ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿರಾಟ್, ರೋಹಿತ್ ಮಾಡದ ದಾಖಲೆಯನ್ನು ಬರೆದ ಪಂಜಾಬ್ ಕಿಂಗ್ಸ್ ಆಟಗಾರ
ಟಿ20 ಕ್ರಿಕೆಟ್‌ನ ಇತಿಹಾಸದಲ್ಲಿ ಇಲ್ಲಿವರೆಗೂ ಯಾವುದೇ ಸ್ಟಾರ್ ಬ್ಯಾಟರ್ ಮಾಡದ ಸಾಧನೆಯನ್ನು ಪಂಜಾಬ್ ಕಿಂಗ್ಸ್ ಬ್ಯಾಟರ್ ಮಾಡಿದ್ದಾರೆ. ಈ ದಾಖಲೆಯನ್ನು ಬರೆಯಲು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಿಗೂ ಸಹ ಸಾಧ್ಯವಾಗದ ದಾಖಲೆಯನ್ನು ಜಿಂಬಾಬ್ವೆ ಪ್ಲೇಯರ್ ಬರೆದು ಸೈ ಎನಿಸಿಕೊಂಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ದಾಖಲೆಗಳ ನೋಡುತ್ತಾ ಹೋದರೆ ಇದರಲ್ಲಿ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಹೆಸರುಗಳು ಮುನ್ನೆಲೆಯಲ್ಲಿ ಬರುತ್ತವೆ. ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಈ ಆಟವನ್ನು ಯುವಕರು ಅಪ್ಪಿಕೊಂಡಿದ್ದಾರೆ. ಈ ಯುವಕರ ಆಟದಲ್ಲಿ 37ರ ಹರೆಯದ ಕ್ರಿಕೆಟಿಗ ದಾಖಲೆ ಮಾಡಿದ್ದು, ವಿಶ್ವದ ಗಮನ ಸೆಳೆದಿದ್ದಾರೆ. ಜಿಂಬಾಬ್ವೆ ತಂಡದ ಸಿಕಂದರ್ ರಜಾ ಅವರು ಟಿ20 ಕ್ರಿಕೆಟ್‌ನಲ್ಲಿ ಸತತ 5 ಅರ್ಧಶತಕಗಳನ್ನು ಬಾರಿಸಿ ವಿಶ್ವದಾಖಲೆ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ನಾಯಕ ಸಿಕಂದರ್ ರಜಾ 62 ರನ್ ಬಾರಿಸಿದರು. ಅವರ ಇನಿಂಗ್ಸ್‌ನಿಂದ ಜಿಂಬಾಬ್ವೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 143 ರನ್ ಗಳಿಸಿತು. ಈ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಕೊನೆಯ ಎಸೆತದಲ್ಲಿ 3 ವಿಕೆಟ್‌ಗಳಿಂದ ಜಯ ಸಾಧಿಸಿತು.
ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವಿನ ಈ ಪಂದ್ಯ ಎಷ್ಟು ರೋಚಕವಾಗಿರಬಹುದೆಂದು ಆತಿಥೇಯ ತಂಡವು ಕೊನೆಯ ಓವರ್‌ನಲ್ಲಿ 14 ರನ್ ಮತ್ತು ಕೊನೆಯ ಎರಡು ಎಸೆತಗಳಲ್ಲಿ 6 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದಿತು.
ನಾಯಕ ಸಿಕಂದರ್ ರಜಾ ಸೊಗಸಾದ ಆಟ ಜಿಂಬಾಬ್ವೆ ತಂಡದ ಜಯಕ್ಕೆ ಕಾರಣವಾಗಲಿಲ್ಲ. ಆದರೆ ಸಿಕಂದರ್ ರಜಾ ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆಯುವಂತೆ ಈ ಇನ್ನಿಂಗ್ಸ್ ಮಾಡಿತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರು ಮಾಡದ ಸಾಧನೆ ಆಗಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸತತ 5 ಅರ್ಧಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಸಿಕಂದರ್ ರಜಾ ಪಾತ್ರರಾಗಿದ್ದಾರೆ.

ವಿಶೇಷವೆಂದರೆ ಸಿಕಂದರ್ ರಜಾ ಅವರ ಸತತ 5 ಅರ್ಧಶತಕಗಳು 5 ದೇಶಗಳ ವಿರುದ್ಧ ಬಂದಿವೆ. ಶ್ರೀಲಂಕಾ ವಿರುದ್ಧ ಅರ್ಧಶತಕ ಗಳಿಸುವ ಮೊದಲು, ಅವರು ಕ್ರಮವಾಗಿ ಐರ್ಲೆಂಡ್, ಕೀನ್ಯಾ, ನೈಜೀರಿಯಾ ಮತ್ತು ರುವಾಂಡಾ ವಿರುದ್ಧ ಅರ್ಧಶತಕಗಳ ಇನ್ನಿಂಗ್ಸ್ ಕಟ್ಟಿದ್ದರು.
ನಾಲ್ಕು ಅರ್ಧಶತಕ ಬಾರಿಸಿರುವ ಗಿಲ್
ಸತತ ಅರ್ಧಶತಕಗಳನ್ನು ಗಳಿಸಿದ ದಾಖಲೆಯ ಪಟ್ಟಿಯಲ್ಲಿ ಅಗ್ರ-5 ಸ್ಥಾನದಲ್ಲಿ ಒಬ್ಬನೇ ಭಾರತೀಯ ಆಟಗಾರನಿಲ್ಲ. ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ರೀಜಾ ಹೆಂಡ್ರಿಕ್ಸ್ 4-4 ಅರ್ಧಶತಕಗಳೊಂದಿಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂವರ ಹೊರತಾಗಿ ನಮೀಬಿಯಾದ ಕ್ರೇಗ್ ವಿಲಿಯಮ್ಸ್, ಆರ್. ಪಠಾಣ್ ಮತ್ತು ಫ್ರಾನ್ಸ್‌ನ ಗುಸ್ಟಾವ್ ಮೆಕಾನ್ ಅವರು ಸತತ 4 ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ್ದಾರೆ.
ವಿರಾಟ್ ಸತತ ಮೂರು ಅರ್ಧಶತಕ
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸತತ ಅರ್ಧಶತಕ ಗಳಿಸಿದ ಜಂಟಿ ದಾಖಲೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಅವರ ಹೆಸರಿನಲ್ಲಿದೆ. ಇವರೆಲ್ಲರೂ ಸತತ 3 ಅರ್ಧಶತಕ ಗಳಿಸಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಸತತ ಮೂರು ಬಾರಿ 3 ಅರ್ಧಶತಕ ಬಾರಿಸಿದ ಸಾಧನೆ ಮಾಡಿರುವುದರಿಂದ ಈ ವಿಷಯದಲ್ಲಿ ಕೊಂಚ ಮುಂದಿದ್ದಾರೆ. ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ತಲಾ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications