ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐದು ವರ್ಷದ ಬಳಿಕ ಮೊದಲ ಟೆಸ್ಟ್ ಪಂದ್ಯ ಗೆದ್ದ ಜಿಂಬಾಬ್ವೆ

Zimbabwe beat Bangladesh in Sylhet test first won in 5 years

ಸಿಲ್ಹೆಟ್ (ಬಾಂಗ್ಲಾದೇಶ), ನವೆಂಬರ್ 6: ಜಿಂಬಾಬ್ವೆ ತಂಡವು ಐದು ವರ್ಷಗಳಲ್ಲಿಯೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿದೆ.

ಭಾರತದ ಮಾಜಿ ಆಟಗಾರ ಲಾಲ್ ಚಂದ್ ರಜಪೂತ್ ಅವರ ತರಬೇತುದಾರಿಕೆಯಲ್ಲಿ ಸಜ್ಜುಗೊಂಡ ಜಿಂಬಾಬ್ವೆ ತಂಡಕ್ಕೆ ಇದು ಮೊದಲ ಜಯವಾಗಿದೆ.

ಮ್ಯಾಚ್ ಫಿಕ್ಸರ್ ಅಜರುದ್ದೀನ್‌ಗೆ ಗೌರವ ಏಕೆ?: ಬಿಸಿಸಿಐ ವಿರುದ್ಧ ಗಂಭೀರ್ ಕಿಡಿಮ್ಯಾಚ್ ಫಿಕ್ಸರ್ ಅಜರುದ್ದೀನ್‌ಗೆ ಗೌರವ ಏಕೆ?: ಬಿಸಿಸಿಐ ವಿರುದ್ಧ ಗಂಭೀರ್ ಕಿಡಿ

ಬಾಂಗ್ಲಾದೇಶ ತಂಡವನ್ನು ಅದರ ತವರು ನೆಲದಲ್ಲಿಯೇ 151 ರನ್‌ಗಳ ಭಾರಿ ಅಂತರದಿಂದ ಸೋಲಿಸುವ ಮೂಲಕ ಜಿಂಬಾಬ್ವೆ ತನ್ನ ದೀರ್ಘ ಕಾಲದ ಸೋಲಿನ ಗಾಯವನ್ನು ಮರೆಯಿತು. ಅಲ್ಲದೆ, ಇದು 2001ರ ಬಳಿಕದ ಜಿಂಬಾಬ್ವೆಯ ಮೊದಲ ವಿದೇಶಿ ನೆಲದ ಗೆಲುವಾಗಿದೆ.

ರಣಜಿ ತಂಡದ ನಾಯಕತ್ವ ತೊರೆದ ಗೌತಮ್ ಗಂಭೀರ್ ರಣಜಿ ತಂಡದ ನಾಯಕತ್ವ ತೊರೆದ ಗೌತಮ್ ಗಂಭೀರ್

ಜಿಂಬಾಬ್ವೆ ಇದುವರೆಗೂ ಮೂರು ಬಾರಿ ಮಾತ್ರ ವಿದೇಶಿ ನೆಲದಲ್ಲಿ ಗೆಲುವು ಕಂಡಿದೆ. 1998ರಲ್ಲಿ ಪೇಶಾವರದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ್ದ ಜಿಂಬಾಬ್ವೆ, 2001ರಲ್ಲಿ ಚಿತ್ತಗಾಂಗ್ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲುವು ಕಂಡಿತ್ತು. ಅದರ ನಂತರ 17 ವರ್ಷಗಳ ಈ ಗೆಲುವಿನ ಸವಿ ಕಂಡಿದೆ.



ಜಿಂಬಾಬ್ವೆ ಪರ ಚೊಚ್ಚಲ ಪಂದ್ಯ ಆಡುತ್ತಿರುವ ಬ್ರಂಡನ್ ಮವುಟಾ ಎರಡನೆಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ಕೊಹ್ಲಿಗೆ 30: 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್‌' ಎಂದ ಅನುಷ್ಕಾ ಕೊಹ್ಲಿಗೆ 30: 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್‌' ಎಂದ ಅನುಷ್ಕಾ

ಗೆಲುವಿಗೆ 321 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ, ಎರಡನೆಯ ಇನ್ನಿಂಗ್ಸ್‌ನಲ್ಲಿಯೂ ಮುಗ್ಗರಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್ ಗಳಿಸಿದ್ದ ಆತಿಥೇಯರು, ರನ್ ಚೇಸಿಂಗ್‌ನಲ್ಲಿ 169 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್
ಜಿಂಬಾಬ್ವೆ
ಮೊದಲ ಇನ್ನಿಂಗ್ಸ್: 282/10. ಹ್ಯಾಮಿಲ್ಟನ್ ಮಸಕಜ 52, ಸೀನ್ ವಿಲಿಯಮ್ಸ್ 88, ಪೀಟರ್ ಮೂರ್ 63*, ತೈಜುಲ್ ಇಸ್ಲಾಂ 108/6, ನಜ್ಮುಲ್ ಇಸ್ಲಾಂ 49/2
ಎರಡನೆಯ ಇನ್ನಿಂಗ್ಸ್: 181/10. ಹ್ಯಾಮಿಲ್ಟನ್ ಮಸಕಜ 48, ಸಿಕಂದರ್ ರಾಜಾ 25, ಬ್ರೆಂಡನ್ ಟೇಲರ್ 24, ತೈಜುಲ್ ಇಸ್ಲಾಂ 62/5, ಮೆಹಿದಿ ಇಸ್ಲಾಂ 48/3, ನಜ್ಮುಲ್ ಇಸ್ಲಾಂ 27/2

ವೈರಲ್ ವಿಡಿಯೋ: ಧೋನಿಯ ಹೆಲಿಕಾಪ್ಟರ್ ಶಾಟ್ ಕದ್ದ ಆಸೀಸ್‌ನ ಸ್ಮಿತ್!ವೈರಲ್ ವಿಡಿಯೋ: ಧೋನಿಯ ಹೆಲಿಕಾಪ್ಟರ್ ಶಾಟ್ ಕದ್ದ ಆಸೀಸ್‌ನ ಸ್ಮಿತ್!

ಬಾಂಗ್ಲಾದೇಶ
ಮೊದಲ ಇನ್ನಿಂಗ್ಸ್: 143/10. ಅರಿಫುಲ್ ಹಕ್ 41*, ಮುಷ್ಫಿಕುರ್ ರಹೀಂ 31, ಮೆಹಿದಿ ಹಸನ್ 21, ಟೆಂಡೈ ಚಟಾರ 19/3, ಸಿಕಂದರ್ ರಾಜಾ 35/3, ಕೇಲ್ ಜಾರ್ವಿಸ್ 28/2
ಎರಡನೆಯ ಇನ್ನಿಂಗ್ಸ್: 169/10. ಇಮ್ರುಲ್ ಕಯೆಸ್ 43, ಅರಿಫುಲ್ ಹಕ್ 38, ಲಿಟನ್ ದಾಸ್ 23, ಬ್ರಂಡನ್ ಮವುಟಾ 21/4, ಸಿಕಂದರ್ ರಾಜಾ 41/3, ವೆಲ್ಲಿಂಗ್ಟನ್ ಮಸಕಜ 33/2

ಫಲಿತಾಂಶ: ಜಿಂಬಾಬ್ವೆಗೆ 151 ರನ್ ಜಯ.

Story first published: Tuesday, November 6, 2018, 15:30 [IST]
Other articles published on Nov 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X