾತದಲ್ಲಿರುವಾಗಲೇ ಸೊಲೊಮನ್ ನಿವೃತ್ತಿ ಘೋಷಿಸಿದ್ದಾರೆ.
ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಮೈರ್, 'ಇತ್ತೀಚಿನ ಪ್ರವಾಸ ಮುಕ್ತಾಯವಾಗುತ್ತಲೇ ತಂಡದ ಸಹ ಆಟಗಾರರಿಗೆ, ತರಬೇತುದಾರರಿಗೆ ನನ್ನ ನಿರ್ಧಾರವನ್ನು ತಿಳಿಸಿದ್ದೇನೆ. ಜಿಂಬಾಬ್ವೆ ಪರ ಎಲ್ಲಾ ಕ್ರಿಕೆಟ್ ಮಾದರಿಗಳಿಗೆ ಈ ಕೂಡಲೇ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ,' ಎಂದು ಬರೆದುಕೊಂಡಿದ್ದಾರೆ.
ಮುಂದಿನ ಸಾಲುಗಳಲ್ಲಿ, 'ಪ್ರಸ್ತುತ ಬೇಸರದ ಸಂದರ್ಭವಿದ್ದಾಗಲೇ ನಾನು ಈ ನಿರ್ಧಾರ ತಾಳುತ್ತಿರುವುದು ದುರದೃಷ್ಟಕರ. ಈ ಸಂದರ್ಭವನ್ನು ನಿಯಂತ್ರಿಸಿಕೊಳ್ಳೋದು ನನ್ನ ಕೈಲಿಲ್ಲ. ಹೀಗಾಗಿ ಹೊಸ ಹಾದಿಯಲ್ಲಿ ಹೆಜ್ಜೆಯಿಡಲು ನಾನು ಬಯಸಿದ್ದೇನೆ,' ಎಂದು ಮೈರ್ ಹೇಳಿಕೊಂಡಿದ್ದಾರೆ.
ಸೊಲೊಮನ್ ಒಟ್ಟು 47 ಏಕದಿನ ಪಂದ್ಯ, 9 ಟಿ20 ಪಂದ್ಯ, 2 ಟೆಸ್ಟ್ ಪಂದ್ಯಗಳಲ್ಲಿ ಜಿಂಬಾಬ್ವೆಯನ್ನು ಪ್ರತಿನಿಧಿಸಿದ್ದಾರೆ. ಏಕದಿನದಲ್ಲಿ 995 ರನ್, ಟಿ20ಯಲ್ಲಿ 253 ರನ್, ಟೆಸ್ಟ್ ನಲ್ಲಿ 78 ರನ್ ಗಳಿಸಿದ್ದಾರೆ. ಮೈರ್ 2014ರಲ್ಲಿ ಬಾಂಗ್ಲಾ ವಿರುದ್ಧ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದರು. ಸೊಲೊಮನ್‌ಗೀಗ 29ರ ಹರೆಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications