For Quick Alerts
ALLOW NOTIFICATIONS  
For Daily Alerts
 

Record Break: ಟಿ20 ಕ್ರಿಕೆಟ್‌ನಲ್ಲಿ ಬೃಹತ್ ಮೊತ್ತ ಕಲೆ ಹಾಕಿದ ಜಿಂಬಾಬ್ವೆ; ನೇಪಾಳ, ಭಾರತದ ರೆಕಾರ್ಡ್‌ ಉಡೀಸ್!

ವಿಶ್ವ ಕ್ರಿಕೆಟ್‌ ಜಿಂಬಾಬ್ವೆ ತಂಡ ಸಂಚಲನ ಮೂಡಿಸಿದೆ. ಟಿ20 ಮಾದರಿಯಲ್ಲಿ ಅತಿಹೆಚ್ಚು ರನ್ ಕಲೆ ಹಾಕಿದ ತಂಡವಾಗಿ ಜಿಂಬಾಬ್ವೆ ಇತಿಹಾಸ ಸೃಷ್ಟಿಸಿದೆ. ಬುಧವಾರ ಕೀನ್ಯಾದ ನೈರೋಬಿಯಲ್ಲಿ ನಡೆದ ಟಿ20 ವಿಶ್ವಕಪ್ ಸಬ್​ ರೀಜನಲ್​ ಆಫ್ರಿಕಾ ಕ್ವಾಲಿಫೈಯರ್ ಗ್ರೂಪ್ ಬಿ ಪಂದ್ಯದಲ್ಲಿ ಗ್ಯಾಂಬಿಯಾ ವಿರುದ್ಧ ಜಿಂಬಾಬ್ವೆ ದಾಖಲೆ ನಿರ್ಮಿಸಿದೆ.

ನಾಯಕ ಸಿಕಂದರ್ ರಜಾ ಅವರ 133 ರನ್‌ಗಳ ಅಜೇಯ ಇನ್ನಿಂಗ್ಸ್‌ನಿಂದಾಗಿ ಜಿಂಬಾಬ್ವೆ ತಂಡ 344 ರನ್ ಗಳಿಸಿತು.ಇದರೊಂದಿಗೆ ಜಿಂಬಾಬ್ವೆ ಟಿ20 ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತಿ ದೊಡ್ಡ ಮೊತ್ತ ದಾಖಲಿಸಿದ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಟಿ20 ಕ್ರಿಕೆಟ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 314 ರನ್ ಗಳಿಸಿತ್ತು. ಇದೀಗ ಜಿಂಬಾಬ್ವೆ 344 ರನ್ ಬಾರಿಸುವ ಮೂಲಕ ನೇಪಾಳದ ದಾಖಲೆಯನ್ನು ಮುರಿದೆ.

Zimbabwe created world record by scoring the most runs in international T20 cricket

ಇತ್ತೀಚೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 297 ರನ್ ಗಳಿಸಿತ್ತು. ಇದು ಟಿ20 ಕ್ರಿಕೆಟ್‌ನಲ್ಲಿ ತಂಡವೊಂದು ಗಳಿಸಿದ ಎರಡನೇ ಅತಿಹೆಚ್ಚು ರನ್ ಆಗಿತ್ತು. ಈಗ ಭಾರತ ಮೂರನೇ ಸ್ಥಾನದಲ್ಲಿದೆ. ನಂತರ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ 278 ರನ್ ಕಲೆ ಹಾಕಿ 4ನೇ ಸ್ಥಾನದಲ್ಲಿದ್ದರೆ, ಜೆಕ್ ರಿಪಬ್ಲಿಕ್ ತಂಡ ಟರ್ಕಿ ವಿರುದ್ಧ 278 ರನ್ ಗಳಿಸಿ 5ನೇ ಸ್ಥಾನದಲ್ಲಿದೆ.

ಜಿಂಬಾಬ್ವೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಪವರ್‌-ಪ್ಲೇನಲ್ಲಿ ಎರಡನೇ ಗರಿಷ್ಠ ಸ್ಕೋರ್ ಗಳಿಸಿತು. 6 ಓವರ್‌ಗಳ ನಂತರ ಜಿಂಬಾಬ್ವೆ 1 ವಿಕೆಟ್‌ ನಷ್ಟಕ್ಕೆ 103 ರನ್‌ ಕಲೆ ಹಾಕಿತ್ತು. ಬ್ರಿಯಾನ್ ಬೆನೆಟ್ 50 ರನ್ ಗಳಿಸಿದರೆ, ತಡಿವಾನಾಶೆ ಮರುಮನಿ 19 ಎಸೆತಗಳಲ್ಲಿ 62 ರನ್ ಚಚ್ಚಿದರು. ಇದಾದ ಬಳಿಕ ಕ್ರೀಸ್‌ಗೆ ಬಂದ ನಾಯಕ ಸಿಕಂದರ್ ರಜಾ ಸ್ಪೋಟಕ ಬ್ಯಾಟಿಂಗ್‌ನಿಂದ ಭರ್ಜರಿ ಅಜೇಯ ಶತಕ ಸಿಡಿಸಿ ಮಿಂಚಿದರು. ಅವರು ಕೇವಲ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 15 ಸಿಕ್ಸರ್ ನೆರವಿನಿಂದ 133 ರನ್ ಹೊಡೆದರು. ಇದರೊಂದಿಗೆ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಜಿಂಬಾಬ್ವೆ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಕೇವಲ 33 ಎಸೆತಗಳಲ್ಲಿ ರಜಾ ಶತಕ ಸಿಡಿಸಿದರು.

ಜಿಂಬಾಬ್ವೆ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಗ್ಯಾಂಬಿಯಾ 14.4 ಓವರ್‌ಗಳಲ್ಲಿ 54 ರನ್‌ಗಳಿಗೆ ಸರ್ವಪತನವಾಯಿತು. ಆಂಡ್ರೆ ಜಾರ್ಜು (12) ಮಾತ್ರ ತಂಡದ ಪರ ಎರಡಂಕಿ ರನ್ ಗಳಿಸಿ ಆಟಗಾರರಾದರು. ಜಿಂಬಾಬ್ವೆ ಪರ ರಿಚರ್ಡ್ ಮತ್ತು ಬ್ರಾಂಡನ್ ತಲಾ 3 ವಿಕೆಟ್ ಕಬಳಿಸಿ ಗೆಲುವಿಗೆ ಕಾರಣರಾದರು. ಜಿಂಬಾಬ್ವೆ ಬರೋಬ್ಬರಿ 290 ರನ್‌ಗಳಿಂದ ಗೆಲುವು ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರೀ ಅಂತರದಲ್ಲಿ ಗೆದ್ದ ತಂಡ ಎಂಬ ವಿಶ್ವ ದಾಖಲೆ ಬರೆದಿದೆ. ಈ ಹಿಂದೆ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 273 ರನ್‌ಗಳಿಂದ ಭರ್ಜರಿ ಜಯ ಕಂಡಿತ್ತು.

ಜಿಂಬಾಬ್ವೆ ಇನ್ನಿಂಗ್ಸ್‌ನಲ್ಲಿ 27 ಸಿಕ್ಸರ್‌ಗಳು ದಾಖಲಾಗಿವೆ. ಇದು ಟಿ20 ಕ್ರಿಕೆಟ್‌ನಲ್ಲಿ ಯಾವ ತಂಡ ಹೊಡೆದ ಗರಿಷ್ಠ ಸಿಕ್ಸರ್‌ಗಳ ಸಂಖ್ಯೆಯಾಗಿದೆ. ಈ ಮೊದಲು ನೇಪಾಳ 26 ಸಿಕ್ಸರ್‌ಗಳನ್ನು ಬಾರಿಸಿತ್ತು.

Story first published: Wednesday, October 23, 2024, 23:31 [IST]
Other articles published on Oct 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+