ಕಿತ್ತುಹೋದ ಶೂನಲ್ಲಿಯೇ ಆಟವಾಡುತ್ತಿದ್ದೇವೆ; ಅಂತಾರಾಷ್ಟ್ರೀಯ ಕ್ರಿಕೆಟಿಗನ ಅಳಲು

ಕ್ರಿಕೆಟಿಗರ ಜೀವನ ಜನರು ತಿಳಿದುಕೊಂಡಿರುವಂತಿಲ್ಲ, ಕ್ರಿಕೆಟಿಗ ಎಂದ ಕೂಡಲೇ ಜನರು ದೊಡ್ಡ ಮಟ್ಟದ ಸಂಭಾವನೆ, ಐಷಾರಾಮಿ ಜೀವನ ಹಾಗೂ ಬೇಕಾದ ಸವಲತ್ತುಗಳೆಲ್ಲಾ ಸಿಗುತ್ತವೆ ಎಂದುಕೊಂಡಿರುತ್ತಾರೆ. ಆದರೆ ಕೆಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಪಾಲಿಗೆ ಈ ಅಂಶಗಳಾವುವು ಇರುವುದಿಲ್ಲ. ಹೌದು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದರೂ ಸಹ ಸರಿಯಾದ ಸವಲತ್ತುಗಳಿಲ್ಲದೆ ದಿನನಿತ್ಯ ಸಂಕಷ್ಟಗಳನ್ನು ಎದುರಿಸುತ್ತಿರುವ ಆಟಗಾರರು ಇಂದಿಗೂ ಇದ್ದಾರೆ.
ಇದಕ್ಕೆ ಉದಾಹರಣೆ ಜಿಂಬಾಬ್ವೆ ತಂಡದ ಆಟಗಾರ ರ‍್ಯಾನ್ ಬರ್ಲ್. ಹೌದು ಶನಿವಾರ ಜಿಂಬಾಬ್ವೆ ತಂಡದ ಆಟಗಾರ ರ‍್ಯಾನ್ ಬರ್ಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ತಂಡದ ಆಟಗಾರರ ಕಷ್ಟದ ಕುರಿತು ಟ್ವೀಟ್‌ವೊಂದನ್ನು ಮಾಡುವುದರ ಮೂಲಕ ನೆಟ್ಟಿಗರನ್ನು ಭಾವುಕರನ್ನಾಗಿಸಿದ್ದಾರೆ. ತಮಗೆ ಪಂದ್ಯವನ್ನಾಡಲು ಸರಿಯಾದ ಶೂ ಇಲ್ಲದೇ ಇರುವ ಪರಿಸ್ಥಿತಿಯನ್ನು ತನ್ನ ಟ್ವೀಟ್ ಮೂಲಕ ತಿಳಿಸಿರುವ ರ‍್ಯಾನ್ ಬರ್ಲ್ ಸದ್ಯ ಚರ್ಚೆಗೀಡಾಗಿದ್ದಾರೆ.
'ಪ್ರತಿ ಸರಣಿ ಮುಗಿದ ಬಳಿಕವೂ ನಮ್ಮ ಕಿತ್ತುಹೋದ ಶೂಗಳನ್ನು ನಾವೇ ಅಂಟಿಸಿಕೊಳ್ಳಬೇಕು ಮತ್ತು ಹೊಲಿದುಕೊಳ್ಳಬೇಕು, ಯಾರಾದರೂ ನಮಗೆ ಶೂ ಪ್ರಾಯೋಜಕತ್ವವನ್ನು ವಹಿಸಿಕೊಂಡರೆ ಈ ಕಷ್ಟ ಇರುವುದಿಲ್ಲ' ಎಂದು ತಮ್ಮ ಕಿತ್ತುಹೋದ ಶೂ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಬರೆದುಕೊಂಡು ಸಹಾಯ ಕೇಳಿದ್ದಾರೆ ರ‍್ಯಾನ್ ಬರ್ಲ್. ಸದ್ಯ ರ‍್ಯಾನ್ ಬರ್ಲ್ ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಜಿಂಬಾಬ್ವೆ ತಂಡದ ಆಟಗಾರರ ಈ ಪರಿಸ್ಥಿತಿ ಕಂಡು ಕ್ರೀಡಾಭಿಮಾನಿಗಳು ಮರುಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications